ಮಣಿಪುರ ಹಿಂಸಾಚಾರ: ಸಚಿವೆಯ ಬಂಗಲೆಗೆ ದುಷ್ಕರ್ಮಿಗಳಿಂದ ಬೆಂಕಿ

ಗುವಾಹಟಿ: ಮಣಿಪುರ ಹಿಂಸಾಚಾರ ಪರಿಸ್ಥಿತಿಗೆ ಸವಾಲೆಂಬಂತಿದೆ. ಹಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಇದೀಗ ವಿಕೋಪಕ್ಕೆ ತಿರುಗಿದ್ದು, ಸಚಿವೆಯ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ. ಸಚಿವರ ಅಧಿಕೃತ ನಿವಾಸಕ್ಕೆ ದುಷ್ಕರ್ಮಿಗಳ ಗುಂಪು ಬುಧವಾರ ಬೆಂಕಿ ಹಚ್ಚಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಲಂಫೇಲ್ ಪ್ರದೇಶದಲ್ಲಿರುವ ಕೈಗಾರಿಕಾ ಸಚಿವ ನೆಮ್ಚಾ ಕಿಪ್ಗೆನ್ ಅವರ ಬಂಗಲೆ ಮೇಲೆ ಈ ದಾಳಿ ನಡೆದಿದೆ. ಈ ಕಟ್ಟಡದಲ್ಲಿ ಯಾರು ಇಲ್ಲದೇ ಇರುವುದರಿಂದ ಭಾರೀ ಅನಾಹುತ ತಪ್ಪಿದೆ. ಮೈಟಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆ ಸಂದರ್ಭದಲ್ಲಿ ಸರ್ಕಾರದ ವಿರುದ್ದದ ಆಕ್ರೋಶವನ್ನು ಕಿಡಿಗೇಡುಗಳು ಈ ರೀತಿ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿಯಲ್ಲಿ ಅವಾಂತರ; ಮಕ್ಕಳು ಸ್ವಲ್ಪದರಲ್ಲೇ ಪಾರು

ದೊಡ್ಡಬಳ್ಳಾಪುರ: ಅಂಗನವಾಡಿ ಕಟ್ಟಡದ ಮುಂಭಾಗದ ಸಜ್ಜೆಯ ಸಿಮೆಂಟ್ ಪ್ಲಾಸ್ಟಿಂಗ್ ಹೊದಿಕೆ ಕುಸಿದು ಬಿದ್ದಿರುವ ಘಟನೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಅಂಗನವಾಡಿಯಲ್ಲಿದ್ದ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ದೊಡ್ಡಬೆಳವಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿನ ಅಂಗನವಾಡಿಯಲ್ಲಿ 10ಕ್ಕೂ ಹೆಚ್ಚು ಮಕ್ಕಳು ಶಾಲಾ ಪೂರ್ವ ಕಲಿಯಲ್ಲಿ ತೊಡಗಿದ್ದಾರೆ. ಎಂದಿನಂತೆ ಮಂಗಳವಾರ ಸಹ ಮಕ್ಕಳು ಅಂಗನವಾಡಿಗೆ ಬಂದಿದ್ದು, ಕಟ್ಟಡದ ಒಳಗೆ ಕುಳಿತಿದ್ದಾರೆ. ಇದರ ಬೆನ್ನಲ್ಲೇ ಅಂಗನವಾಡಿ ಬಾಗಿಲಿನ ಮುಂಭಾಗದ ಸಜ್ಜೆಗೆ ಪ್ಲಾಸ್ಟರಿಂಗ್ ಮಾಡಿದ್ದ ಸಿಮೆಂಟ್ ಕುಸಿದು ಬಿದ್ದಿದೆ. ಮಕ್ಕಳು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಬೆಚ್ಚಿಬಿದ್ದಿದ್ದಾರೆ. ಸುದ್ದಿ ತಿಳಿದು ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದು, ಅಪಾಯಕಾರಿಯಾಗಿದ್ದ ಸಜ್ಜೆಯ ಸಿಮೆಂಟ್ ಹೊದಿಕೆಯನ್ನು ತೆರವು ಮಾಡಿದ್ದಾರೆ. ಘಟನೆ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡ ಸ್ಥಳೀಯ ಮುಖಂಡರಾದ ಚೆನ್ನೇಗೌಡ ತೀವ್ರ ಬೇಸರ ವ್ಯಕ್ತಪಡಿಸಿದರು. ಗುಣಮಟ್ಟದ ಕಟ್ಟಡ ವಿಲ್ಲದಿದ್ದರೂ, ಬಣ್ಣ ಬಳಿದು ಮಕ್ಕಳ ಪ್ರಾಣಹರಣಕ್ಕೆ ಅಧಿಕಾರಿಗಳು…

40% ಆರೋಪದ ಬಗ್ಗೆ ತನಿಖೆ ನಡೆಸಿ; ಡಿಕೆಶಿಗೆ ಹೆಚ್ಡಿಕೆ ಸವಾಲ್ 

ರಾಮನಗರ: ಕಾಂಗ್ರೆಸ್ ಸರಕಾರದ ವಿರುದ್ಧ ಪರ್ಸಂಟೇಜ್ ಆರೋಪ ಮಾಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಆರೋಪಗಳ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಿ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ,: ಹಿಂದೆ ಇದೇ ಜನ ಬಿಜೆಪಿ ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದರು. ಆ ಆರೋಪವನ್ನು ಅವರು ಸಾಬೀತು ಮಾಡಿದ್ದರಾ? ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರಾ? ಈಗ ನೋಡಿದರೆ ನನಗೆ ಪುಕ್ಕಟೆ ಸಲಹೆ ನೀಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. ಈಗ ಕಾಂಗ್ರೆಸ್ ನವರದ್ದೇ ಸರ್ಕಾರ ಇದೆ. 40% ವಿಚಾರವನ್ನು ತನಿಖೆ ಮಾಡಿಸಲಿ, ಸತ್ಯ ಜನರ ಮುಂದೆ ಇಡಲಿ. ಆರೋಪ ಮಾಡಿದವರ ಬಳಿ ಸಾಕ್ಷ್ಯ ಇರಲೇಬೇಕಲ್ಲವೇ? ಗುತ್ತಿಗೆದಾರರ ಸಂಘದವರು ದೂರು ಕೊಟ್ಟಿದ್ದರಲ್ಲ, ಅವರು ಸಾಕ್ಷಿ ಇಟ್ಟಿದ್ರಾ.? ಲೋಕಾಯುಕ್ತಕ್ಕೆ ದೂರು ನೀಡಲು…

ಸದ್ದಿಲ್ಲದೆ ಟೋಲ್ ಹೆಚ್ಚಳ; ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ವಾಹನ ಸಂಚಾರ ದುಬಾರಿ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ವಾಹನಗಳ ಓಡಾಟ ಮತ್ತಷ್ಟು ದುಬಾರಿಯಾಗಿದೆ. ಹೆದ್ದಾರಿ ಪ್ರಾಧಿಕಾರವು ಶೇ.22ರಷ್ಟು ಟೋಲ್ ದರ ಏರಿಕೆ ಮಾಡಿದೆ. ಈ ಟೋಲ್ ದರ ದಿಢೀರ್ ಹೆಚ್ಚಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಏಕಮುಖ ಸಂಚಾರಕ್ಕೆ ಟೋಲ್ ದರ ಹೆಚ್ಚಳ ಹೀಗಿದೆ:  ಕಾರ್, ವ್ಯಾನ್‌, ಜೀಪ್‌: 135 ರೂ.ನಿಂದ 165ಕ್ಕೆ ಏರಿಕೆ ಲಘು ವಾಹನ, ಮಿನಿ ಬಸ್‌ : 220 ರೂ. ನಿಂದ 270ಕ್ಕೆ ಏರಿಕೆ ಟ್ರಕ್‌, ಬಸ್, 2 ಆಕ್ಸೆಲ್‌ ವಾಹನ : 460 ರೂ. ನಿಂದ 565ಕ್ಕೆ ಏರಿಕೆ 3 ಆಕ್ಸೆಲ್ ವಾಣಿಜ್ಯ ವಾಹನ : 500 ರೂ. ನಿಂದ 615ಕ್ಕೆ ಏರಿಕೆ ಭಾರಿ ವಾಹನ: 720 ರೂ.ನಿಂದ 885ಕ್ಕೆ ಏರಿಕೆ 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನ:  880 ರೂ. ನಿಂದ 1,080ಕ್ಕೆ ಏರಿಕೆ

ವಿದ್ಯುತ್ ದರ ಏರಿಕೆ; ಸಿದ್ದು ಸರ್ಕಾರದ ವಿರುದ್ದ ಆರಂಭದಲ್ಲೇ ಜನಾಕ್ರೋಶದ ಭುಗಿಲು

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನತೆಗೆ ಆರಂಭದಲ್ಲೇ ಶಾಕ್ ಕೊಟ್ಟಿದೆ. ಷರತ್ತು, ಸರಾಸರಿ ಸೂತ್ರ ಮುಂದಿಟ್ಟು ‘ಗ್ಯಾರೆಂಟಿ’ ಜಾರಿಯ ವಿಚಾರದಲ್ಲಿ ಕಣ್ಣಾಮುಚ್ಚಾಳೆ ಆಡುತ್ತಿರುವ ಸಿದ್ದರಾಮಯ್ಯ ಸರ್ಕಾರ, ಉಚಿತ ವಿದ್ಯುತ್ ವಿಚಾರದಲ್ಲಿ ಬಡವರ ಪಾಲಿಗೆ ನಿರಾಶಾದಾಯಕ ನಡೆ ಇಟ್ಟಿದೆ ಎಂಬುದೇ ವಿಷಾದನೀಯ ಸಂಗತಿ. ಅದೇ ಹೊತ್ತಿಗೆ ದರ ಏರಿಕೆ ಮೂಲಕ ಸರ್ಕಾರ ಮತ್ತೊಂದು ವಿದ್ಯುತ್ ಶಾಕ್ ಕೊಟ್ಟಿದೆ. ಕಾಲಕಾಲಕ್ಕೆ ವಿದ್ಯುತ್ ದರ ಏರಿಕೆ ಮಾಡುವುದು ಆಡಳಿತಾತ್ಮಕ ನಿರ್ದಾರ ಎಂಬುದರಲ್ಲಿ ಎರಡು ಮಾಎಇಲ್ಲ. ಆದರೆ ಈ ಬಾರಿ ವಿದ್ಯುತ್ ದರ ಏರಿಕೆ ಮಾಡಿರುವ ವೈಖರಿ ಮಾತ್ರ ಆಕ್ಷೇಪಾರ್ಹ. ವಿಧಾನಸಭಾ ಚುನಾವಣೋತ್ತರದಲ್ಲಿ ನೀಡಲಾದ ಮೊದಲ ವಿದ್ಯುತ್ ಬಿಲ್ ರಾಜ್ಯದ ಜನರಿಗೆ ಆಘಾತ ತಂದಿದೆ. ದಿಢೀರ್ ದುಪ್ಪಟ್ಟಾಗಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಬಿತ್ತರಿಸುತ್ತಿದ್ದಂತೆಯೇ ರಾಜಕಾರಣದಲ್ಲೂ ಸಙಚಲನ ಸೃಷ್ಟಿಯಾಗಿದೆ. ಈ ವರದಿಗಳನ್ನಾಧರಿಸಿ ಸಾರ್ವಜನಿಕರು ಸರ್ಕಾರದ…

ಘಾಟಿ ಕ್ಷೇತ್ರದಲ್ಲಿ ‘ಕಾದಲನ್’; ಪ್ರಭುದೇವ್ ಸೆಲ್ಫೀಗಾಗಿ ಮುಗಿಬಿದ್ದ ಜನ

ದೊಡ್ಡಬಳ್ಳಾಪುರ: ಭಾರತದ ಮೈಕೆಲ್‌ ಜಾಕ್ಸನ್‌ ಎಂದು ಖ್ಯಾತರಾದ ಖ್ಯಾತ ಬಹುಭಾಷಾ ಚಲನಚಿತ್ರ ನಟ, ನಿರ್ದೇಶಕ, ಕೊರಿಯೊಗ್ರಾಫರ್ ಪ್ರಭುದೇವ ಅವರು ಸೋಮವಾರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ದೇವಾಲಯದ ವತಿಯಿಂದ ನಟ ಪ್ರಭುದೇವ ಅವರನ್ನು ಸನ್ಮಾನಿಸಿ ಪ್ರಸಾದ ವಿತರಿಸಲಾಯಿತು. ನಟ ಪ್ರಭುದೇವ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯ ಸೇರಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಪ್ರಭುದೇವ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು‌‌ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಾಹಕ‌ ಅಧಿಕಾರಿ ಕೃಷ್ಣಪ್ಪ, ಪ್ರಧಾನ‌ ಅರ್ಚಕ‌ ನಾಗೇಂದ್ರ ಶರ್ಮಾ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ?  ಇದು ಗಾಳಿಸುದ್ದಿ ಎಂದ ಹೆಚ್ಡಿಕೆ

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಚರ್ಚೆ ವಿಚಾರದ ಬಗ್ಗೆ ಖಡಕ್ ಆಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು; ಇದೆಲ್ಲಾ ಗಾಳಿ ಸುದ್ದಿ, ಆ ರೀತಿಯ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚನ್ನಪಟ್ಟಣದಲ್ಲಿ ಸೋಮವಾರ ಕೆಡಿಪಿ ಸಭೆಯಲ್ಲಿ ಭಾಗವಹಿಸುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು. ರಾಜಕಾರಣದಲ್ಲಿ ಊಹಾಪೋಹ ಮಾಮೂಲಿ, ಈ ವಿಚಾರವನ್ನು ನನ್ನ ಮುಂದೆ ಯಾರೂ ಪ್ರಸ್ತಾಪ ಮಾಡಿಲ್ಲ. ಲೋಕಸಭಾ ಚುನಾವಣೆ ಬಗ್ಗೆ ನಾನು ಜಿಲ್ಲಾವಾರು ಸಭೆ ನಡೆಸಿ.ಗೆದ್ದ ಸೋತ ಅಭ್ಯರ್ಥಿಗಳ ಜತೆ ಮಾತನಾಡಿದ್ದೇನೆ. ಯಾವ ರೀತಿ ಚುನಾವಣೆ ಎದುರಿಸಬೇಕು ಎಂಬುದರ ಕುರಿತು ರೂಪುರೇಷೆ ಸಿದ್ಧ ಮಾಡುತ್ತಿದ್ದೇವೆ ಎಂದು ಅವರು ನೇರವಾಗಿ ಹೇಳಿದರು. ನೀವು ರಾಷ್ಟ್ರ ರಾಜಕಾರಣದ ಬಗ್ಗೆ ಒಲವು ವಿಚಾರ ಹೊಂದಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು; ನನಗೆ ರಾಷ್ಟ್ರ ರಾಜಕಾರಣದ ಮೇಲೆ ಒಲವಿಲ್ಲ. ಕಳೆದ ಬಾರಿಯೂ ನನಗೆ…

‘ಶಕ್ತಿ’ ಗ್ಯಾರೆಂಟಿ ಗೊಂದಲ; ಕರಾವಳಿ ಮಂದಿಯನ್ನು ವಾಚಿಸಿತೇ ಸಿದ್ದು ಸರ್ಕಾರ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದೇ ‘ಗ್ಯಾರೆಂಟಿ’ಯಿಂದ ಎಂಬುದು ಸ್ಪಟಿಕ ಸತ್ಯ. ಇದೀಗ ಸರ್ಕಾರ ಉಳಿದರೂ, ವರ್ಚಸ್ಸು ಉಳಿಸಿಕೊಂಡರೂ ಅದು ‘ಗ್ಯಾರೆಂಟಿ’ಯಿಂದಲೇ. ಆದರೆ ಈ ಭರವಸೆಗಳ ವಿಚಾರದಲ್ಲಿ ಅಪಸ್ವರಗಳು, ಅಪವಾದಗಳು ಮಾರ್ದನಿಸುತ್ತಿರುವುದು ಕುತೂಹಲಕಾರಿ ಬೆಳವಣಿಗೆ. ಚುನಾವಣೆಗಳಿಗೆ ಮುನ್ನ ಪ್ರದೇಶ ಕಾಂಗ್ರೆಸ್ ಪಕ್ಷ ಐದು ಪ್ರಮುಖ ‘ಗ್ಯಾರೆಂಟಿ’ ಭರವಸೆಗಳನ್ನು ನೀಡಿತ್ತು. ಈ ಪೈಕಿ ನಾರಿಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಅನಾವರಣವಾಗಿದೆ. ಆದರೆ, ಮುನ್ನುಡಿ ಬರೆದಾಗಲೇ ಭಾರೀ ಪ್ರಚಾರ ಗಿಟ್ಟಿಸಿಕೊಂಡಿರುವ ಈ ‘ಶಕ್ತಿ’ ಕೊಡುಗೆ ಕರಾವಳಿ ಮಲೆನಾಡಿನ ಮಂದಿಗೆ ಮರೀಚಿಕೆಯಾಗಿದೆ. KARNATAKA SHAKTI GUARANTEE LAUNCH:#CongressGuarantee: 📌CM Siddaramaiah, DK, CS Vandita Sharma, & others leaves to MAJESTIC'S KSRTC BUS STATION TO LAUNCH #CongressShaktiToWomen Henceforth, for the Next 5-Years across state all women of KA will travel…

ಮಹಿಳೆಯರ ‘ಉಚಿತ ರಥ’ಗಳು ಹೀಗಿವೆ; ‘ಶಕ್ತಿ’ ಯೋಜನೆ ಪರಿಪೂರ್ಣ ಯಶಸ್ಸಿಗೆ KSRTC ಕಾರ್ಯತಂತ್ರ..

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆ ದೊರೆತಾಗಿದೆ. ರಾಜ್ಯದ ಇತಿಹಾಸದಲ್ಲಿ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಗ್ಯಾರೆಂಟಿ’ ಯೋಜನೆ ಜಾರಿ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಚಾಲನೆ ನೀಡಿದ್ದಾರೆ. ವಿಧಾನಸೌಧದ ಗ್ರಾಂಡ್‌ ಸ್ಟೆಪ್ಸ್‌ ಮುಂಭಾಗ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಜಾರಿಗೊಳಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಕಲ್ಪಿಸುವ ಮಹತ್ವಾಕಾಂಕ್ಷೆಯ “ಶಕ್ತಿ” ಯೋಜನೆ ಉದ್ಘಾಟಿಸಿದರು. ಸ್ಥಳೀಯ ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹಿತ ಸಚಿವರನೇಕರು ಉಪಸ್ಥಿತರಿದ್ದರು. ರಾಜಧಾನಿಯಲ್ಲಷ್ಟೇ ಅಲ್ಲ, ವಿವಿಧ ಜಿಲ್ಲಾ ಕೇಂದ್ರಗಳಲ್ಲೂ. ಶಕ್ತಿ ಯೋಜನೆಯನ್ನು ಉದ್ಘಾಟಿಸಲಾಯಿತು. ‘ಶಕ್ತಿ’ ಯೋಜನೆಯ ಪ್ರಮುಖ ಅಂಶಗಳು : ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಈ ಸೌಲಭ್ಯ ಪಡೆಯಲು ಅರ್ಹರು. ʼ ಶಕ್ತಿ ಯೋಜನೆʼಯ ಸೌಲಭ್ಯವು…