ರೂಪಾಯಿ ಚಿಹ್ನೆ ಬದಲಾವಣೆ: ಎಂ.ಕೆ.ಸ್ಟಾಲಿನ್ ಸಮರ್ಥನೆ

ಚೆನ್ನೈ: ತಮಿಳುನಾಡು ರಾಜ್ಯ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆ (₹) ಅನ್ನು ತಮಿಳು ಅಕ್ಷರ ‘ರು’ (‘ರುಬಾಯಿ’ ನಿಂದ, ಅಂದರೆ ರೂಪಾಯಿ) ನೊಂದಿಗೆ ಬದಲಾಯಿಸುವ ತಮ್ಮ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸಮರ್ಥಿಸಿಕೊಂಡಿದ್ದಾರೆ. ತಮಿಳು ಭಾಷೆಯನ್ನು ವಿರೋಧಿಸುವವರು ಈ ವಿಷಯವನ್ನು ಅತಿರೇಕಕ್ಕೆ ತಳ್ಳಿದ್ದಾರೆ ಎಂದು ಅವರು ವಾದಿಸಿದ್ದಾರೆ. ಮಾರ್ಚ್ 14 ರಂದು ಮಂಡಿಸಲಾದ ತಮಿಳುನಾಡು ಬಜೆಟ್ 2025-26 ಲೋಗೋದಿಂದ ರೂಪಾಯಿ ಚಿಹ್ನೆಯನ್ನು ತೆಗೆದುಹಾಕುವ ನಿರ್ಧಾರವು ಬಿಜೆಪಿ ಮತ್ತು ಎಐಎಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ರೂಪಾಯಿ ಲೋಗೋ ವಿಚಾರದ್ಲಲಿನ ಚರ್ಚೆಗಳ ಕುರಿತಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಈ ಕ್ರಮವು ತಮಿಳುನಾಡಿನ ಭಾಷಾ ನೀತಿಗೆ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಸ್ಟಾಲಿನ್ ಪ್ರತಿಪಾದಿಸಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಹಿಂದೆ ಇಂಗ್ಲಿಷ್‌ನಲ್ಲಿ ‘ರೆ’ ಬದಲಿಗೆ ತಮಿಳು ಅಕ್ಷರ ‘ರು’ ಅನ್ನು ಬಳಸಿದ್ದಾರೆ…

“ನಾನು ಸಂಘ, ನನಗೆ ಈ ಸ್ಥಾನ, ಚೈತನ್ಯ ಕೊಟ್ಟಿದ್ದೂ ಸಂಘ”: RSSಗೆ ಕೃತಜ್ಞತೆ ಸಲ್ಲಿಸಿದ ಮೋದಿ

ನವದೆಹಲಿ: ತನ್ನನ್ನು ಈ ಮಟ್ಟಕ್ಕೆ ಬೆಳೆಸಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಜೀವನದಲ್ಲಿದೇಶಭಕ್ತಿ ಬೆಳೆಸುವಂತಾಗಿ, ತಮ್ಮನ್ನು ಪೋಷಿಸಿದ್ದಕ್ಕಾಗಿ ಸಂಘಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪಾಡ್‌ಕ್ಯಾಸ್ಟ್‌ನಲ್ಲಿ AI ಸಂಶೋಧಕ ಮತ್ತು ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸಾಂಘಿಕ ಬದುಕಿನ ಬಗ್ಗೆ ಬೆಳಕುಚೆಲ್ಲಿದರು. ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾದ RSS ತಮ್ಮನ್ನು ಒಬ್ಬ ವ್ಯಕ್ತಿಯಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರು. “RSS ಮೂಲಕ, ನಾನು ಉದ್ದೇಶಿತ ಜೀವನವನ್ನು ಕಂಡುಕೊಂಡೆ. ನಂತರ ಸಂತರ ನಡುವೆ ಸಮಯ ಕಳೆಯುವ ಅದೃಷ್ಟ ಸಿಕ್ಕಿತು, ಅದು ನನಗೆ ಬಲವಾದ ಆಧ್ಯಾತ್ಮಿಕ ಅಡಿಪಾಯವನ್ನು ನೀಡಿತು. ನಾನು ಶಿಸ್ತು ಮತ್ತು ಉದ್ದೇಶಿತ ಜೀವನವನ್ನು ಕಂಡುಕೊಂಡೆ” ಎಂದು ಮೋದಿ ಸಂಘದ ಜೊತೆ ಸಾಗಿಬಂದ ಅರ್ಥಪೂರ್ಣ ಬದುಕಿನ ಬಗ್ಗೆ ಬೆಳಕುಚೆಲ್ಲಿದರು. ಕಳೆದ 100 ವರ್ಷಗಳಲ್ಲಿ RSS…

ಪೊಲೀಸ್ ಅಧಿಕಾರಿಯಿಂದಲೇ ಗೂಂಡಾಗಿರಿ? ವಾಗ್ವಾದದ ಅಖಾಡಕ್ಕಿಳಿದ ವಿಜಯೇಂದ್ರ

ಬೆಂಗಳೂರು: ಚಿತ್ರದುರ್ಗದಲ್ಲಿ PSI ಮೇಲೆ ಮಧುಗಿರಿ ಬಿಜೆಪಿ ಅಧ್ಯಕ್ಷ ಹಲ್ಲೆ ನಡೆಸಿದ್ದಾರೆನ್ನಲಾದ ಪ್ರಕರಣಕ್ಕೆ ಹಠಾತ್ ತಿರುವು ಸಿಕ್ಕಿದೆ. ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯವನ್ನು ಹಂಚಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪೊಲೀಸ್ ಅಧಿಕಾರಿಯೇ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ, ಇದರ ನಡುವೆ ಕೆಲವು ಕೆಳಹಂತದ ಪೊಲೀಸ್ ಅಧಿಕಾರಿಗಳು ಸಾಮಾನ್ಯರು ಹಾಗೂ ಜವಾಬ್ದಾರಿಯುತ ನಾಗರಿಕರ… pic.twitter.com/zf5ZN3pk3J — Vijayendra Yediyurappa (@BYVijayendra) March 15, 2025 ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ…

ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ ಶ್ವಾಸಕೋಶ ಕ್ಯಾನ್ಸರ್ ಅಪಾಯ; ಸಂಶೋಧರು ಹೇಳೋದೇನು?

ನವದೆಹಲಿ: ಪಾಶ್ಚಿಮಾತ್ಯ ಆಹಾರ ಪದ್ಧತಿಯಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬು ಹೆಚ್ಚಾಗಿದ್ದು, ಶ್ವಾಸಕೋಶದಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನವೊಂದು ಬಯಲುಮಾಡಿದೆ. ಈ ಸಂಶೋಧನೆಯು ಕಳಪೆ ಆಹಾರ ಪದ್ಧತಿ ಮತ್ತು ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯಂತಹ ಅಂಗಗಳ ಕ್ಯಾನ್ಸರ್ ನಡುವಿನ ಸಂಬಂಧವನ್ನು ತೋರಿಸಿದೆ. ಹೀಗಾಗಿ ಆಹಾರದ ದೀರ್ಘಕಾಲೀನ ಪರಿಣಾಮದತ್ತ ಅಧ್ಯಯನವು ಬೆಳಕುಚೆಲ್ಲಿದೆ. ‘ಶ್ವಾಸಕೋಶದ ಕ್ಯಾನ್ಸರ್ ಅನ್ನು ಸಾಂಪ್ರದಾಯಿಕವಾಗಿ ಆಹಾರ-ಸಂಬಂಧಿತ ಕಾಯಿಲೆ ಎಂದು ಭಾವಿಸಲಾಗಿಲ್ಲ’ ಎಂದು ಫ್ಲೋರಿಡಾ ವಿಶ್ವವಿದ್ಯಾಲಯದ ಸುಧಾರಿತ ಪ್ರಾದೇಶಿಕ ಜೈವಿಕ ಅಣು ಸಂಶೋಧನಾ ಕೇಂದ್ರದ ಅಸೋಸಿಯೇಟ್ ಪ್ರಾಧ್ಯಾಪಕ ಮತ್ತು ನಿರ್ದೇಶಕ ರಾಮನ್ ಸನ್ ಹೇಳಿದ್ದಾರೆ. . ‘ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಥವಾ ಯಕೃತ್ತಿನ ಕ್ಯಾನ್ಸರ್‌ನಂತಹ ರೋಗಗಳು, ಹೌದು. ಆದಾಗ್ಯೂ, ಶ್ವಾಸಕೋಶದ ಕ್ಯಾನ್ಸರ್‌ಗೆ ಬಂದಾಗ, ಆಹಾರವು ಒಂದು ಪಾತ್ರವನ್ನು ವಹಿಸುತ್ತದೆ ಎಂಬ ಕಲ್ಪನೆಯನ್ನು ವಿರಳವಾಗಿ ಚರ್ಚಿಸಲಾಗುತ್ತದೆ’ ಎಂಬುದು ಸನ್ ಅವರ ಅಭಿಪ್ರಾಯವಾಗಿದೆ. ನೇಚರ್ ಮೆಟಾಬಾಲಿಸಮ್…

ಪಾಕ್ ಇಬ್ಭಾಗಕ್ಕೆ ಬಂಡುಕೋರರು ಪಟ್ಟು: 214 ಸೈನಿಕರ ಹತ್ಯೆ?

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಂಡುಕೋರರು ರೈಲನ್ನು ಅಪಹರಿಸಿದ್ದ ನಂತರ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ. ಸೇನಾಕಾರ್ಯಾಚರಣೆಯಲ್ಲಿ ಒತ್ತೆಯಾಳುಗಳನ್ನು ಬಿಡಿಲೊಂಡ ಬಳಿಕ ಬಲೂಚ್ ಬಂಡುಕೋರರು ಸೇಡು ತೀರಿಸುತ್ತಿದ್ದಾರೆ. ಬಲೂಚಿಸ್ತಾನದ ರಾಜಕೀಯ ಕೈದಿಗಳ ಬಿಡುಗಡೆಗಾಗಿ ಪಾಕಿಸ್ತಾನಕ್ಕೆ 48 ಗಂಟೆಗಳ ಗಡುವು ನೀಡಿದ್ದ ಬಲೂಚ್ ಲಿಬರೇಶನ್ ಆರ್ಮಿ, ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದ 214 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ. ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಬೇಕೆಂದು ಪ್ರತ್ಯೇಕತಾವಾದಿ ಬಲೂಚ್ ಲಿಬರೇಶನ್ ಆರ್ಮಿ ಒತ್ತಾಯಿಸುತ್ತಿದೆ. ಮಂಗಳವಾರ ರೈಲ್ವೆ ಹಳಿಯನ್ನು ಸ್ಫೋಟಿಸಿ ರೈಲನ್ನು ಅಪಹರಿಸಿತ್ತು. ರೈಲಿನಲ್ಲಿದ್ದ 400ಕ್ಕೂ ಹೆಚ್ಚು ಪ್ರಯಾಣಿಕರನ್ನು ಸೇನೆ ಕಾರ್ಯಾಚರಣೆ ನಡೆಸಿ ಬಿಡುಗಡೆ ಮಾಡಿತ್ತು. ಆ ಸಂದರ್ಭದಲ್ಲಿ ಹಲವು ಪಾಕ್ ಸೈಕೀಕರನ್ನು ಬಲೂಚ್ ಲಿಬರೇಶನ್ ಆರ್ಮಿ ಬಂಡೂಕೋರರು ಅಪಹರಿಸಿದ್ದರು. ಇದೀಗ ಈ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಬಂಡೂಕೋರರು ಹೇಳಿದ್ದಾರಾದರೂ ಪಾಕ್ ಆಡಳಿತ ತಳ್ಳಿಹಾಕಿದೆ.