ಜೂನ್ 19ರಂದು ರಾಜ್ಯಸಭೆ ಚುನಾವಣೆ

ಬೆಂಗಳೂರು: ರಾಜ್ಯಸಭೆಯಲ್ಲಿ ತೆರವಾಗಲಿರುವ  18 ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆ ಕುರಿತು ಆಯೋಗ ಆದೇಶ ಪ್ರಕಟಿಸಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ಗುಜರಾತ್’ನಿಂದ ತಲಾ ನಾಲ್ಕು, ಜಾರ್ಖಂಡ್’ನಿಂದ ಎರಡು, ಮಧ್ಯಪ್ರದೇಶ, ರಾಜಸ್ಥಾನದಿಂದ ತಲಾ ಮೂರು, ಮಣಿಪುರ ಹಾಗೂ ಮೇಘಾಲಯದಿಂದ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ. ಈ ವರೆಗೂ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಬಿ.ಕೆ. ಹರಿಪ್ರಸಾದ್, ಪ್ರಭಾಕರ್ ಕೋರೆ, ರಾಜೀವ್ ಗೌಡ ಮತ್ತು ಕುಪೇಂದ್ರ ರೆಡ್ಡಿ ಅವರ ರಾಜ್ಯಸಭೆ ಅವಧಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಅವರಿಂದ ತೆರವಾಗುವ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ಘೋಷಿಸಲಾಗಿದೆ.

  • ಜೂನ್ 9ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ
  • ಜೂನ್ 10ರಂದು ನಾಮಪತ್ರ ಪರಿಶೀಲನೆ
  • ಜೂನ್ 13ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ

ಇದನ್ನೂ ಓದಿ.. ಲಡಾಖ್ ಎಲ್‌ಎ‌ಸಿ ಬಳಿ ಶಸ್ತಾಸ್ರ ಜಮಾವಣೆ; ಚೀನಾ-ಭಾರತ ಸಮರ ಸನ್ನದ್ಧ? 

 

Related posts