ಜಾತಿ ಗಣತಿ ವಿವಾದ: ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕವಾಗಿ ವರದಿ ರೂಪಿಸಲು ಬಿಜೆಪಿ ಆಗ್ರಹ

ಬೆಂಗಳೂರು: ಕೇವಲ ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಮಾಡಿಸಿದ್ದಾರೆ. ಈ ವರದಿಯನ್ನು ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕವಾಗಿ ವರದಿ ರೂಪಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಹಾಗೂ ಧರ್ಮಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಮೊದಲು ರಾಜ್ಯದಲ್ಲಿ ಅತಿ ದೊಡ್ಡ ಜಾತಿ ಲಿಂಗಾಯತರು, ಎರಡನೇ ಅತಿ ದೊಡ್ಡ ಜಾತಿ ಒಕ್ಕಲಿಗರು ಹಾಗೂ ಮೂರನೆಯವರು ದಲಿತರು ಎಂದಿತ್ತು. ಆದರೆ ಈಗ ಮುಸ್ಲಿಮರು ಅತಿ ದೊಡ್ಡ ಜಾತಿ ಎನ್ನಲಾಗಿದೆ. ಮುಸ್ಲಿಮರಲ್ಲೇ ವಿವಿಧ ಜಾತಿಗಳಿದ್ದು, ಅದನ್ನು ಬೇರೆ ಮಾಡಿಲ್ಲ. ಒಕ್ಕಲಿಗರಲ್ಲೇ ಕೆಲವು ಜಾತಿಗಳನ್ನು ವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ ಗೆ ಹೆಚ್ಚು ಮತ ನೀಡುವವರ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲಾಗಿದೆ. ಒಕ್ಕಲಿಗರಿಗೆ, ಲಿಂಗಾಯತರಿಗೆ, ದಲಿತರಿಗೆ ನಾಮ ಹಾಕಿದ್ದಾರೆ ಎಂದು ದೂರಿದರು. ಸಿಎಂ ಸಿದ್ದರಾಮಯ್ಯ ಪಕ್ಷ,…

ತಾಲೂಕು, ಜಿಲ್ಲಾ ಮಟ್ಟದಲ್ಲಿ ಸೇವಾದಳದವರಿಗೂ ಅಧಿಕಾರ ನೀಡಲು ಚಿಂತನೆ

ಬೆಂಗಳೂರು: ಸೇವಾದಳ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಪಕ್ಷದಲ್ಲಿ ನೀವು ಎಲ್ಲರಿಗಿಂತ ಕೊನೆ ಎಂಬ ಭಾವನೆ ಬೇಡ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಸೇವಾದಳದವರಿಗೂ ಅಧಿಕಾರ ನೀಡುವ ಆಲೋಚನೆ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ಭಾನುವಾರ ನಡೆದ ಭಾರತೀಯ ಸೇವಾದಳದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಸಮಾಜ ಸೇವೆ ಮಾಡುವವರನ್ನು ಹೆಚ್ಚು ಗುರುತಿಸುತ್ತದೆ. ಹೀಗಾಗಿ ನಮ್ಮ ಸಮಾಜದಲ್ಲಿ ರಾಮನ ತಂದೆ ದಶರಥ ಮಹಾರಾಜನಿಂಗಿಂತ, ರಾಮನ ಭಂಟ ಹನುಮಂತನ ದೇವಾಲಯಗಳು ಹೆಚ್ಚಾಗಿವೆ. ಅದೇ ರೀತಿ ನೀವು ಕಾಂಗ್ರೆಸ್ ಪಕ್ಷಕ್ಕೆ ಆಧಾರಸ್ತಂಭ. ಇದನ್ನು ಸೇವಾದಳದ ಎಲ್ಲಾ ಕಾರ್ಯಕರ್ತರು ತಲೆಯಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು. “ದೇಶದ ಭದ್ರತೆ ಉದ್ದೇಶದಿಂದ ಸ್ಥಾಪನೆಯಾದ ವಿಭಾಗ ಸೇವಾದಳ. ನೆಹರೂ ಅವರ ಅವಧಿಯಲ್ಲಿ ಪ್ರಾರಂಭವಾಗಿ ಈಗ ಮಲ್ಲಿಕಾರ್ಜುನ ಖರ್ಗೆ ಅವರ…

ಮೈಸೂರು ದಸರಾದಲ್ಲಿ ತುಳುನಾಡ ‘ಕಂಬಳ’ಕ್ಕೆ ಪ್ರಾತಿನಿಧ್ಯ: ಡಿಕೆಶಿ ಘೋಷಣೆ

ಮಂಗಳೂರು: ಈ ವರ್ಷದಿಂದ ದಸರಾ ಕ್ರೀಡಾಕೂಟದಲ್ಲಿ ಕಂಬಳ ಸೇರ್ಪಡೆಗೊಳ್ಳಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಘೋಷಿಸಿದ ನಡೆ ತುಳುನಾಡ ಜನರ ಸಂತಸಕ್ಕೆ ಕಾರಣವಾಗಿದೆ. ಗುರುಪುರ ಮಾಣಿಬೆಟ್ಟು ಗುತ್ತಿನ ಗದ್ದೆಯಲ್ಲಿ ಶನಿವಾರ ಹೊನಲು ಬೆಳಕಿನ “ಗುರುಪುರ ಕಂಬಳೋತ್ಸವ”ದ ಸಮಾರೋಪ ಸಮಾರಂಭದಲ್ಲಿ ಡಿಕೆಶಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಂಬಳ ಕ್ರೀಡೆಯಿಂದ ನಮ್ಮ ಸಂಪ್ರದಾಯ- ಪರಂಪರೆ ಬೆಳೆಯುತ್ತಿದೆ. ಹಾಗಾಗಿ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳವನ್ನು ಸಂರಕ್ಷಿಸಬೇಕಾಗಿದೆ ಎಂದರು. ನಮ್ಮ ಸರ್ಕಾರ ಕಂಬಳಕ್ಕೆ ಪ್ರೋತ್ಸಾಹ ನೀಡುತ್ತದೆ. ಮುಂದಿನ ವರ್ಷ ಮೈಸೂರು ದಸರಾದ ಕ್ರೀಡಾಕೂಟದಲ್ಲಿ ಕಂಬಳ ಆಯೋಜಿಸುತ್ತೇವೆ ಎಂದ ಡಿಕೆಶಿ, ಮುಂದೆ ಇದು ಪರಂಪರೆಯಾಗಿ ಉಳಿದು ಮುಂದುವರಿಯುವ ರೀತಿಯಲ್ಲಿ ಪ್ರೋತ್ಸಾಹಿಸೋಣ ಎಂದರು.

ಜಾತಿ ಜನಗಣತಿ ವರದಿ ಜಾರಿಯಾದರೆ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯ: ಸೋಮಣ್ಣ

ಬೆಂಗಳೂರು: ಜಾತಿ ಜನಗಣತಿ ಕುರಿತ ಕಾಂತರಾಜ್ ವರದಿ ಜಾರಿಯಾದಲ್ಲಿ ಲಕ್ಷಾಂತರ ಜನರಿಗೆ ಅನ್ಯಾಯವಾಗಲುತ್ತದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಾತಿ ಜನಗಣತಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಎಲ್ಲೋ ಕುಳಿತು ತಮಗೆ ಬೇಕಾದಂತೆ ವರದಿ ರೂಪಿಸಲಾಗಿದೆ. ಇದು ಜಾರಿಯಾದರೆ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಇಂತಹ ಮಹಾಪರಾಧ ಮಾಡುವ ಚಿಂತನೆ ಬೇಡ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು. ವಿವಾದಾತ್ಮಕ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯತ್ನಿಸುತ್ತಿದ್ದಾರೆ ಎಂದೂ ಸೋಮಣ್ಣ ಆರೋಪಿಸಿದರು. ಸಚಿವ ವಿ. ಸೋಮಣ್ಣ ಅವರು ಶನಿವಾರ ಹೇಳಿದ್ದಾರೆ.

ಜಾತಿ ಜನಗಣತಿ ಸಮೀಕ್ಷೆ: ವರದಿ ಜಾರಿಯ ವಿಶ್ವಾಸ ಇದೆ ಎಂದ ಕಾಂತರಾಜ್

ಶಿವಮೊಗ್ಗ: ಜಾತಿ ಜನಗಣತಿ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜಾತಿ ಜನಗಣತಿ ವರದಿ ಸೋರಿಕೆಯಾಗಿದೆ ಎಂಬ ಆರೋಪವಂತೂ ವಿವಾದದ ಬಿರುಗಾಳಿ ಎಬ್ಬಿಸಿದೆ. ಈ ನಡುವೆ, ಜಾತಿ ಜನಗಣತಿ ವರದಿ ಸೋರಿಕೆಯಾಗಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಆಯಾಮಗಳಿಂದಲೂ ಜಾತಿ ಜನಗಣತಿ ಸಮೀಕ್ಷೆ ನಡೆಸಲಾಗಿದ್ದು, ವರದಿ ಅವೈಜ್ಞಾನಿಕವಾಗಿದೆ ಎಂಬ ಆರೋಪ ಸರಿಯಲ್ಲ ಎಂದರು. 1931 ರ ನಂತರ ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಕುರಿತು ಯಾವುದೇ ಸಮೀಕ್ಷೆಯನ್ನು ನಡೆಸಲಾಗಿಲ್ಲ, ಹೀಗಾಗಿ 2015 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳಲು ಸಮಿತಿಯನ್ನು ರಚಿಸಿದರು ಎಂದ ಎಚ್.ಕಾಂತರಾಜ್, ಆಯೋಗದ ಶಿಫಾರಸುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತರಲಿದ್ದಾರೆಂಬ ಭರವಸೆಯಿದೆ ಎಂದರು.

ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಅವರ ’45’ ಬಗ್ಗೆ ಹೆಚ್ಚಿದ ಕೌತುಕ

ಮುಂಬೈ: ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ ಬಹುನಿರೀಕ್ಷಿತ ಕನ್ನಡ ಚಿತ್ರ ’45’ ಟೀಸರ್ ಏಪ್ರಿಲ್ 15 ಮತ್ತು 16, 2025 ರಂದು ಭಾರತದಾದ್ಯಂತ ನಾಲ್ಕು ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ. ಏಪ್ರಿಲ್ 15 ರಂದು ಮುಂಬೈನಲ್ಲಿ ಭವ್ಯ ಪ್ರಚಾರದ ಬ್ಲಿಟ್ಜ್ ಪ್ರಾರಂಭವಾಗಲಿದೆ. ನಂತರ ಹೈದರಾಬಾದ್‌ನಲ್ಲಿ ಸಂಜೆ ಆಚರಣೆ ನಡೆಯಲಿದೆ. ಮರುದಿನ ಏಪ್ರಿಲ್ 16 ರಂದು ಬೆಳಿಗ್ಗೆ, ತಂಡವು ಚೆನ್ನೈಗೆ ತೆರಳಲಿದ್ದು, ಕೊಚ್ಚಿಯ ಪಿವಿಆರ್ ಫೋರಂನಲ್ಲಿ ನಡೆಯುವ ಕಾರ್ಯಕ್ರಮದೊಂದಿಗೆ ಪರ್ಯಟನೆಯು ಪರಿಪೂರ್ಣವಾಗಲಿದೆಯಂತೆ. ಮಹತ್ವಾಕಾಂಕ್ಷೆಯ ಸಿನಿಮಾ ಬಿಡುಗಡೆ ಕುರಿತು ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, “ನಾನು ’45’ ಚಿತ್ರಕ್ಕೆ ನನ್ನ ಹೃದಯ ಮತ್ತು ಆತ್ಮವನ್ನು ಧಾರೆಯೆರೆದಿದ್ದೇನೆ. ಇದು ಅಪಾರ ಪ್ರೀತಿ, ದೃಷ್ಟಿ ಮತ್ತು ಉತ್ಸಾಹದಿಂದ ಹೇಳಲಾದ ಕಥೆ. ಮಾಂತ್ರಿಕ ಆದರೆ ಶಕ್ತಿಶಾಲಿ ಎಂದು ಭಾವಿಸುವ ಜಗತ್ತನ್ನು ರಚಿಸಲು ಈ ಮಟ್ಟದ ಪ್ರತಿಭೆಯನ್ನು ಒಟ್ಟುಗೂಡಿಸುವುದು ಒಂದು ಕನಸಾಗಿದೆ. ಈ ’45 ಪ್ಯಾನ್ ಇಂಡಿಯಾ…

ಶ್ರೀ ಕಟೀಲು ಕ್ಷೇತ್ರದಲ್ಲಿ ನಿತ್ಯವೂ ಕೈಂಕರ್ಯ, ಜ್ಞಾನಾರ್ಜನೆ

ಮಂಗಳೂರು: ‘ಕಟೀಲು’ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಉರಾದರೂ ಇಲ್ಲಿನ ದೇಗುಲವು ಜಗದಗಲ ಖ್ಯಾತಿಯನ್ನು ಹೊಂದಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮಂಗಳೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ನಂದಿನಿ ನದಿಯ ಮಧ್ಯೆ ಇದ್ದು, ಹಚ್ಚ ಹಸಿರಿನ ವನಸಿರಿಯ ಸಿಂಗಾರದಿಂದಾಗಿ ಪ್ರವಾಸಿಗರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ನಿತ್ಯವೂ ಭಕ್ತಸಾಗರದಿಂದ ತುಂಬಿ ತುಳುಕುತ್ತಿರುವ ಕಟೀಲು ದೇಗುಲವು ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲಗಳಲ್ಲೊಂದು. ಇದೀಗ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ವಾರ್ಷಿಕ ಅದ್ಧೂರಿ ಜಾತ್ರೆಗೆ ಸಾಕ್ಷಿಯಾಗುತ್ತಿದೆ. ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ 8 ದಿನಗಳ ಕಾಲ ಈ ವೈಭವ ನೆರವೇರುತ್ತದೆ. ವೈಶಿಷ್ಟ್ಯಗಳೊಂದಿಗೆ ಮೊದಲ ದಿನ ಕೋಡಿ (ಧ್ವಜ) ಏರಿಸುವ ಮೂಲಕ ಜಾತ್ರೆ ಆರಂಭವಾಗುತ್ತದೆ. 3ನೇ ದಿನ ದೇವರ ಮೂಡು ಸವಾರಿ (ಮೂಡಣದ ದಿಕ್ಕಿಗೆ) ನಡೆಯುತ್ತದೆ.…

ಪವನ್ ಕಲ್ಯಾಣ್ ಅವರ ‘ಹರಿ ಹರ ವೀರ ಮಲ್ಲು’ ಮೇ 9ರಂದು ಬಿಡುಗಡೆ

ಮುಂಬೈ: ಹಲವು ವರ್ಷಗಳ ನಿರೀಕ್ಷೆ ಮತ್ತು ವದಂತಿಗಳ ನಂತರ, ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರ “ಹರಿ ಹರ ವೀರ ಮಲ್ಲು” ಈ ಬೇಸಿಗೆಯಲ್ಲಿ ತೆರೆಕಾಣಲಿದೆ. ಮೇ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ವೀರ ಮಲ್ಲು ಆಗಿ ರೂಪಾಂತರಗೊಳ್ಳುವುದನ್ನು ನೋಡಲಾಗುವುದು – ಶತಮಾನಗಳಿಂದ ಕಾಯುತ್ತಿರುವ ದಂತಕಥೆ ಇದಾಗಿದೆ ಎಂದು ಚಿತ್ರ ತಂಡ ಹೇಳಿದೆ. ಮೊಘಲರ ಯುಗದಲ್ಲಿನ ಯೋಜನೆಯು, ಮೊಘಲರಿಂದ ಕೊಹಿನೂರ್ ವಜ್ರವನ್ನು ಕದಿಯುವ ಕೆಲಸವನ್ನು ವಹಿಸಿಕೊಂಡಿರುವ ಅಪರಾಧಿ ವೀರ ಮಲ್ಲುವಿನ ಕಥೆಯನ್ನು ಹಂಚಿಕೊಳ್ಳುತ್ತದೆ. ಅಡೆತಡೆಗಳು ಮತ್ತು ರಾಜಕೀಯ ಬದ್ಧತೆಗಳ ನಡುವೆ ಚಿತ್ರವನ್ನು ನಿರ್ದೇಶಿಸಿದ ಎ.ಎಂ. ಜ್ಯೋತಿ ಕೃಷ್ಣ ಅವರ ನೇತೃತ್ವದಲ್ಲಿ, “ಹರಿ ಹರ ವೀರ ಮಲ್ಲು” ನಿರ್ಮಾಣಕ್ಕೆ ಈಗ ಅಂತಿಮ ಸ್ಪರ್ಶ ಸಿಕ್ಕಿದೆ. <blockquote class=”twitter-tweet”><p lang=”en” dir=”ltr”>Re-recording, Dubbing, and VFX are in full…

ವಕ್ಫ್ ತಿದ್ದುಪಡಿ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ; ಧಗಧಗಿಸಿದ ಪಶ್ಚಿಮ ಬಂಗಾಳ

ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೇಳುವಂತೆ ಮಾಡಿದೆ. ಅಲ್ಪಸಂಖ್ಯಾತ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹಲವಾರು ಭಾಗಗಳನ್ನು ಆವರಿಸಿರುವ ಹಿಂಸಾಚಾರ ಶನಿವಾರದಂಡು ಮತ್ತೆ ಮೂವರನ್ನು ಬಲಿತೆಗೆದುಕೊಂಡಿದೆ. ಶುಕ್ರವಾರ ಸುಟಿಯ ಸಜುರ್ ಕ್ರಾಸಿಂಗ್‌ನಲ್ಲಿ ನಡೆದ ಹಿಂಸಾಚಾರದ ಇಬ್ಬರ ಸಾವಿಗೆ ಕಾರಣವಾಯಿತೆಂದು ಹೇಳಲಾಗಿದೆ. ಬಿಜೆಪಿಯ ಮಾಹಿತಿ ತಂತ್ರಜ್ಞಾನ ಕೋಶದ ಮುಖ್ಯಸ್ಥ ಮತ್ತು ಪಶ್ಚಿಮ ಬಂಗಾಳದ ಪಕ್ಷದ ಕೇಂದ್ರ ವೀಕ್ಷಕ ಅಮಿತ್ ಮಾಳವಿಯಾ ಅವರು ಹತ್ಯೆಗೀಡಾದ ತಂದೆ ಮತ್ತು ಮಗನ ಶವಗಳನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಪ್ರತಿಭಟನೆಗಳ ಹೆಸರಿನಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಈ ನಡುವೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 118 ಜನರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಾವೇದ್ ಶಮೀಮ್ ತಿಳಿಸಿದ್ದಾರೆ.

ಶ್ರೀ ಕಟೀಲು ಕ್ಷೇತ್ರ ವೈಭವವನ್ನು ಸಾಕ್ಷೀಕರಿಸಿದ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..

ಮಂಗಳೂರು: ಪುರಾಣ ಪ್ರಸಿದ್ಧ ಶ್ರೀ ಕಟೀಲು ಕ್ಷೇತ್ರದಲ್ಲಿ ಇದೀಗ ವೈಭವದ ಜಾತ್ರಾ ಮಹೋತ್ಸವದ ಸಡಗರ ಆವರಿಸಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ. ಕಟೀಲು ಕ್ಷೇತ್ರದ ಜಾತ್ರೆಯ ಸಂದರ್ಭದಲ್ಲೇ ಕರಾವಳಿಯ ಯುವಜನ ಸಮೂಹ ಶ್ರೀ ದುರ್ಗಾಪರಮೇಶ್ವರಿಯ ಮಹಿಮೆಯ ಬಗ್ಗೆ ಬೆಳಕು ಚೆಲ್ಲುವ ಹಾಡೊಂದನ್ನು ಲೋಕಾರ್ಪಣೆ ಮಾಡಿ ಗಮನಸೆಳೆದಿದ್ದಾರೆ. ಈ ಭಕ್ತಿ ಗಾನಕ್ಕೆ ಆಸ್ತಿಕರ ಪಾಳಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೆ ಪ್ರಯುಕ್ತ ದೇವಲೋಕ ಕ್ರಿಯೇಷನ್ಸ್ ವತಿಯಿಂದ ‘ಅಪ್ಪೆ ಭ್ರಾಮರಿಯೇ’ ಎಂಬ ಹೊಸ ಭಕ್ತಿಗೀತೆಯನ್ನು ಶನಿವಾರ ಬೆಳಿಗ್ಗೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಗಿದೆ. ಜ್ಯೋತಿಗುಡ್ಡೆ ಕ್ಷೇತ್ರದ ಅರ್ಚಕಿ ಗುಲಾಬಿ ಅಮ್ಮನವರು ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿದರು. ಸಾಫಲ್ಯ ಸೇವಾ ಸಂಘ (ರಿ) ಮುಂಬೈ ಇದರ ಅಧ್ಯಕ್ಷ ಶ್ರೀನಿವಾಸ…