ಕಂಬಳ ವೀರರದ್ದೇ ಸಿನಿಮಾ; ಕನ್ನಡ ಮತ್ತು ತುಳು ಭಾಷೆಗಳಲ್ಲಿ ಜಾಕಿಗಗಳದ್ದೇ ಓಟ

ಬೆಂಗಳೂರು: ಕಂಬಳದಲ್ಲಿ ದಾಖಲೆ ವೀರನೆನಿಸಿರುವ ಶ್ರೀನಿವಾಸಗೌಡ ಕುರಿತಾದ ಸಿನಿಮಾ ಬಗ್ಗೆ ಎಲ್ಲರಲ್ಲೂ ಕುತೂಹಲ ಇದೆ. ಅದೀಗ ತಣ್ಣಗಾಗುತ್ತಿದೆ. ಯಾಕೆಂದರೆ ಕಂಬಳ ಶ್ರೀನಿವಾಸಗೌಡ ಕುರಿತಾದ ಸಿನಿಮಾ ಶೂಟಿಂಗ್ ಈ ಯುಗಾದಿಯಿಂದ ಪ್ರಾರಂಭವಾಗಲಿದೆ.

ಕನ್ನಡ ಮತ್ತು ತುಳು ಭಾಷೆಗಳಲ್ಲಿ ಈಗಾಗಲೇ ಟೈಟಲ್ ರಿಜಿಸ್ಟಾರ್ ಆಗಿದ್ದು, ಯುಗಾದಿ ಹಬ್ಬದಂದು ಸೆಟ್ಟೇರಲಿದೆ ಎಂದು ಚಿತ್ರ ತಂಡ ಹೇಳಿದೆ.
ಸುಮಾರು 2.5 ಕೋಟಿ ರೂಪಾಯಿ ಬಜೆಟ್ ನಲ್ಲಿ ಲೋಕೇಶ್‌ ಶೆಟ್ಟಿ ಮುಚ್ಚೂರು ಎಂಬವರು ಈ ಸಿನಿಮಾ ನಿರ್ಮಿಸುತ್ತಿದ್ದು, ಡಾ. ನಿಖಿಲ್‌ ಮಂಜು ನಿರ್ದೇಶನ ಮಾಡಲಿದ್ದಾರೆ.

ಈ ಸಿನಿಮಾದಲ್ಲಿ ತುಮುಲ್ ಬಾಲ್ಯನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು, ಶ್ರೀನಿವಾಸಗೌಡ ಹಾಗೂ 6 ಕಂಬಳ ಜಾಕಿಗಳೂ ಸಿನಿಮಾದಲ್ಲಿರಲಿದ್ದಾರಂತೆ. ನಿಶಾಂತ್ ಶೆಟ್ಟಿ, ಸುರೇಶ್ ಶೆಟ್ಟಿ ಹುಕ್ಕೇರಿ, ಆನಂದ್ ಇರ್ವತ್ತೂರು, ಆಲದಂಗಡಿ ರವಿಕುಮಾರ್ ಮತ್ತು ಪ್ರವೀಣ್ ಪಣಪಿಲ್ ಮೊದಲಾದ ಕಂಬಳ ವೀರರು ಈ ಸಿನಿಮಾದದಲ್ಲೂ ಮಿಂಚಿನ ಓಟ ಪ್ರದರ್ಶಿಸಲಿದ್ದಾರಂತೆ.

ಇನ್ನೊಂದು ವಿಶೇಷ ಅಂದರೆ ಬಾಲಿವುಡ್ ಹೀರೋ ಸುನಿಲ್ ಶೆಟ್ಟಿ ಅವರಿಗೂ ಈ ಸಿನಿಮಾದಲ್ಲಿ ಪಾತ್ರ ನೀಡುವ ಬಗ್ಗೆ ಚಿಂತನೆಯೂ ಇದೆಯಂತೆ.

Related posts