ಹಲವಾರು ಎಡವಟ್ಟುಗಳು, ಹಲವಾರು ಅಕ್ರಮಗಳು; ಜಾತಿ ಗಣತಿಯ ಲೋಪಗಳತ್ತ ಬೆಳಕು ಚೆಲ್ಲಿದ ಅಶೋಕ್

ಬೆಂಗಳೂರು: ಜಾತಿ ಜನಗಣತಿ ವಿವಾದ ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಮುದಾಯಗಳು ತಿರುಗಿ ಬಿದ್ದಿವೆ. ಈ ವಿವಾದಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರವೇ ಹೊಣೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಜನಗಣತಿ ಸಂದರ್ಭದಲ್ಲಿ ಸರಿಯಾದ ಸಿದ್ಧತೆಯಿಲ್ಲದೆ ಕ್ರಮವಹಿಸಲಾಗಿದೆ ಎಂಬ ಕಹಿ ಸತ್ಯವನ್ನು ಆರ್.ಅಶೋಕ್ ನೆನಪಿಸಿದ್ದಾರೆ. ಈ ಸಂಬಂಧ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ. ಸಿಎಂ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಕಾಟಾಚಾರಕ್ಕೆ ನಡೆಸಿದ ಜಾತಿ ಜನಗಣತಿ ಸಮೀಕ್ಷೆ ಸಾಲು ಸಾಲು ಎಡವಟ್ಟುಗಳಿಂದ ಕೂಡಿತ್ತು, ಅವ್ಯವಸ್ಥೆಯ ಗೂಡಾಗಿತ್ತು ಎನ್ನುವುದಕ್ಕೆ ಅಂದಿನ ಪತ್ರಿಕಾ ವರದಿಗಳೇ ಸಾಕ್ಷಿ ಎಂದು ಬೊಟ್ಟು ಮಾಡಿರುವ ಅಶೋಕ್, ಜಾತಿ ಜನಗಣತಿಗಾಗಿ ನಿಯೋಜನೆ ಮಾಡಲಾಗಿದ್ದ ಸಿಬ್ಬಂದಿಗಳಿಗೆ ಗಣತಿ ಅರ್ಜಿ ತುಂಬುವ ಬಗ್ಗೆ ತರಬೇತಿಯನ್ನೇ ನೀಡಿರಲಿಲ್ಲ. ಗಣತಿ ಅರ್ಜಿಯಲ್ಲಿದ್ದ 56 ಕಾಲಂಗಳಲ್ಲಿ ಸಮೀಕ್ಷೆದಾರರು ಪ್ರಾಮಾಣಿಕವಾಗಿ ತುಂಬುತಿದ್ದುದು ಕೇವಲ…

‘ದಿ ಭೂತ್ನಿ’ ಚಿತ್ರದಲ್ಲಿ ಶಿವಭಕ್ತನಾಗಿ ಕಾಣಿಸಿಕೊಂಡ ಸಂಜಯ್ ದತ್

ಮುಂಬೈ: ‘ದಿ ಭೂತ್ನಿ’ ಚಿತ್ರದಲ್ಲಿ ನಟ ಸಂಜಯ್ ದತ್ ಅವರು ಶಿವನ ಭಕ್ತ ಅನುಯಾಯಿಯಾಗಿ ಕಮಾಂಡಿಂಗ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ದಿ ಭೂತ್ನಿ’ ನಿರ್ಮಾಪಕರು ಮೊದಲ ಹಾಡು ‘ಮಹಾಕಾಲ್-ಮಹಾಕಾಲಿ’ ಯನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡು ದೈವಿಕ ಶಕ್ತಿಗೆ ಪ್ರಬಲವಾದ ಒಲವಾಗಿದ್ದು, ಶಕ್ತಿಯುತ ಲಯಗಳನ್ನು ಆಧ್ಯಾತ್ಮಿಕ ಉತ್ಸಾಹದೊಂದಿಗೆ ಬೆಸೆಯುತ್ತದೆ. ದತ್ ಅವರನ್ನು ಪ್ರಬಲ ಶಿವಭಕ್ತ ಅವತಾರದಲ್ಲಿ ತೋರಿಸುತ್ತಾ, ಈ ಹಾಡು ದೈವಿಕ ಶಕ್ತಿಗೆ ಗುಡುಗಿನ ಗೌರವವನ್ನು ನೀಡುತ್ತದೆ. ಟ್ರ್ಯಾಕ್ ಬಗ್ಗೆ ವಿಶೇಷ ಉಪಾಖ್ಯಾನವನ್ನು ನಟ ಹಂಚಿಕೊಂಡಿದ್ದಾರೆ. ನಾನು ಯಾವಾಗಲೂ ಶಿವಭಕ್ತನಾಗಿರುವುದರಿಂದ ಇದು ಚಿತ್ರದ ನನ್ನ ನೆಚ್ಚಿನ ಹಾಡು – ಇದು ಸರ್ವಶಕ್ತನಿಗೆ ನನ್ನ ಗೌರವ” ಎಂದವರು ಹೇಳಿಕೊಂಡಿದ್ದಾರೆ. ಭಕ್ತಿಗೀತೆ “ಮಹಾಕಾಲ್-ಮಹಾಕಾಲಿ” ಅನ್ನು ಹಂಸರಾಜ್ ರಘುವಂಶಿ ಹಾಡಿದ್ದಾರೆ. ಶಬ್ಬೀರ್ ಅಹ್ಮದ್ ಅವರ ಸಂಗೀತ ಮತ್ತು ಸಾಹಿತ್ಯವಿದೆ. ಡುಗಡೆಯಾಗಲಿದೆ.

‘ಗುಡ್ ಬ್ಯಾಡ್ ಅಗ್ಲಿ’: ಅಜಿತ್-ವಿಜಯ್ ಅಭಿಮಾನಿಗಳ ಮಾರಾಮಾರಿ

ಕಾಲಿವುಡ್ ನಟರಾದ ಅಜಿತ್ ಕುಮಾರ್ ಹಾಗೂ ದಳಪತಿ ವಿಜಯ್ ಅಭಿಮಾನಿಗಳ ನಡುವೆ ಮತ್ತೆ ಕಾದಾಟ ನಡೆದಿದೆ. ಅಜಿತ್ ಕುಮಾರ್​ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ಪ್ರದರ್ಶನದ ವೇಳೆ ಈ ಗಲಾಟೆ ನಡೆದಿದೆ. ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಏಪ್ರಿಲ್ 10ರಂದು ಬಿಡುಗಡೆಯಾಗಿದ್ದು ಕೇರಳದಲ್ಲೂ ಪ್ರದರ್ಶನ ಕಾಣುತ್ತಿದೆ. ಕೇರಳದ ಪಲಕ್ಕಾಡ್​ನಲ್ಲಿರುವ ‘ಸತ್ಯ’ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ದಳಪತಿ ವಿಜಯ್ ಫ್ಯಾನ್ಸ್ ಹಾಗೂ ಅಜಿತ್ ಕುಮಾರ್ ಫ್ಯಾನ್ಸ್ ನಡುವೆ ಕಿತ್ತಾಟ ನಡೆದಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. I don't know why these illiterate Vijay Fans are coming to Show off in a crowd packed with hardcore Ajith Fans. Again balamana Adi from Thala Fans to…

ಮುಷ್ಕರ ನಿರತ ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳೊಂದಿಗೆ ಸಿಎಂ ಸಂಧಾನ

ಬೆಂಗಳೂರೂ: ಮುಷ್ಕರ ನಿರತ ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಅಹವಾಲನ್ನು ಆಲಿಸಿದ್ದಾರೆ. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ತಮ್ಮ ಬೇಡಿಕೆ ಈಡೇರಿಸದ ಹೊರತು ಮುಷ್ಕರ ಕೈಬಿಡಲ್ಲ ಎಂದು ಲಾರಿ ಮಾಲೀಕರು ತಿಳಿಸಿದ್ದಾರೆ. ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಅವರು ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು. ಈ ಬಾರಿ ಬಜೆಟ್‌ನಲ್ಲಿ ಡಿಸೇಲ್ ಮೇಲಿನ ಸುಂಕ ರೂ.2 ಹೆಚ್ಚಳ ಮಾಡಲಾಗಿದೆ. ಆದರೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಡಿಸೇಲ್ ದರ ನಮ್ಮ ರಾಜ್ಯದಲ್ಲಿ ಕಡಿಮೆಯಿದೆ ಎಂದು ಮನವರಿಕೆ ಮಾಡಿದರು. ಲಾರಿ ಮಾಲಿಕರ ಸಂಘದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಸರ್ಕಾರ ಬಡವರ ಪರವಾಗಿದ್ದು ಸರ್ಕಾರದೊಂದಿಗೆ ಲಾರಿ ಮಾಲೀಕರು ಸಹಕರಿಸಬೇಕು ಎಂದವರು ಮನವಿ ಮಾಡಿದರು. ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಪ್ರತಿ ವರ್ಷ ಸುಮಾರು 14 ಸಾವಿರ…

ಜಾತಿಗಣತಿ ಪ್ರತಿಧ್ವನಿ: ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅಲ್ಪಸಂಖ್ಯಾತ ಎಂದು ಪರಿಗಣಿಸದಿರಿ

ಬೆಂಗಳೂರು: ಜಾತಿಗಣತಿ ಪ್ರಕಾರ ಮುಸಲ್ಮಾನರು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದು ನಿಜವಾಗಿದ್ದರೆ ಅವರನ್ನು ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯಿಂದ ತೆಗೆದು ಹಾಕಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೀಸಲಾತಿಯ ಅಗತ್ಯವೂ ಇಲ್ಲ ಎಂದವರು ಪ್ರತಿಪಾದಿಸಿದ್ದಾರೆ. ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್‌ ಪಕ್ಷ ಹಿಂದೂಗಳನ್ನು ಜಾತಿ ಜಾತಿಗಳಾಗಿ ಭಾಗ ಮಾಡುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ಜಾತಿಗಣತಿ ಪ್ರಕಾರ ಮುಸಲ್ಮಾನರು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದು ನಿಜವಾಗಿದ್ದರೆ ಅವರನ್ನು ಅಲ್ಪಸಂಖ್ಯಾತ ಎಂಬ ಹಣೆಪಟ್ಟಿಯಿಂದ ತೆಗೆದು ಹಾಕಿ. ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮೀಸಲಾತಿಯ ಅಗತ್ಯವೂ ಇಲ್ಲ. ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್‌ ಪಕ್ಷ ಹಿಂದೂಗಳನ್ನು ಜಾತಿ ಜಾತಿಗಳಾಗಿ ಭಾಗ ಮಾಡುತ್ತಿದೆ. – ಶ್ರೀ @RAshokaBJP ,… pic.twitter.com/7LSzdPOU0O — BJP Karnataka (@BJP4Karnataka) April 15, 2025

ಜಾತಿ ಗಣತಿ ವಿವಾದ: ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕವಾಗಿ ವರದಿ ರೂಪಿಸಲು ಬಿಜೆಪಿ ಆಗ್ರಹ

ಬೆಂಗಳೂರು: ಕೇವಲ ಮುಸ್ಲಿಮರನ್ನು ವೋಟ್ ಬ್ಯಾಂಕ್ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಮಾಡಿಸಿದ್ದಾರೆ. ಈ ವರದಿಯನ್ನು ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕವಾಗಿ ವರದಿ ರೂಪಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಹಾಗೂ ಧರ್ಮಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಮೊದಲು ರಾಜ್ಯದಲ್ಲಿ ಅತಿ ದೊಡ್ಡ ಜಾತಿ ಲಿಂಗಾಯತರು, ಎರಡನೇ ಅತಿ ದೊಡ್ಡ ಜಾತಿ ಒಕ್ಕಲಿಗರು ಹಾಗೂ ಮೂರನೆಯವರು ದಲಿತರು ಎಂದಿತ್ತು. ಆದರೆ ಈಗ ಮುಸ್ಲಿಮರು ಅತಿ ದೊಡ್ಡ ಜಾತಿ ಎನ್ನಲಾಗಿದೆ. ಮುಸ್ಲಿಮರಲ್ಲೇ ವಿವಿಧ ಜಾತಿಗಳಿದ್ದು, ಅದನ್ನು ಬೇರೆ ಮಾಡಿಲ್ಲ. ಒಕ್ಕಲಿಗರಲ್ಲೇ ಕೆಲವು ಜಾತಿಗಳನ್ನು ವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ ಗೆ ಹೆಚ್ಚು ಮತ ನೀಡುವವರ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲಾಗಿದೆ. ಒಕ್ಕಲಿಗರಿಗೆ, ಲಿಂಗಾಯತರಿಗೆ, ದಲಿತರಿಗೆ ನಾಮ ಹಾಕಿದ್ದಾರೆ ಎಂದು ದೂರಿದರು. ಸಿಎಂ ಸಿದ್ದರಾಮಯ್ಯ ಪಕ್ಷ,…

ತಾಲೂಕು, ಜಿಲ್ಲಾ ಮಟ್ಟದಲ್ಲಿ ಸೇವಾದಳದವರಿಗೂ ಅಧಿಕಾರ ನೀಡಲು ಚಿಂತನೆ

ಬೆಂಗಳೂರು: ಸೇವಾದಳ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಪಕ್ಷದಲ್ಲಿ ನೀವು ಎಲ್ಲರಿಗಿಂತ ಕೊನೆ ಎಂಬ ಭಾವನೆ ಬೇಡ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಸೇವಾದಳದವರಿಗೂ ಅಧಿಕಾರ ನೀಡುವ ಆಲೋಚನೆ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ಭಾನುವಾರ ನಡೆದ ಭಾರತೀಯ ಸೇವಾದಳದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ಸಮಾಜ ಸೇವೆ ಮಾಡುವವರನ್ನು ಹೆಚ್ಚು ಗುರುತಿಸುತ್ತದೆ. ಹೀಗಾಗಿ ನಮ್ಮ ಸಮಾಜದಲ್ಲಿ ರಾಮನ ತಂದೆ ದಶರಥ ಮಹಾರಾಜನಿಂಗಿಂತ, ರಾಮನ ಭಂಟ ಹನುಮಂತನ ದೇವಾಲಯಗಳು ಹೆಚ್ಚಾಗಿವೆ. ಅದೇ ರೀತಿ ನೀವು ಕಾಂಗ್ರೆಸ್ ಪಕ್ಷಕ್ಕೆ ಆಧಾರಸ್ತಂಭ. ಇದನ್ನು ಸೇವಾದಳದ ಎಲ್ಲಾ ಕಾರ್ಯಕರ್ತರು ತಲೆಯಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು. “ದೇಶದ ಭದ್ರತೆ ಉದ್ದೇಶದಿಂದ ಸ್ಥಾಪನೆಯಾದ ವಿಭಾಗ ಸೇವಾದಳ. ನೆಹರೂ ಅವರ ಅವಧಿಯಲ್ಲಿ ಪ್ರಾರಂಭವಾಗಿ ಈಗ ಮಲ್ಲಿಕಾರ್ಜುನ ಖರ್ಗೆ ಅವರ…

ಮೈಸೂರು ದಸರಾದಲ್ಲಿ ತುಳುನಾಡ ‘ಕಂಬಳ’ಕ್ಕೆ ಪ್ರಾತಿನಿಧ್ಯ: ಡಿಕೆಶಿ ಘೋಷಣೆ

ಮಂಗಳೂರು: ಈ ವರ್ಷದಿಂದ ದಸರಾ ಕ್ರೀಡಾಕೂಟದಲ್ಲಿ ಕಂಬಳ ಸೇರ್ಪಡೆಗೊಳ್ಳಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಘೋಷಿಸಿದ ನಡೆ ತುಳುನಾಡ ಜನರ ಸಂತಸಕ್ಕೆ ಕಾರಣವಾಗಿದೆ. ಗುರುಪುರ ಮಾಣಿಬೆಟ್ಟು ಗುತ್ತಿನ ಗದ್ದೆಯಲ್ಲಿ ಶನಿವಾರ ಹೊನಲು ಬೆಳಕಿನ “ಗುರುಪುರ ಕಂಬಳೋತ್ಸವ”ದ ಸಮಾರೋಪ ಸಮಾರಂಭದಲ್ಲಿ ಡಿಕೆಶಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಂಬಳ ಕ್ರೀಡೆಯಿಂದ ನಮ್ಮ ಸಂಪ್ರದಾಯ- ಪರಂಪರೆ ಬೆಳೆಯುತ್ತಿದೆ. ಹಾಗಾಗಿ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳವನ್ನು ಸಂರಕ್ಷಿಸಬೇಕಾಗಿದೆ ಎಂದರು. ನಮ್ಮ ಸರ್ಕಾರ ಕಂಬಳಕ್ಕೆ ಪ್ರೋತ್ಸಾಹ ನೀಡುತ್ತದೆ. ಮುಂದಿನ ವರ್ಷ ಮೈಸೂರು ದಸರಾದ ಕ್ರೀಡಾಕೂಟದಲ್ಲಿ ಕಂಬಳ ಆಯೋಜಿಸುತ್ತೇವೆ ಎಂದ ಡಿಕೆಶಿ, ಮುಂದೆ ಇದು ಪರಂಪರೆಯಾಗಿ ಉಳಿದು ಮುಂದುವರಿಯುವ ರೀತಿಯಲ್ಲಿ ಪ್ರೋತ್ಸಾಹಿಸೋಣ ಎಂದರು.

ಜಾತಿ ಜನಗಣತಿ ವರದಿ ಜಾರಿಯಾದರೆ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯ: ಸೋಮಣ್ಣ

ಬೆಂಗಳೂರು: ಜಾತಿ ಜನಗಣತಿ ಕುರಿತ ಕಾಂತರಾಜ್ ವರದಿ ಜಾರಿಯಾದಲ್ಲಿ ಲಕ್ಷಾಂತರ ಜನರಿಗೆ ಅನ್ಯಾಯವಾಗಲುತ್ತದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಾತಿ ಜನಗಣತಿ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಎಲ್ಲೋ ಕುಳಿತು ತಮಗೆ ಬೇಕಾದಂತೆ ವರದಿ ರೂಪಿಸಲಾಗಿದೆ. ಇದು ಜಾರಿಯಾದರೆ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಇಂತಹ ಮಹಾಪರಾಧ ಮಾಡುವ ಚಿಂತನೆ ಬೇಡ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು. ವಿವಾದಾತ್ಮಕ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯತ್ನಿಸುತ್ತಿದ್ದಾರೆ ಎಂದೂ ಸೋಮಣ್ಣ ಆರೋಪಿಸಿದರು. ಸಚಿವ ವಿ. ಸೋಮಣ್ಣ ಅವರು ಶನಿವಾರ ಹೇಳಿದ್ದಾರೆ.

ಜಾತಿ ಜನಗಣತಿ ಸಮೀಕ್ಷೆ: ವರದಿ ಜಾರಿಯ ವಿಶ್ವಾಸ ಇದೆ ಎಂದ ಕಾಂತರಾಜ್

ಶಿವಮೊಗ್ಗ: ಜಾತಿ ಜನಗಣತಿ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜಾತಿ ಜನಗಣತಿ ವರದಿ ಸೋರಿಕೆಯಾಗಿದೆ ಎಂಬ ಆರೋಪವಂತೂ ವಿವಾದದ ಬಿರುಗಾಳಿ ಎಬ್ಬಿಸಿದೆ. ಈ ನಡುವೆ, ಜಾತಿ ಜನಗಣತಿ ವರದಿ ಸೋರಿಕೆಯಾಗಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ್ ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಆಯಾಮಗಳಿಂದಲೂ ಜಾತಿ ಜನಗಣತಿ ಸಮೀಕ್ಷೆ ನಡೆಸಲಾಗಿದ್ದು, ವರದಿ ಅವೈಜ್ಞಾನಿಕವಾಗಿದೆ ಎಂಬ ಆರೋಪ ಸರಿಯಲ್ಲ ಎಂದರು. 1931 ರ ನಂತರ ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಕುರಿತು ಯಾವುದೇ ಸಮೀಕ್ಷೆಯನ್ನು ನಡೆಸಲಾಗಿಲ್ಲ, ಹೀಗಾಗಿ 2015 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳಲು ಸಮಿತಿಯನ್ನು ರಚಿಸಿದರು ಎಂದ ಎಚ್.ಕಾಂತರಾಜ್, ಆಯೋಗದ ಶಿಫಾರಸುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತರಲಿದ್ದಾರೆಂಬ ಭರವಸೆಯಿದೆ ಎಂದರು.