ಮುಂಬೈ: ಕನ್ನಡದ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ ಬಹುನಿರೀಕ್ಷಿತ ಕನ್ನಡ ಚಿತ್ರ ’45’ ಟೀಸರ್ ಏಪ್ರಿಲ್ 15 ಮತ್ತು 16, 2025 ರಂದು ಭಾರತದಾದ್ಯಂತ ನಾಲ್ಕು ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ. ಏಪ್ರಿಲ್ 15 ರಂದು ಮುಂಬೈನಲ್ಲಿ ಭವ್ಯ ಪ್ರಚಾರದ ಬ್ಲಿಟ್ಜ್ ಪ್ರಾರಂಭವಾಗಲಿದೆ. ನಂತರ ಹೈದರಾಬಾದ್‌ನಲ್ಲಿ ಸಂಜೆ ಆಚರಣೆ ನಡೆಯಲಿದೆ. ಮರುದಿನ ಏಪ್ರಿಲ್ 16 ರಂದು ಬೆಳಿಗ್ಗೆ, ತಂಡವು ಚೆನ್ನೈಗೆ ತೆರಳಲಿದ್ದು, ಕೊಚ್ಚಿಯ ಪಿವಿಆರ್ ಫೋರಂನಲ್ಲಿ ನಡೆಯುವ ಕಾರ್ಯಕ್ರಮದೊಂದಿಗೆ ಪರ್ಯಟನೆಯು ಪರಿಪೂರ್ಣವಾಗಲಿದೆಯಂತೆ. ಮಹತ್ವಾಕಾಂಕ್ಷೆಯ ಸಿನಿಮಾ ಬಿಡುಗಡೆ ಕುರಿತು ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, “ನಾನು ’45’ ಚಿತ್ರಕ್ಕೆ ನನ್ನ ಹೃದಯ ಮತ್ತು ಆತ್ಮವನ್ನು ಧಾರೆಯೆರೆದಿದ್ದೇನೆ. ಇದು ಅಪಾರ ಪ್ರೀತಿ, ದೃಷ್ಟಿ ಮತ್ತು ಉತ್ಸಾಹದಿಂದ ಹೇಳಲಾದ ಕಥೆ. ಮಾಂತ್ರಿಕ ಆದರೆ ಶಕ್ತಿಶಾಲಿ ಎಂದು ಭಾವಿಸುವ ಜಗತ್ತನ್ನು ರಚಿಸಲು ಈ ಮಟ್ಟದ ಪ್ರತಿಭೆಯನ್ನು ಒಟ್ಟುಗೂಡಿಸುವುದು ಒಂದು ಕನಸಾಗಿದೆ. ಈ ’45 ಪ್ಯಾನ್ ಇಂಡಿಯಾ…
Month: April 2025
ಶ್ರೀ ಕಟೀಲು ಕ್ಷೇತ್ರದಲ್ಲಿ ನಿತ್ಯವೂ ಕೈಂಕರ್ಯ, ಜ್ಞಾನಾರ್ಜನೆ
ಮಂಗಳೂರು: ‘ಕಟೀಲು’ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಉರಾದರೂ ಇಲ್ಲಿನ ದೇಗುಲವು ಜಗದಗಲ ಖ್ಯಾತಿಯನ್ನು ಹೊಂದಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮಂಗಳೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ನಂದಿನಿ ನದಿಯ ಮಧ್ಯೆ ಇದ್ದು, ಹಚ್ಚ ಹಸಿರಿನ ವನಸಿರಿಯ ಸಿಂಗಾರದಿಂದಾಗಿ ಪ್ರವಾಸಿಗರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ನಿತ್ಯವೂ ಭಕ್ತಸಾಗರದಿಂದ ತುಂಬಿ ತುಳುಕುತ್ತಿರುವ ಕಟೀಲು ದೇಗುಲವು ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲಗಳಲ್ಲೊಂದು. ಇದೀಗ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ವಾರ್ಷಿಕ ಅದ್ಧೂರಿ ಜಾತ್ರೆಗೆ ಸಾಕ್ಷಿಯಾಗುತ್ತಿದೆ. ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ 8 ದಿನಗಳ ಕಾಲ ಈ ವೈಭವ ನೆರವೇರುತ್ತದೆ. ವೈಶಿಷ್ಟ್ಯಗಳೊಂದಿಗೆ ಮೊದಲ ದಿನ ಕೋಡಿ (ಧ್ವಜ) ಏರಿಸುವ ಮೂಲಕ ಜಾತ್ರೆ ಆರಂಭವಾಗುತ್ತದೆ. 3ನೇ ದಿನ ದೇವರ ಮೂಡು ಸವಾರಿ (ಮೂಡಣದ ದಿಕ್ಕಿಗೆ) ನಡೆಯುತ್ತದೆ.…
ಪವನ್ ಕಲ್ಯಾಣ್ ಅವರ ‘ಹರಿ ಹರ ವೀರ ಮಲ್ಲು’ ಮೇ 9ರಂದು ಬಿಡುಗಡೆ
ಮುಂಬೈ: ಹಲವು ವರ್ಷಗಳ ನಿರೀಕ್ಷೆ ಮತ್ತು ವದಂತಿಗಳ ನಂತರ, ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರ “ಹರಿ ಹರ ವೀರ ಮಲ್ಲು” ಈ ಬೇಸಿಗೆಯಲ್ಲಿ ತೆರೆಕಾಣಲಿದೆ. ಮೇ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ವೀರ ಮಲ್ಲು ಆಗಿ ರೂಪಾಂತರಗೊಳ್ಳುವುದನ್ನು ನೋಡಲಾಗುವುದು – ಶತಮಾನಗಳಿಂದ ಕಾಯುತ್ತಿರುವ ದಂತಕಥೆ ಇದಾಗಿದೆ ಎಂದು ಚಿತ್ರ ತಂಡ ಹೇಳಿದೆ. ಮೊಘಲರ ಯುಗದಲ್ಲಿನ ಯೋಜನೆಯು, ಮೊಘಲರಿಂದ ಕೊಹಿನೂರ್ ವಜ್ರವನ್ನು ಕದಿಯುವ ಕೆಲಸವನ್ನು ವಹಿಸಿಕೊಂಡಿರುವ ಅಪರಾಧಿ ವೀರ ಮಲ್ಲುವಿನ ಕಥೆಯನ್ನು ಹಂಚಿಕೊಳ್ಳುತ್ತದೆ. ಅಡೆತಡೆಗಳು ಮತ್ತು ರಾಜಕೀಯ ಬದ್ಧತೆಗಳ ನಡುವೆ ಚಿತ್ರವನ್ನು ನಿರ್ದೇಶಿಸಿದ ಎ.ಎಂ. ಜ್ಯೋತಿ ಕೃಷ್ಣ ಅವರ ನೇತೃತ್ವದಲ್ಲಿ, “ಹರಿ ಹರ ವೀರ ಮಲ್ಲು” ನಿರ್ಮಾಣಕ್ಕೆ ಈಗ ಅಂತಿಮ ಸ್ಪರ್ಶ ಸಿಕ್ಕಿದೆ. <blockquote class=”twitter-tweet”><p lang=”en” dir=”ltr”>Re-recording, Dubbing, and VFX are in full…
ವಕ್ಫ್ ತಿದ್ದುಪಡಿ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ; ಧಗಧಗಿಸಿದ ಪಶ್ಚಿಮ ಬಂಗಾಳ
ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೇಳುವಂತೆ ಮಾಡಿದೆ. ಅಲ್ಪಸಂಖ್ಯಾತ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹಲವಾರು ಭಾಗಗಳನ್ನು ಆವರಿಸಿರುವ ಹಿಂಸಾಚಾರ ಶನಿವಾರದಂಡು ಮತ್ತೆ ಮೂವರನ್ನು ಬಲಿತೆಗೆದುಕೊಂಡಿದೆ. ಶುಕ್ರವಾರ ಸುಟಿಯ ಸಜುರ್ ಕ್ರಾಸಿಂಗ್‌ನಲ್ಲಿ ನಡೆದ ಹಿಂಸಾಚಾರದ ಇಬ್ಬರ ಸಾವಿಗೆ ಕಾರಣವಾಯಿತೆಂದು ಹೇಳಲಾಗಿದೆ. ಬಿಜೆಪಿಯ ಮಾಹಿತಿ ತಂತ್ರಜ್ಞಾನ ಕೋಶದ ಮುಖ್ಯಸ್ಥ ಮತ್ತು ಪಶ್ಚಿಮ ಬಂಗಾಳದ ಪಕ್ಷದ ಕೇಂದ್ರ ವೀಕ್ಷಕ ಅಮಿತ್ ಮಾಳವಿಯಾ ಅವರು ಹತ್ಯೆಗೀಡಾದ ತಂದೆ ಮತ್ತು ಮಗನ ಶವಗಳನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಪ್ರತಿಭಟನೆಗಳ ಹೆಸರಿನಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಈ ನಡುವೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 118 ಜನರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಾವೇದ್ ಶಮೀಮ್ ತಿಳಿಸಿದ್ದಾರೆ.
ಶ್ರೀ ಕಟೀಲು ಕ್ಷೇತ್ರ ವೈಭವವನ್ನು ಸಾಕ್ಷೀಕರಿಸಿದ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..
ಮಂಗಳೂರು: ಪುರಾಣ ಪ್ರಸಿದ್ಧ ಶ್ರೀ ಕಟೀಲು ಕ್ಷೇತ್ರದಲ್ಲಿ ಇದೀಗ ವೈಭವದ ಜಾತ್ರಾ ಮಹೋತ್ಸವದ ಸಡಗರ ಆವರಿಸಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ. ಕಟೀಲು ಕ್ಷೇತ್ರದ ಜಾತ್ರೆಯ ಸಂದರ್ಭದಲ್ಲೇ ಕರಾವಳಿಯ ಯುವಜನ ಸಮೂಹ ಶ್ರೀ ದುರ್ಗಾಪರಮೇಶ್ವರಿಯ ಮಹಿಮೆಯ ಬಗ್ಗೆ ಬೆಳಕು ಚೆಲ್ಲುವ ಹಾಡೊಂದನ್ನು ಲೋಕಾರ್ಪಣೆ ಮಾಡಿ ಗಮನಸೆಳೆದಿದ್ದಾರೆ. ಈ ಭಕ್ತಿ ಗಾನಕ್ಕೆ ಆಸ್ತಿಕರ ಪಾಳಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೆ ಪ್ರಯುಕ್ತ ದೇವಲೋಕ ಕ್ರಿಯೇಷನ್ಸ್ ವತಿಯಿಂದ ‘ಅಪ್ಪೆ ಭ್ರಾಮರಿಯೇ’ ಎಂಬ ಹೊಸ ಭಕ್ತಿಗೀತೆಯನ್ನು ಶನಿವಾರ ಬೆಳಿಗ್ಗೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಗಿದೆ. ಜ್ಯೋತಿಗುಡ್ಡೆ ಕ್ಷೇತ್ರದ ಅರ್ಚಕಿ ಗುಲಾಬಿ ಅಮ್ಮನವರು ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿದರು. ಸಾಫಲ್ಯ ಸೇವಾ ಸಂಘ (ರಿ) ಮುಂಬೈ ಇದರ ಅಧ್ಯಕ್ಷ ಶ್ರೀನಿವಾಸ…
ಏಪ್ರಿಲ್ 18ರಿಂದ ಕರಾವಳಿಯಲ್ಲಿ ‘ಸೌಹಾರ್ದ ಬ್ಯಾರಿ ಉತ್ಸವ’; ಉದ್ಯೋಗ ಮೇಳ, ಶೈಕ್ಷಣಿಕ ಕ್ರಾಂತಿಗೂ ಮುನ್ನುಡಿ..!
ಮಂಗಳೂರು: ಕಡಲ ತಡಿ ಮಂಗಳೂರು ಅಧ್ಧೂರಿ ‘ಸೌಹಾರ್ದ ಬ್ಯಾರಿ ಉತ್ಸವ’ಕ್ಕೆ ಸಾಕ್ಷಿಯಾಗಲಿದೆ. ಏಪ್ರಿಲ್ 18ರಿಂದ ಮೂರು ದಿನಗಳ ಕಾಲ ಈ ಉತ್ಸವ ನಡೆಯಲಿದ್ದು, ಸಮುದಾಯದ ಯುವಜನರ ಅನುಕೂಲಕ್ಕಾಗಿ ‘ಉದ್ಯೋಗ ಮೇಳ’ವನ್ನೂ ಆಯೋಜಿಸಲಾಗಿದೆ. ಈ ಕುರಿತಂತೆ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವಾ ಅವರು ಮಂಗಳೂರಿನಲ್ಲಿ ಸಮುದಾಯದ ಪ್ರಮುಖರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಕರ್ನಾಟಕ ಬ್ಯಾರೀಸ್ ಸೋಶಿಯಲ್ ಎಂಡ್ ಕಲ್ಬರಲ್ ಫಾರಂ ಆಯೋಜಿಸುವ ಸೌಹಾರ್ದ ಬ್ಯಾರಿ ಉತ್ಸವ 2025 ಸಂಘಟನಾ ಸಮಿತಿಯ ವತಿಯಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ 2025 ರ ಎಪ್ರಿಲ್ 18, 19, 20ರಂದು ‘ಬ್ಯಾರಿ ಸೌಹಾರ್ದ ಉತ್ಸವ’ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಬ್ಯಾರಿ ಜನಾಂಗದ ವೈಶಿಷ್ಟ್ಯತೆ, ಸಂಸ್ಕೃತಿ, ಸೌಹಾರ್ದತೆ, ಕೊಡುಗೆಗಳು, ಸಾಧನೆಗಳು, ಪರಂಪರೆಗಳನ್ನು ಪ್ರತಿಬಿಂಬಿಸುವ ಜೊತೆಗೆ ಯುವ ಜನಾಂಗಕ್ಕೆ ದಿಕ್ಕೂಚಿಯಾಗುವ ಹಾಗೂ ಬಹು ಭಾಷಾ ಸಂಸ್ಕೃತಿಗಳನ್ನು ಪ್ರಸ್ತುತ ಪಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ…
3,000 ಜನರಲ್ಲಿ ಒಬ್ಬರಿಗೆ ಶ್ವಾಸಕೋಶ ಪಂಕ್ಚರ್ ಆಗುವ ಅಪಾಯ?
ದೋಷಪೂರಿತ ಜೀನ್‌ನಿಂದ 3,000 ಜನರಲ್ಲಿ ಒಬ್ಬರಿಗೆ ಶ್ವಾಸಕೋಶ ಪಂಕ್ಚರ್ ಆಗುವ ಅಪಾಯವಿದೆ ಎಂಬ ಕಹಿ ಸತ್ಯವನ್ನು ಸಂಶೋಧಕರು ಪತ್ತೆಮಾಡಿದ್ದಾರೆ. 3,000 ಜನರಲ್ಲಿ ಒಬ್ಬರು ದೋಷಯುಕ್ತ ಜೀನ್ ಅನ್ನು ಹೊಂದಿರಬಹುದು ಎಂದು ಲಂಡನ್ನಿನ ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಪಂಕ್ಚರ್ ಆಗುವ ಶ್ವಾಸಕೋಶದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ. ಪಂಕ್ಚರ್ ಆದ ಶ್ವಾಸಕೋಶ – ‘ನ್ಯುಮೋಥೊರಾಕ್ಸ್’ ಎಂದು ಕರೆಯಲಾಗುತ್ತದೆ. ಶ್ವಾಸಕೋಶದಲ್ಲಿ ಗಾಳಿಯ ಸೋರಿಕೆಯಿಂದ ಉಂಟಾಗುತ್ತದೆ. ಇದರ ಪರಿಣಾಮವಾಗಿ ನೋವಿನ ಶ್ವಾಸಕೋಶದ ಹಣದುಬ್ಬರ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. 550,000 ಕ್ಕೂ ಹೆಚ್ಚು ಜನರನ್ನು ಒಳಗೊಂಡ ಅಧ್ಯಯನವೊಂದರಲ್ಲಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು 2,710 ರಲ್ಲಿ ಒಬ್ಬರು ಮತ್ತು 4,190 ರಲ್ಲಿ ಒಬ್ಬರು ವ್ಯಕ್ತಿಗಳು ಬರ್ಟ್-ಹಾಗ್-ಡ್ಯೂಬ್ ಸಿಂಡ್ರೋಮ್‌ನ ಅಪಾಯವನ್ನು ಹೆಚ್ಚಿಸುವ FLCN ನ ನಿರ್ದಿಷ್ಟ ರೂಪಾಂತರದ ಜೀನ್ ಅನ್ನು ಹೊಂದಿದ್ದಾರೆ ಎಂದು ಕಂಡುಹಿಡಿದಿದ್ದಾರೆ. ಬರ್ಟ್-ಹಾಗ್-ಡ್ಯೂಬ್ ಸಿಂಡ್ರೋಮ್ ಅಪರೂಪದ, ಆನುವಂಶಿಕ ಅಸ್ವಸ್ಥತೆಯಾಗಿದ್ದು,…
ಜಾಗತಿಕವಾಗಿ ಜ್ವರ ಪ್ರಕರಣಗಳ ಏರಿಕೆಗೆ ಕೋವಿಡ್ ಪ್ರೇರಿತ ರೋಗನಿರೋಧಕ ಕ್ರಮವೇ ಕಾರಣ! ಕಹಿ ಸತ್ಯ ಬಯಲು
ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಸಮಯದಲ್ಲಿ ವಿಸ್ತರಿಸಲಾದ ನಿರ್ಬಂಧಗಳಿಂದ ಉಂಟಾಗುವ ‘ರೋಗನಿರೋಧಕ ಕ್ರಮ’ವು ಜಾಗತಿಕ ಜ್ವರ ಪ್ರಸರಣ ಮಾದರಿಗಳಲ್ಲಿ ಬದಲಾವಣೆಗಳನ್ನು ಹೇಗೆ ಉಂಟುಮಾಡುತ್ತಿದೆ ಎಂಬುದರ ಕುರಿತು ಲಂಡನ್ನಿನ ಸಂಶೋಧಕರ ತಂಡವು ಪುರಾವೆಗಳನ್ನು ಕಂಡುಕೊಂಡಿದೆ. ‘ರೋಗನಿರೋಧಕ ಸಾಲ’ ಎಂಬುದು ಒಂದು ವಿದ್ಯಮಾನವಾಗಿದ್ದು, ಅಲ್ಲಿ ದೀರ್ಘಕಾಲದವರೆಗೆ ಕಡಿಮೆಯಾದ ನಂತರ ಜನಸಂಖ್ಯೆಯು ಸೋಂಕುಗಳಿಗೆ ಹೆಚ್ಚು ಒಳಗಾಗುತ್ತದೆ. ಊಹೆಯನ್ನು ವ್ಯಾಪಕವಾಗಿ ಅಂಗೀಕರಿಸಲಾಗಿದ್ದರೂ, ಇಲ್ಲಿಯವರೆಗೆ ಸಿದ್ಧಾಂತವನ್ನು ಬೆಂಬಲಿಸಲು ಕಡಿಮೆ ಪುರಾವೆಗಳಿವೆ. ಕೋವಿಡ್ ಸಾಂಕ್ರಾಮಿಕವು ಪ್ರಪಂಚದಾದ್ಯಂತದ ಅನೇಕ ದೇಶಗಳು ಲಾಕ್‌ಡೌನ್‌ಗಳು, ಸಾಮಾಜಿಕ ಅಂತರ, ಮುಖವಾಡ ಧರಿಸುವುದು ಮತ್ತು ಪ್ರಯಾಣ ನಿರ್ಬಂಧಗಳಂತಹ ಕಟ್ಟುನಿಟ್ಟಾದ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಜಾರಿಗೆ ತರಲು ಕಾರಣವಾಯಿತು. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಈ ಕ್ರಮಗಳು ನಿರ್ಣಾಯಕ ಮತ್ತು ಪರಿಣಾಮಕಾರಿಯಾಗಿದ್ದರೂ, ಅವು ಇನ್ಫ್ಲುಯೆನ್ಸ (ಜ್ವರ) ಮತ್ತು ಉಸಿರಾಟದ ವೈರಸ್‌ಗಳಂತಹ ಇತರ ಕಾಯಿಲೆಗಳ ಪ್ರಕರಣಗಳಲ್ಲಿ ನಾಟಕೀಯ ಕುಸಿತಕ್ಕೆ ಕಾರಣವಾಯಿತು. ಆದಾಗ್ಯೂ, ವಿಶ್ವಾದ್ಯಂತ ಕೋವಿಡ್ ನಂತರದ ದೇಶಗಳಲ್ಲಿ…
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಅಭಿವೃದ್ಧಿಯ ಶಕೆ; ಸಚಿವ ರಾಮಲಿಂಗಾ ರೆಡ್ಡಿಗೆ ಸೆಲ್ಯೂಟ್ ಎಂದ ಜನ
ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯಲ್ಲಿ ಹೊಸ ಅಭಿವೃದ್ಧಿಯ ಶಕೆ ಆರಂಭವಾಗಿದೆ. ಸಾರಿಗೆ ನಿಗಮಗಳಲ್ಲಿ ಒಂದಾದ KKRTC ವ್ಯಾಪ್ತಿಯಲ್ಲಿ ಹಲವು ಅಭುದ್ದಿ ಕೆಲಸಗಳಿಗೆ ಸಾರಿಗೆ ಸಚಿವರು ಮುನ್ನುಡಿ ಬರೆದಿದ್ದಾರೆ. ಯೋಜನೆಗಳ ತ್ವರಿತ ಹಾಗೂ ಪರಿಣಾಮಕಾರಿ ಜಾರಿಗಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಕ್ರಮದ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದ ಜನರು ಅಭಿನಂಧಿಸಿದ ಸನ್ನಿವೇಶ ಗಮನಸೆಳೆಯಿತು. ಇದಕ್ಕೆ ಸಾಕ್ಷಿಯಾದದ್ದು, ಕೊಪ್ಪಳ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿನ ನೂತನ ಬಸ್ ನಿಲ್ದಾಣಗಳ ಉದ್ಘಾಟನಾ ಸಮಾರಂಭ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ನೂತನ ಬಸ್ ನಿಲ್ದಾಣ, ಸಿಬ್ಬಂದಿ ವಸತಿಗೃಹ, ಘಟಕಗಳಿಗೆ ಶಂಕು ಸ್ಥಾಪನೆ ಮತ್ತು ಉದ್ಘಾಟನೆಯನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾರಿಗೆ ನಿಗಮಗಳ ಸಿಬ್ಬಂದಿ ಸಮೂಹ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ತಾವು ಸಚಿವರಾದ ನಂತರ ಸಾರಿಗೆ ನಿಗಮಗಳಲ್ಲಿ ಅಭೂತಪೂರ್ವ ಅಭಿವೃದ್ಧಿಯಾಗಿದೆ…
ಬಿಜೆಪಿ ನಾಯಕರಿಗೆ ಶಾಕ್..! ಶೇ.40 ಕಮಿಷನ್ ಆರೋಪ ಬಗ್ಗೆ ತನಿಖೆಗೆ SIT ರಚಿಸಲು ಸಂಪುಟ ನಿರ್ಧಾರ
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಕೈಗೊಂಡಿರುವ ಬಿಜೆಪಿ ನಾಯಕರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಶಾಕ್ ನೀಡಿದೆ. ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧದ ಶೇ. 40 ರಷ್ಟು ಕಮಿಷನ್ ಆರೋಪಗಳ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ತನಿಖಾ ವರದಿ ಆಧರಿಸಿ ಹೆಚ್ಚಿನ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಾ ತೀರ್ಮಾನಗಳ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಬಿಜೆಪಿ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪದ ತನಿಖೆಗೆ ರಚನೆಯಾಗಿದ್ದ ನ್ಯಾ. ನಾಗಮೋಹನ್ ದಾಸ್ ವಿಚಾರಣಾ ಆಯೋಗ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಯಿತು ಎಂದು ತಿಳಿಸಿದರು. ಸಂಪುಟ ಸಭೆಯು ವಿಚಾರಣಾ ಆಯೋಗದ ವರದಿ ಆಧಾರದಲ್ಲಿ ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲು…
