ಶ್ರೀ ಕಟೀಲು ಕ್ಷೇತ್ರದಲ್ಲಿ ನಿತ್ಯವೂ ಕೈಂಕರ್ಯ, ಜ್ಞಾನಾರ್ಜನೆ

ಮಂಗಳೂರು: ‘ಕಟೀಲು’ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಉರಾದರೂ ಇಲ್ಲಿನ ದೇಗುಲವು ಜಗದಗಲ ಖ್ಯಾತಿಯನ್ನು ಹೊಂದಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಮಂಗಳೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ನಂದಿನಿ ನದಿಯ ಮಧ್ಯೆ ಇದ್ದು, ಹಚ್ಚ ಹಸಿರಿನ ವನಸಿರಿಯ ಸಿಂಗಾರದಿಂದಾಗಿ ಪ್ರವಾಸಿಗರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ನಿತ್ಯವೂ ಭಕ್ತಸಾಗರದಿಂದ ತುಂಬಿ ತುಳುಕುತ್ತಿರುವ ಕಟೀಲು ದೇಗುಲವು ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲಗಳಲ್ಲೊಂದು. ಇದೀಗ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ವಾರ್ಷಿಕ ಅದ್ಧೂರಿ ಜಾತ್ರೆಗೆ ಸಾಕ್ಷಿಯಾಗುತ್ತಿದೆ. ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ 8 ದಿನಗಳ ಕಾಲ ಈ ವೈಭವ ನೆರವೇರುತ್ತದೆ. ವೈಶಿಷ್ಟ್ಯಗಳೊಂದಿಗೆ ಮೊದಲ ದಿನ ಕೋಡಿ (ಧ್ವಜ) ಏರಿಸುವ ಮೂಲಕ ಜಾತ್ರೆ ಆರಂಭವಾಗುತ್ತದೆ. 3ನೇ ದಿನ ದೇವರ ಮೂಡು ಸವಾರಿ (ಮೂಡಣದ ದಿಕ್ಕಿಗೆ) ನಡೆಯುತ್ತದೆ.…

‘ಭಾರತಾಂಬೆ’ಯಾಗಿ ಗಮನಸೆಳೆದ ‘ಶ್ರೀ ಕಟೀಲೇಶ್ವರಿ’; ಕರಾವಳಿಯ ಪುಣ್ಯಕ್ಷೇತ್ರದಲ್ಲಿ ವಿಶೇಷ ರೀತಿ ಸ್ವಾತಂತ್ರ್ಯೋತ್ಸವ

ಮಂಗಳೂರು: ಜಗದಾಂಬೆ ಶ್ರೀ ಕಟೀಲೇಶ್ವರಿ ಇಂದು ಭಾರತಾಂಭೆಯಾಗಿ ಗಮನಸೆಳೆದದ್ದು ವಿಶೇಷ. ಸ್ವಾತಂತ್ರ್ಯೋತ್ಸವ ದಿನದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ವಿಗ್ರಹವು ರಾಷ್ಟ್ರಧ್ವಜದ ಬಣ್ಣದ ವಸ್ತ್ರಾಲಂಕಾರದಿಂದ ಭಕ್ತರ ಕುತೂಹಲದ ಕೇಂದ್ರಬಿಂದುವಾಗಿತ್ತು. ಕರಾವಳಿಯ ಪುಣ್ಯಕ್ಷೇತ್ರ ಕಟೀಲಿನಲ್ಲೂ ದೇಶಭಕ್ತಿಯ ಮಹಾ ಹಬ್ಬವನ್ನು ಆಚರಿಸಲಾಯಿತು. ಹಿಂದೂ ಧಾರ್ಮಿಕ ಹಬ್ಬಗಳಂದು ವಿಶೇಷ ಕೈಂಕರ್ಯಗಳಿಂದ ಭಕ್ತರನ್ನು ಕೈಬೀಸಿ ಕರೆಯುವ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನವಾದ ಇಂದು ಈ ರೀತಿಯ ಆಕರ್ಷಣೆ ಕಂಡುಬಂತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಅನುವಂಶೀಯ ಹಿರಿಯ ಅರ್ಚಕರಾದ ಅನಂತ ಆಸ್ರಣ್ಣ ಅವರ ಪುತ್ರ ಶ್ರೀಕರ ಆಸ್ರಣ್ಣ ಅವರ ಕೈಚಳಕದಿಂದಾಗಿ ದೇವಿ ಇಂದು ಭಾರತ ಮಾತೆಯಾಗಿ ಕಂಗೊಳಿಸಿದ್ದಾಳೆ. ಕಳೆದ ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಶ್ರೀಕರ ಆಸ್ರಣ್ಣ ಅವರು ಈ ರೀತಿಯ ಅಲಂಕಾರ ಮಾಡಿ ಕೈಂಕರ್ಯ ನೆರವೇರಿಸುತ್ತಿದ್ದಾರೆ ಎಂದು ಅನಂತ ಆಸ್ರಣ್ಣ ತಿಳಿಸಿದ್ದಾರೆ.  https://www.youtube.com/watch?v=2A912hJMCdU&feature=youtu.be ವಿಶೇಷ ರೀತಿ ಸ್ವಾತಂತ್ರ್ಯೋತ್ಸವ: ಶ್ರೀ ಕ್ಷೇತ್ರ ಕಟೀಲಿನ…