ಕಾವೇರಿ ಪ್ರವಾಹ ಎಚ್ಚರಿಕೆ: ತಮಿಳುನಾಡಿನ 11 ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ಸೂಚನೆ

ಚೆನ್ನೈ: ಕರ್ನಾಟಕದಲ್ಲಿ ಮುಂದುವರಿದಿರುವ ಭಾರೀ ಮಳೆಯಿಂದ ಅಣೆಕಟ್ಟೆಗಳು ವೇಗವಾಗಿ ತುಂಬುತ್ತಿದ್ದು, ಕಾವೇರಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಕೃಷ್ಣರಾಜ ಸಾಗರ (ಕೆಆರ್‌ಎಸ್) ಹಾಗೂ ಕಬಿನಿ ಅಣೆಕಟ್ಟುಗಳಿಂದ ಒಟ್ಟಾಗಿ 95,000 ಕ್ಯೂಸೆಕ್‌ ನೀರನ್ನು ಬಿಡುಗಡೆ ಮಾಡಲಾಗಿದ್ದು, ಇದರ ಪರಿಣಾಮವಾಗಿ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಭಾರೀ ಒಳಹರಿವು ದಾಖಲಾಗಿದೆ. ಮೆಟ್ಟೂರು ಅಣೆಕಟ್ಟು ಶೀಘ್ರದಲ್ಲೇ ಅದರ ಪೂರ್ಣ ಸಾಮರ್ಥ್ಯವಾದ 120 ಅಡಿಗಳನ್ನು ತಲುಪುವ ನಿರೀಕ್ಷೆಯಿದ್ದು, ಬಳಿಕ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಜಲಸಂಪನ್ಮೂಲ ಇಲಾಖೆ ಕಾವೇರಿ ತೀರದ ಸೇಲಂ, ಈರೋಡ್, ನಾಮಕ್ಕಲ್, ಕರೂರ್, ಅರಿಯಲೂರು, ತಿರುಚಿ, ತಂಜಾವೂರು, ತಿರುವರೂರು, ಮೈಲಾಡುತುರೈ, ನಾಗಪಟ್ಟಣಂ ಹಾಗೂ ಕಡಲೂರು ಜಿಲ್ಲೆಗಳ ತಗ್ಗು ಪ್ರದೇಶಗಳಿಗೆ ಪ್ರವಾಹ ಎಚ್ಚರಿಕೆ ನೀಡಿದೆ. ಸ್ಥಳೀಯ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳಿ ಜೀವ ಮತ್ತು ಆಸ್ತಿ ರಕ್ಷಿಸಿಕೊಳ್ಳುವಂತೆ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಮಳೆ ಬಿರುಸುಗೊಳ್ಳಲಿದೆ: ಹಲವು ಜಿಲ್ಲೆಗಳಿಗೆ ಎಚ್ಚರಿಕೆ

ಬೆಂಗಳೂರು: ಆಗಸ್ಟ್‌ 24ರವರೆಗೆ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಆಗಸ್ಟ್‌ 19ರಂದು (ಮಂಗಳವಾರ) ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಧಾರವಾಡ, ಚಿಕ್ಕಮಗಳೂರು, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ನೀಡಲಾಗಿದೆ. ದಕ್ಷಿಣ ಕನ್ನಡ, ಬೆಳಗಾವಿ, ಬೀದರ್‌, ಕಲಬುರಗಿ, ವಿಜಯಪುರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಜಾರಿಯಲ್ಲಿದೆ. ಬಾಗಲಕೋಟ, ಯಾದಗಿರಿ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ.

13.59 ಲಕ್ಷ ಮನೆಗಳ ವಿದ್ಯುದ್ದೀಕರಣಕ್ಕೆ 6,487 ಕೋಟಿ ರೂ. ಮಂಜೂರು

ನವದೆಹಲಿ: ದೇಶದಾದ್ಯಂತ 13.59 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಪರಿಷ್ಕೃತ ವಿತರಣಾ ವಲಯ ಯೋಜನೆ (RDSS) ಅಡಿಯಲ್ಲಿ 6,487 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೊ ನಾಯಕ್ ತಿಳಿಸಿದ್ದಾರೆ. “ಅತ್ಯಂತ ದೂರದ ಮೂಲೆಗಳಲ್ಲಿಯೂ ಪ್ರತೀ ಕುಟುಂಬಕ್ಕೂ ವಿದ್ಯುತ್ ತಲುಪಿಸುವುದು ಸರ್ಕಾರದ ಗುರಿಯಾಗಿದೆ. ಈ ಕಾರ್ಯದಲ್ಲಿ ವಿವಿಧ ಉಪಯುಕ್ತತೆ ಸಂಸ್ಥೆಗಳ ಸಮೀಕ್ಷೆ ಆಧಾರವಾಗಲಿದೆ” ಎಂದು ಸಚಿವರು ಸೋಮವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಹೇಳಿದರು. RDSS ಅಡಿಯಲ್ಲಿ, PVTG ಕುಟುಂಬಗಳು (PM-JANMAN), ಬುಡಕಟ್ಟು ಕುಟುಂಬಗಳು (DA-JGUA), ಪರಿಶಿಷ್ಟ ಜಾತಿ ಕುಟುಂಬಗಳು (PM-AJAY) ಹಾಗೂ ದೂರದ ಮತ್ತು ಗಡಿ ಪ್ರದೇಶಗಳ ಮನೆಗಳು (ವೈಬ್ರಂಟ್ ಗ್ರಾಮ ಯೋಜನೆ) ಗಳಿಗೆ ಆದ್ಯತೆ ನೀಡಲಾಗುತ್ತಿದೆ. ಗ್ರಿಡ್ ಸಂಪರ್ಕಗಳ ಜೊತೆಗೆ ನವೀಕರಿಸಬಹುದಾದ ಇಂಧನ ಬಳಕೆಯನ್ನೂ ಉತ್ತೇಜಿಸಲಾಗುತ್ತಿದೆ. ಜೂನ್‌ 30ರವರೆಗೆ 9,961 ಮನೆಗಳಿಗೆ…

ಲಿಂಗ ಸಮಾನತೆ, ಮಹಿಳಾ ನಾಯಕತ್ವಕ್ಕೆ ಕರೆ ನೀಡಿದ ಸರಸಂಘಚಾಲಕ್

ನವದೆಹಲಿ: ಸಮಾಜದಲ್ಲಿ ಮಹಿಳೆಯರ ಪಾತ್ರ, ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಅವರ ಪ್ರಾಬಲ್ಯ ಹೆಚ್ಚಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಡಾ. ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.. “ತನ್ ಸಮರ್ಪಿತ್, ಮ್ಯಾನ್ ಸಮರ್ಪಿತ್” ಎಂಬ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರು ಕೇವಲ ಸಹಭಾಗಿಗಳಲ್ಲ, ಬದಲಾವಣೆಯ ನಿಜವಾದ ಮಾರ್ಗದರ್ಶಕ ಶಕ್ತಿಯೂ ಆಗಿದ್ದಾರೆ ಎಂದು ಹೇಳಿದರು. “ಜೈಪುರದಲ್ಲಿ ಸಂಘದಲ್ಲಿ ಎಷ್ಟು ಮಹಿಳೆಯರು ಇದ್ದಾರೆ ಎಂದು ಕೇಳಲಾಯಿತು. ನಮ್ಮ ಸ್ವಯಂಸೇವಕರ ಸಂಖ್ಯೆಗೆ ಸಮಾನವಾಗಿ ಮಹಿಳೆಯರು ಭಾಗಿಯಾಗಿದ್ದಾರೆ ಎಂದು ನಾನು ಉತ್ತರಿಸಿದ್ದೇನೆ. ಸಮಾಜದ ಕಲ್ಯಾಣಕ್ಕಾಗಿ ನಡೆಯುವ ಎಲ್ಲ ಚಟುವಟಿಕೆಗಳಲ್ಲಿಯೂ ಮಹಿಳೆಯರು ಪುರುಷರೊಂದಿಗೆ ಕೈಜೋಡಿಸುತ್ತಿದ್ದಾರೆ. ಪ್ರಮುಖ ನಾಯಕತ್ವದ ಜವಾಬ್ದಾರಿಗಳನ್ನೂ ಮಹಿಳೆಯರು ನಿರ್ವಹಿಸುತ್ತಿದ್ದಾರೆ,” ಎಂದು ಅವರು ವಿವರಿಸಿದರು. ಇತ್ತೀಚೆಗೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನೀಡಿದ ಹೇಳಿಕೆಗಳನ್ನು ಸ್ಮರಿಸಿದ ಭಾಗವತ್, “ರಾಷ್ಟ್ರೀಯ ಪ್ರಗತಿಗೆ ಮಹಿಳಾ ಸಬಲೀಕರಣ ಅಗತ್ಯ. ದೇವರು ಮಹಿಳೆಯರಿಗೆ ಪುರುಷರಿಗೆ ನೀಡಿದ ಎಲ್ಲ ಗುಣಗಳನ್ನು…

ಬೆಳಗಾವಿ ಬಾಣಂತಿಯರ ಸಾವು ಪ್ರಕರಣ ಕುರಿತು ಪರಿಶೀಲನೆ: ಪರಿಷತ್‌ನಲ್ಲಿ ಸಚಿವರ ಮಾಹಿತಿ

ಬೆಂಗಳೂರು: ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರು ಮತ್ತು ಶಿಶುಗಳ ಸಾವು ವಿಚಾರದ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್‌. ಪಾಟೀಲ್ ತಿಳಿಸಿದ್ದಾರೆ. ವಿಧಾನಪರಿಷತ್‌ನ ಸೋಮವಾರದ ಕಲಾಪದಲ್ಲಿ ಸದಸ್ಯರಾದ ಎನ್‌.ನಾಗರಾಜ್‌ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿರುವ ಸಚಿವರು, ಬೆಳಗಾವಿ ಪ್ರಕರಣದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಸಮಗ್ರ ವರದಿ ಸಲ್ಲಿಸಲು ತಿಳಿಸಿದ್ದೇನೆ ಎಂದರು. ನಮ್ಮ ರಾಜ್ಯದಲ್ಲಿ ಬಾಣಂತಿಯರು/ಶಿಶುಗಳ ಮರಣ ಪ್ರಮಾಣ 7.97 ಆವರೇಜ್ ಇದೆ. ಬೆಳಗಾವಿಯಲ್ಲಿ 7.72 ರಷ್ಟು ಇದೆ. ಇದನ್ನು ನಾನು ಸಮರ್ಥನೆ ಮಾಡುತ್ತಿಲ್ಲ. ಈ ಕುರಿತು ಮಾಹಿತಿ ನೀಡುತ್ತೇನೆ ಎಂದರು. ಬೆಳಗಾವಿ ಬಿಮ್ಸ್ ಗೆ ತುಂಬಾ ದೂರದ ಊರು, ಗ್ರಾಮಗಳಿಂದ ಜನರು ಬರುತ್ತಾರೆ. ಹೈ ರಿಸ್ಕ್ ಪ್ರೆಗ್ನೆನ್ಸಿಸ್ ಕೂಡ ಇರುತ್ತದೆ. ಈ ಮರಣಗಳಿಗೆ…

ಹೃದಯಾಘಾತ ಬಗ್ಗೆ ಜನತೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು: ಡಾ.ಶರಣ್ ಪ್ರಕಾಶ್ ಪಾಟೀಲ್

ಬೆಂಗಳೂರು:ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳಿಗೆ ಜನತೆ ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು. ವ್ಯಾಯಾಮ, ಪ್ರಾಣಾಯಾಮ, ಆಹಾರಪದ್ಧತಿ ಹಾಗೂ ಜೀವನ ಶೈಲಿಯನ್ನು ಬದಲಾವಣೆ ಮಾಡಿದರೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಜನತೆಗೆ ಧೈರ್ಯ ತುಂಬಿದ್ದಾರೆ. ವಿಧಾನ ಪರಿಷತ್ ನಲ್ಲಿ ಸೋಮವಾರ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆ ಉತ್ತರಿಸಿದ ಅವರು, ಇತ್ತೀಚೆಗೆ ಹೃದಯಾಘಾತ, ಪ್ರಕರಣಗಳ ಸಂಖ್ಯೆ ಹೆಚ್ಚಳದ ಆತಂಕ ಎಲ್ಲರಲ್ಲೂ ಮನೆ ಮಾಡಿದೆ. ಜಯದೇವ ಆಸ್ಪತ್ರೆಯಲ್ಲಿ ಜನರು ಪ್ರತಿನಿತ್ಯ ಬಂದು ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಪ್ರಮಾಣ ಶೇ.25ರಷ್ಟು ಏರಿಕೆಯಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದರು. ವಿಶೇಷವಾಗಿ ಹಾಸನ ಜಿಲ್ಲೆಯಲ್ಲಿ ಹೃದಯಘಾತಗಳ ಸಂಖ್ಯೆ ಹೆಚ್ಚಳವಾಗಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. ಇದು ತಪ್ಪು ಗ್ರಹಿಕೆ. ವಾಸ್ತವವಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸರಾಸರಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಶೇ.5ರಿಂದ 6ರಷ್ಟು ಪ್ರಕರಣಗಳು ಹೃದಯಾಘಾತಕ್ಕೆ ಸಂಬಂಧಿಸಿದವು.…

ಧರ್ಮಸ್ಥಳಕ್ಕೆ ಬಿಜೆಪಿ ನಾಯಕರ ಭೇಟಿ; ಸುಳ್ಳು ಪ್ರಚಾರ ಬಗ್ಗೆ ಸಿಎಂ ಕ್ಷಮೆಯಾಚನೆಗೆ ಆಗ್ರಹ

ಮಂಗಳೂರು: ಹಾಸನ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿರುವ ಸಾಮೂಹಿಕ ಸಮಾಧಿ ಪ್ರಕರಣ ಆಧರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ರಾಜ್ಯ ಬಿಜೆಪಿ ನಾಯಕರು ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ನಿಯೋಗವು ಮಂಜುನಾಥ ಸ್ವಾಮಿಗೆ ದರ್ಶನ ನೀಡಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿತು. ನಿಯೋಗದಲ್ಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಪ್ರಮುಖ ನಾಯಕರು ಸೇರಿದ್ದರು. “ಭಕ್ತರ ಭಾವನೆಗಳಿಗೆ ಧಕ್ಕೆ, ಸಿಎಂ ಕ್ಷಮೆಯಾಚನೆ ಬೇಕು” ಸಾಮೂಹಿಕ ಸಮಾಧಿ ವಿಚಾರದ ಕುರಿತು ಸರ್ಕಾರದ ನಿಶ್ಕ್ರಿಯತೆ ಹಾಗೂ ಮೌನವನ್ನು ಟೀಕಿಸಿದ ವಿಜಯೇಂದ್ರ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿರುವ ಸುಳ್ಳು ಪ್ರಚಾರವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಅವರು ಜನರ ಕ್ಷಮೆಯಾಚಿಸಬೇಕು” ಎಂದು ಹೇಳಿದರು. ವಿಜಯೇಂದ್ರ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ…

ತಾಯ್ನಾಡಿಗೆ ವಾಪಸ್ಸಾದ ಶುಭಾಂಶು ಶುಕ್ಲಾಗೆ ಅದ್ಧೂರಿ ಸ್ವಾಗತ

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಭಾನುವಾರ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ಮಧ್ಯರಾತ್ರಿ 1:30ರ ವೇಳೆಗೆ ಅಮೆರಿಕದಿಂದ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾ ಅವರಿಗೆ ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. #WATCH | Delhi: Group Captain Shubhanshu Shukla arrives back in India. He is welcomed by Union MoS for Science & Technology, Dr Jitendra Singh and Delhi CM Rekha Gupta. He was the pilot of NASA's Axiom-4 Space Mission, which took off from NASA's Kennedy Space Centre in Florida,… pic.twitter.com/FTpP1NaY0O — ANI (@ANI) August 16, 2025 ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ…

ಡೌನ್‌ ಸಿಂಡ್ರೋಮ್ ಇರುವ ಮಹಿಳೆಯರಿಗೆ Alzheimer ಹೆಚ್ಚು ಅಪಾಯ

ನವದೆಹಲಿ: ಡೌನ್‌ ಸಿಂಡ್ರೋಮ್‌ ಹೊಂದಿರುವ ಮಹಿಳೆಯರು, ಪುರುಷರಿಗಿಂತ ಆಲ್ಝೈಮರ್‌ (Alzheimer) ಕಾಯಿಲೆಯ ಮುಂದುವರಿದ ಹಂತಕ್ಕೆ ತಲುಪುವ ಅಪಾಯ ಹೆಚ್ಚಿದೆ ಎಂಬುದನ್ನು ಹೊಸ ಸಂಶೋಧನೆ ಬಹಿರಂಗಪಡಿಸಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (ಇರ್ವಿನ್) ನಡೆಸಿದ ಅಧ್ಯಯನದ ಪ್ರಕಾರ, ಮಹಿಳೆಯರ ಮೆದುಳಿನಲ್ಲಿ ಬೀಟಾ ಅಮಿಲಾಯ್ಡ್ ಮತ್ತು ಫಾಸ್ಫೊರಿಲೇಟೆಡ್ ಟೌ ಎಂಬ ಆಲ್ಝೈಮರ್‌ನ ಪ್ರಮುಖ ಪ್ರೋಟೀನ್‌ಗಳು ಹೆಚ್ಚು ಸಂಗ್ರಹವಾಗಿರುವುದು ಪತ್ತೆಯಾಗಿದೆ. ಈ ವ್ಯತ್ಯಾಸವು ವಿಶೇಷವಾಗಿ ಆಕ್ಸಿಪಿಟಲ್ ಲೋಬ್ ಭಾಗದಲ್ಲಿ ಹೆಚ್ಚು ಕಂಡುಬಂದಿದೆ. ಡೌನ್‌ ಸಿಂಡ್ರೋಮ್‌ನ ರೋಗನಿರ್ಣಯದ ಸರಾಸರಿ ವಯಸ್ಸು ಪುರುಷ–ಮಹಿಳೆಯರಿಬ್ಬರಿಗೂ ಒಂದೇ ಆಗಿದ್ದರೂ, ಮಹಿಳೆಯರಲ್ಲಿ ರೋಗದ ಪ್ರಗತಿ ವೇಗವಾಗಿ ನಡೆದಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. “ಮಹಿಳೆಯರು ಮತ್ತು ಪುರುಷರಲ್ಲಿ ಮೆದುಳಿನ ಬದಲಾವಣೆಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ತಿಳಿಯುವುದು ಚಿಕಿತ್ಸೆ ಯಶಸ್ಸು ಸಾಧಿಸಲು ಮಹತ್ವದ್ದಾಗಿದೆ. ಲಿಂಗ-ನಿರ್ದಿಷ್ಟ ಅಪಾಯ ಅಂಶಗಳನ್ನು ಲೆಕ್ಕಿಸುವುದು ಮುಂದಿನ ಹಂತ,” ಎಂದು ಮುಖ್ಯ ಸಂಶೋಧಕಿ ಎಲಿಜಬೆತ್ ಆಂಡ್ರ್ಯೂಸ್ ಹೇಳಿದರು. ಡೌನ್‌ ಸಿಂಡ್ರೋಮ್‌ ಹೊಂದಿರುವವರಲ್ಲಿ…

ಟೀಸರ್: ನಿವಿನ್–ನಯನ ಜೋಡಿ ಹೊಸ ಕಮಿಡಿ ಆಕ್ಷನ್‌ ಚಿತ್ರ ‘ಡಿಯರ್ ಸ್ಟೂಡೆಂಟ್ಸ್’

ಚೆನ್ನೈ: ನಿವಿನ್ ಪೌಲಿ–ನಯನತಾರಾ ಅಭಿನಯದ ಡಿಯರ್ ಸ್ಟೂಡೆಂಟ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಜಾರ್ಜ್ ಫಿಲಿಪ್ ರಾಯ್ ಮತ್ತು ಸಂದೀಪ್ ಕುಮಾರ್ ನಿರ್ದೇಶನದ ಈ ಚಿತ್ರ ಹಾಸ್ಯ–ಆಕ್ಷನ್‌ ಮಿಶ್ರಣವಾಗಿದೆ. ಟೀಸರ್‌ನಲ್ಲಿ, ಬೇಕರಿ ಮಾಲೀಕರಾದ ಹರಿ (ನಿವಿನ್) ಮತ್ತು ಗ್ರಾಹಕರಂತೆ ಬಂದು ಕುಳಿತ ನಯನತಾರಾ ನಡುವಿನ ಮನರಂಜನೀಯ ಸಂಭಾಷಣೆ ಪ್ರೇಕ್ಷಕರನ್ನು ನಗೆಗಡಲಿಗೆ ತಳ್ಳುತ್ತದೆ. ಆದರೆ ತಕ್ಷಣವೇ ನಯನತಾರಾ ಪೊಲೀಸ್ ಅಧಿಕಾರಿಯೆಂದು ಬಹಿರಂಗವಾಗುವ ತಿರುವು ಕಥೆಗೆ ಹೊಸ ಮಜಾ ನೀಡುತ್ತದೆ. ಶಾಲಾ ವಿದ್ಯಾರ್ಥಿಗಳ ಕಥಾಹಂದರದ ಮೇಲೆ ಸಾಗುವ ಈ ಚಿತ್ರದಲ್ಲಿ ಹಾಸ್ಯದ ಜೊತೆ ಸಾಕಷ್ಟು ಆಕ್ಷನ್‌ ದೃಶ್ಯಗಳೂ ಇವೆ. ಛಾಯಾಗ್ರಹಣ: ಅನಿಲ್ ಸಿ. ಚಂದ್ರನ್–ಶಿನೋಜ್, ಸಂಗೀತ: ಜಸ್ಟಿನ್ ವರ್ಗೀಸ್, ಹಿನ್ನೆಲೆ ಸಂಗೀತ: ಸಿಬಿ ಮ್ಯಾಥ್ಯೂ ಅಲೆಕ್ಸ್ ಹೀಗೆ ಹಲವ ಪ್ರತಿಭೆಗಳ ಸಮ್ಮಿಲನ ಇದರಲ್ಲಿದೆ.