‘ಹಿಟ್ ಅಂಡ್ ರನ್ ಪ್ರಕರಣ: ಬೆಂಗಳೂರು ಪೊಲೀಸರಿಂದ ದಿವ್ಯಾ ಸುರೇಶ್ ವಿಚಾರಣೆ?

ಬೆಂಗಳೂರು: ಬೆಂಗಳೂರಿನ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾದ ಹಿಟ್ ಅಂಡ್ ರನ್ ಪ್ರಕರಣದ ಪೊಲೀಸ್ ತನಿಖೆಯಲ್ಲಿ ಕನ್ನಡ ನಟಿ ಮತ್ತು ಬಿಗ್ ಬಾಸ್ ಕನ್ನಡ ಸ್ಪರ್ಧಿ ದಿವ್ಯಾ ಸುರೇಶ್ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಮೂವತ್ನಾಲ್ಕು ವರ್ಷದ ಅನಿತಾ ಅವರ ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇತರ ಇಬ್ಬರು ಸವಾರರು ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ. Weeks after a late-night hit-and-run accident in Bengaluru, the city traffic police on Friday identified ex Bigg Boss Kannada contestant Divya Suresh as the alleged driver of the car involved in the accident that left three people injured. The accident took place near…

ಎನ್‌ಡಿಎ ಗೆಲುವಿನ ವಿಶ್ವಾಸ ಬಲವಾದದ್ದು: ಆನಂದ್ ಮಿಶ್ರಾ

ಬಕ್ಸರ್: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ, “ವಿಕ್ಷಿತ್ ಬಿಹಾರ ಮತ್ತು ವಿಕ್ಷಿತ್ ಬಕ್ಸರ್ ನಿರ್ಮಿಸುವುದು ನನ್ನ ದೃಢನಿಶ್ಚಯ” ಎಂದು ತಿಳಿಸಿದ್ದಾರೆ. ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯದ ಜನತೆ ಈಗ ಎನ್‌ಡಿಎ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣದ ಬದ್ಧತೆಯನ್ನು ಅರಿತುಕೊಂಡಿದ್ದಾರೆ. ಬಿಜೆಪಿ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ತತ್ವದ ಮೂಲಕ ಸಮಗ್ರ ಬಿಹಾರದ ನಿರ್ಮಾಣಕ್ಕೆ ಬದ್ಧವಾಗಿದೆ,” ಎಂದು ಹೇಳಿದರು. ಈ ಹೇಳಿಕೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿವಾನ್‌ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ನೇತೃತ್ವದ ಮಹಾಘಟಬಂಧನ್‌ ವಿರುದ್ಧ ತೀವ್ರ ಟೀಕೆ ಮಾಡಿದ ಬಳಿಕ ಬಂದಿವೆ. ಅಮಿತ್ ಶಾ ಅವರ ಬಕ್ಸರ್ ರ್ಯಾಲಿಯ ಕುರಿತು ಮಾತನಾಡಿದ ಮಿಶ್ರಾ, “ಗೃಹ…

ಗೃಹಲಕ್ಷ್ಮಿ ಫಲಾನುಭವಿಗಳಿಗಾಗಿ ಸಹಕಾರ ಸಂಘಗಳ ಸ್ಥಾಪನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಆರ್ಥಿಕ ಸಬಲೀಕರಣದತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿ ವಿವಿದೋದ್ದೇಶ ಸಹಕಾರ ಸಂಘಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಗುರಿಯೊಂದಿಗೆ ಕೈಗೊಂಡಿರುವ ಈ ಕ್ರಮದಡಿ, ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವುದು, ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದು ಹಾಗೂ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವುದು ಸಂಘಗಳ ಪ್ರಮುಖ ಉದ್ದೇಶವಾಗಲಿದೆ. “ಗೃಹಲಕ್ಷ್ಮಿಯರಿಗೆ ಆರ್ಥಿಕ ಬಲ – ಸ್ವ ಉದ್ಯೋಗಕ್ಕೆ ಬೆಂಬಲ” ಎಂಬ ಆಶಯದೊಂದಿಗೆ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣದ ನವ ಅಧ್ಯಾಯವನ್ನು ಆರಂಭಿಸಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮಹಿಳಾ ಸಬಲೀಕರಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಗುರಿಯೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ "ಗೃಹಲಕ್ಷ್ಮಿ ಯೋಜನೆ"ಯ ಫಲಾನುಭವಿಗಳಿಗಾಗಿ ವಿವಿದೋದ್ದೇಶ ಸಹಕಾರ ಸಂಘಗಳನ್ನು ಸ್ಥಾಪಿಸುವ ಮಹತ್ವದ ನಿರ್ಣಯ ಕೈಗೊಂಡಿದೆ.ಗೃಹಲಕ್ಷ್ಮಿ ಯೋಜನೆಯ…

ಖರ್ಗೆಯವರ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ; ಛಲವಾದಿ ನಾರಾಯಣ ಸ್ವಾಮಿ

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದ್ದಾರೆ. ಅದರಲ್ಲೂ ಪ್ರಿಯಾಂಕ್ ಖರ್ಗೆ ವಿರುದ್ಧ ಅವರು ಅಕ್ರೋಶ ವ್ಯಕ್ತಪಡಿಸಿರುವ ವೈಖರಿ ಗಮನಸೆಳೆದಿದೆ. ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ. ದಲಿತ ಸಮುದಾಯದ ಸಮಸ್ಯೆಗಳ ಕುರಿತು ಧ್ವನಿಯನ್ನೂ ಎತ್ತಿಲ್ಲ. ದಲಿತ ಸಮುದಾಯದ ಯಾವುದೇ ಹೋರಾಟಕ್ಕೂ ಕೈಜೋಡಿಸಿಲ್ಲ. ದಲಿತ ಸಮುದಾಯವನ್ನು ನಿಮ್ಮ ಸ್ವಾರ್ಥಕ್ಕಾಗಷ್ಟೇ ಬಳಸಿಕೊಂಡಿದ್ದೀರಿ. ನೂರು ವರ್ಷಗಳಿಂದ ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ಕೆಲಸ ಮಾಡಿರುವ… pic.twitter.com/oP5sHqdPU7 — BJP Karnataka (@BJP4Karnataka) October 24, 2025 ‘ಪ್ರಿಯಾಂಕ್ ಖರ್ಗೆ ಅವರೇ, ನಿಮ್ಮ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ. ದಲಿತ ಸಮುದಾಯದ ಸಮಸ್ಯೆಗಳ ಕುರಿತು ಧ್ವನಿಯನ್ನೂ ಎತ್ತಿಲ್ಲ. ದಲಿತ ಸಮುದಾಯದ ಯಾವುದೇ ಹೋರಾಟಕ್ಕೂ ಕೈಜೋಡಿಸಿಲ್ಲ. ದಲಿತ ಸಮುದಾಯವನ್ನು ನಿಮ್ಮ ಸ್ವಾರ್ಥಕ್ಕಾಗಷ್ಟೇ ಬಳಸಿಕೊಂಡಿದ್ದೀರಿ’ ಎಂದು ಛಲವಾದಿ ನಾರಾಯಣ…