2026 ರಲ್ಲಿ ಕೇರಳದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದ ಅಮಿತ್ ಶಾ

ತಿರುವನಂತಪುರಂ: ಕೇರಳದಲ್ಲಿ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಎರಡರ ಮೇಲೂ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 2026 ರ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ರಣಕಹಳೆ ಮೊಳಗಿಸಿದ್ದಾರೆ.

ಪುತ್ತರಿಕಂಡಂ ಮೈದಾನದಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ‘ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಪ್ರಾಬಲ್ಯವನ್ನು ಕೊನೆಗೊಳಿಸುವ ಸಮಯ ಬಂದಿದೆ. ನಮ್ಮ ಮತ ಹಂಚಿಕೆ ಶೇ. 11 ರಿಂದ ಶೇ. 20 ಕ್ಕೆ ಏರಿರುವುದರಿಂದ ನಾನು ರಾಜ್ಯದ ಜನರಿಗೆ ಧನ್ಯವಾದ ಹೇಳುತ್ತೇನೆ. 2026 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಇದು ಅಡಿಪಾಯವಾಗಿದೆ’ ಎಂದರು.

ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ 21,000 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ ಅವರು, ಪಕ್ಷದ ಮತ ಹಂಚಿಕೆಯನ್ನು ಶೇ. 25 ಕ್ಕೆ ಹೆಚ್ಚಿಸುವಂತೆ ಮತದಾರರನ್ನು ಒತ್ತಾಯಿಸಿದರು. ‘ನಾವು ಇನ್ನು ಮುಂದೆ ಉದಯೋನ್ಮುಖ ಶಕ್ತಿಯಲ್ಲ. ರಾಜ್ಯದಾದ್ಯಂತ 21,000 ವಾರ್ಡ್‌ಗಳಲ್ಲಿ ನಾವು ಈಗ ಅಸ್ತಿತ್ವವನ್ನು ಹೊಂದಿದ್ದೇವೆ’ ಎಂದು ಅವರು ಹೇಳಿದರು.

Related posts