ಕೊರೋನಾ ಭೀತಿ ಹಿನ್ನೆಲೆ ಮನೆಯಲ್ಲೇ ನಮಾಜ್ ಮಾಡಿ; ಖಾಝಿ ಕರೆ

ಮಂಗಳೂರು: ಕೊರೋನಾ ವೈರಾಣು ಸೋಂಕು ತಡೆಯಲು ಲಾಕ್’ಡೌನ್ ಜಾರಿಯಲ್ಲಿದ್ದುದರಿಂದಾಗಿ ಮಂದಿರ ಮಸೀದಿಗಳಲ್ಲೂ ಚಟುವಟಿಕೆಗಳು ಸ್ಥಬ್ಧವಾಗಿತ್ತು. ಇದೀಗ ಲಾಕ್’ಡೌನ್ ಸಡಿಲಿಕೆಯಾಗಿದ್ದು ಜೂನ್ 8 ರಿಂದ ದೇಗುಲ-ಮಸೀದಿ-ಚರ್ಚ್’ಗಳಲ್ಲಿ ನಿತ್ಯದ ಕೈಂಕರ್ಯಗಳು ಆರಂಭವಾಗಲಿದೆ.

ಇದೇ ವೇಳೆ, ಸಮುದಾಯದ ಭಾವನೆಗಳಿಗೆ ಗೌರವ ಕೊಟ್ಟು ಮಸೀದಿಗಳನ್ನು ತೆರೆಯಲು ಅವಕಾಶ ನೀಡಿದ ಸರಕಾರದ ತೀರ್ಮಾನ ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರಕಾರ ನೀಡಿದ ಆದೇಶ ಪಾಲಿಸಲು ಸಾಧ್ಯವಿರುವ ಮಸೀದಿಗಳಲ್ಲಿ ಅವರವರ ಜಮಾತ್ ಗಳಲ್ಲಿ ತೀರ್ಮಾನಿಸಿ ಜುಮಾ ಮತ್ತು ಜಮಾತ್ ನಮಾಝ್ ಗಳನ್ನು ನಿರ್ವಹಿಸಿಬಹುದು ಎಂದು ಸಲಹೆ ನೀಡಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಾ ವಿಶ್ವವೇ ಭಯದ ವಾತಾವರಣದಲ್ಲಿದೆ. ಇಂತಹಾ
ಭಯದ ಸನ್ನಿವೇಶದಲ್ಲಿ ಸಾಮಾಜಿಕ ಹಿತಾಸಕ್ತಿ ಬಗ್ಗೆಯೂ ಯೋಚಿಸಬೇಕಿದೆ. ನಮಾಝ್’ಗಳನ್ನು ಮನೆಯಲ್ಲಿ ನಿರ್ವಹಿಸಲು ಶರೀಅತ್ ಅನುಮತಿಸಿರುವಾಗ ಭಯಬೀತರಾಗದೇ ಸುರಕ್ಷಿತವಾಗಿ ತಮ್ಮ ತಮ್ಮ ಮನೆಗಳಲ್ಲಿಯೇ ನಮಾಝ್’ಗಳನ್ನು ನಿರ್ವಹಿಸಬಹುದಾಗಿದೆ ಎಂದು ಖಾಝಿಯವರಾದ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ.. ದೇವಾಲಯ, ಮಸೀದಿಗಳಲ್ಲಿ ಹೇಗಿರಬೇಕು; ಸರ್ಕಾರದಿಂದ ಮಾರ್ಗಸೂಚಿ

Related posts