ಹೈದರಾಬಾದ್: ಐಪಿಎಲ್ 2026ರ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ತವರು ಮೈದಾನದಲ್ಲಿ ಆಡಿದರೂ ಸನ್‌ರೈಸರ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ 165 ರನ್‌ಗಳಿಗೆ ಸೀಮಿತವಾಯಿತು. ಈ ಗುರಿಯನ್ನು ಕೆಕೆಆರ್ ತಂಡ ಸುಲಭವಾಗಿ ಬೆನ್ನಟ್ಟಿದ್ದು, ಕೇವಲ 3 ವಿಕೆಟ್ ಕಳೆದುಕೊಂಡು 18.2 ಓವರ್‌ಗಳಲ್ಲಿ ಜಯದ ನಗೆ ಬೀರಿತು. ಇದರೊಂದಿಗೆ ಕೆಕೆಆರ್ ಮೂರನೇ ಗೆಲುವು ದಾಖಲಿಸಿದರೆ, ಸನ್‌ರೈಸರ್ಸ್ ನಾಲ್ಕನೇ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್‌ಗೆ ಆರಂಭಿಕವಾಗಿ ಅಭಿಷೇಕ್ ಮತ್ತು ಹೆಡ್ ಉತ್ತಮ ಬೆಂಬಲ ನೀಡಿದರು. ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟದ ನಂತರ ಟ್ರಾವಿಸ್ ಹೆಡ್ (Travis Head) ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ 28 ಎಸೆತಗಳಲ್ಲಿ 61 ರನ್ ಗಳಿಸಿ ತಂಡವನ್ನು ಶತಕದ ಗಡಿಗೆ ಕೊಂಡೊಯ್ದರು. ಆದರೆ ನಂತರದ ಹಂತದಲ್ಲಿ…
