ನವದೆಹಲಿ: ಬಿರುಬೇಸಿಗೆಯಿಂದ ಕಂಗೆಟ್ಟ ಜನತೆಗೆ ಮಳೆಯ ಸಿಹಿಸುದ್ದಿ ಸಿಕ್ಕಿದ್ದು, ಈ ವರ್ಷ ನೈಋತ್ಯ ಮುಂಗಾರು ಸಾಮಾನ್ಯಕ್ಕಿಂತ ಮುಂಚಿತವಾಗಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮೇ 14ರಿಂದ 16ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮುಂಗಾರು ಮಾರುತಗಳು ಪ್ರವೇಶಿಸಬಹುದು ಎಂದು ತಿಳಿಸಿದ್ದು, ಕೇರಳ ಕರಾವಳಿಗೆ ಮೇ ಕೊನೆಯ ವಾರದಲ್ಲೇ ಮಳೆ ಅಪ್ಪಳಿಸುವ ನಿರೀಕ್ಷೆ ವ್ಯಕ್ತವಾಗಿದೆ. ಅಂತರರಾಷ್ಟ್ರೀಯ ಮಾದರಿಗಳ ಪ್ರಕಾರ, ವಿಶೇಷವಾಗಿ ECMWF ಅಂದಾಜಿನಂತೆ, ಕೇರಳಕ್ಕೆ ಮುಂಗಾರು ಮೇ 25ರ ಸುಮಾರಿಗೆ ತಲುಪಬಹುದು ಎಂದು ಹೇಳಲಾಗಿದೆ. ಆದರೆ IMD ಅಧಿಕೃತ ಅಂದಾಜು ಜೂನ್ 1ರ ಸುತ್ತಮುತ್ತ ಅಥವಾ ಅದಕ್ಕಿಂತ ಮೊದಲೇ ಮಳೆ ಆರಂಭವಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಇದರಿಂದ ಈ ಬಾರಿ ಮುಂಗಾರು ಸಮಯಕ್ಕಿಂತ ಬೇಗನೆ ಚುರುಕುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಮೇ ತಿಂಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ…
Day: May 3, 2026
ಸಮುದ್ರದಾಳದಲ್ಲಿ ತ್ರಿವರ್ಣ ಧ್ವಜ ಅನಾವರಣ: ಗಿನ್ನೆಸ್ ದಾಖಲೆ ಬರೆದ ಐತಿಹಾಸಿಕ ಸಾಹಸದಲ್ಲಿ ಶರತ್ ಆರ್. ಅಶೋಕ್ ಭಾಗಿ
ಬೆಂಗಳೂರು: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಸ್ವರಾಜ್ ದ್ವೀಪದಲ್ಲಿ ಭಾರತದ ಸಾಹಸ ಯಾನದ ಸುವರ್ಣ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ಸಮುದ್ರದ ಆಳದಲ್ಲಿ ಭಾರತದ ಅತಿ ದೊಡ್ಡ ತ್ರಿವರ್ಣ ಧ್ವಜವನ್ನು ಯಶಸ್ವಿಯಾಗಿ ಅನಾವರಣಗೊಳಿಸುವ ಮೂಲಕ ‘ಗಿನ್ನೆಸ್ ವರ್ಲ್ಡ್ ರೆಕಾರ್ಡ್’ ನಿರ್ಮಿಸಲಾಗಿದೆ. ಈ ಐತಿಹಾಸಿಕ ಸಾಹಸದಲ್ಲಿ ಬೆಂಗಳೂರಿನ ಪ್ರತಿಭಾವಂತ ಸಾಹಸ ಕ್ರೀಡಾ ತಜ್ಞ ಶರತ್ ಆರ್. ಅಶೋಕ್ ಅವರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ. India doesn’t follow records. It defines them. 🇮🇳 At Swaraj Dweep, Andaman & Nicobar Islands, the world’s largest underwater Tricolour (60×40 metres) was unfurled by 200 divers, earning a Guinness World Record. From the skies to the ocean depths, India’s spirit stands…
ಶೃಂಗೇರಿ ಅಂಚೆ ಮತ ಮರುಎಣಿಕೆ ಫಲಿತಾಂಶದತ್ತ ಚಿತ್ತ; ಯಾರಿಗೆ ಗೆಲುವು?
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಭಾನುವಾರ ದಿನವಿಡೀ ನಡೆದಿದ್ದು, ಅಂತಿಮ ವರದಿ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ಅಂಚೆ ಮತಪತ್ರಗಳ ಮರುಪರಿಶೀಲನೆ ನಡೆಸಲಾಗಿದೆ. ಎಣಿಕೆ ವೇಳೆ ಕೆಲವು ಮತಪತ್ರಗಳಲ್ಲಿ ‘ಡಬ್ಬಲ್ ಟಿಕ್’ ಕಂಡುಬಂದ ಹಿನ್ನೆಲೆ ತಿರಸ್ಕರಿಸಲಾಗಿದೆ. ಇದರಿಂದ ಫಲಿತಾಂಶದ ಅಂತಿಮ ಚಿತ್ರಣ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸಿಂಧು, ಅಸಿಂಧು ಮತ ಲೆಕ್ಕಚಾರ ಕೂಡ ನಡೆದಿದೆ. ಈ ವೇಳೆ ಅಂಚೆ ಮತಗಳ ಪತ್ರದಲ್ಲಿ ‘ಡಬ್ಬಲ್ ಟಿಕ್’ ಮಾಡಿರುವುದು ಕಂಡುಬಂದಿದೆ. ಈ ಕಾರಣಕ್ಕೆ 258 ಮತಗಳನ್ನು ತಿರಸ್ಕರಿಸಲಾಗಿದೆ. ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ ಈಗ 255 ಮತಗಳು ಮರು ಎಣಿಕೆ ವೇಳೆ ಕಡಿತಗೊಂಡಿವೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು…
ನಟ ಚೇತನ್ ದೂರು: ನಿರ್ಮಾಪಕ ಸಾ.ರಾ. ಗೋವಿಂದು ವಿರುದ್ಧ ಬೆದರಿಕೆ ಆರೋಪ
ಬೆಂಗಳೂರು: ನಟ ಹಾಗೂ ಕಾರ್ಯಕರ್ತೆ ಚೇತನ್ ಅಹಿಂಸಾ ಅವರು ನಿರ್ಮಾಪಕ ಹಾಗೂ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದರೆಂದು ಆರೋಪಿಸಿದ್ದಾರೆ. ಕನ್ನಡದ ದಂತಕಥೆ ಡಾ. ರಾಜ್‌ಕುಮಾರ್ ಅವರಿಗೆ ಕರ್ನಾಟಕ ಸರ್ಕಾರ ಮಂಜೂರು ಮಾಡಿದ 2.5 ಎಕರೆ ಭೂಮಿ ವಿಚಾರವನ್ನು ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ಈ ವಿವಾದ ಉದ್ಭವಿಸಿದೆ ಎಂದು ತಿಳಿದುಬಂದಿದೆ. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಗೋವಿಂದು, ಚೇತನ್ ನಿವಾಸದ ಬಳಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚೇತನ್ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದರೂ, ಘಟನೆ ಬಗ್ಗೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಅವರು ಮತ್ತು ವಿವಿಧ ಜನಪರ ಸಂಘಟನೆಗಳ ಸದಸ್ಯರು ಶೇಷಾದ್ರಿಪುರಂ ಪೊಲೀಸ್ ಠಾಣೆ ಯಲ್ಲಿ ದೂರು ಸಲ್ಲಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್, “ಏಪ್ರಿಲ್ 25ರಂದು ನಾವು ಅವರ ಮನೆಗೆ…
‘ಲವ್ ಮಾಕ್ಟೇಲ್ 3’ OTTಗೆ: ಮೇ 8ರಿಂದ ಸ್ಟ್ರೀಮಿಂಗ್
ಸ್ಯಾಂಡಲ್‌ವುಡ್ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್ಟೇಲ್’ ಸರಣಿಯ ಮೂರನೇ ಭಾಗವಾದ Love Mocktail 3 ಈಗ OTTಗೆ ಬರುತ್ತಿದೆ. ‘ಕ್ರಿಸ್ಮಿ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿರುವ ಈ ಸಿನಿಮಾ ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಿಟ್ ಆಗಿದೆ. ಈ ಸಿನಿಮಾ, ಇದೀಗ ZEE5 ಮೂಲಕ ಮೇ 8ರಿಂದ ವೀಕ್ಷಣೆಗೆ ಲಭ್ಯವಾಗಲಿದೆ. ತಂದೆ-ಮಗಳ ಭಾವುಕ ಕಥೆ ‘ಲವ್ ಮಾಕ್ಟೇಲ್ 3’ ಸಿನಿಮಾದ ಮುಖ್ಯ ಆಕರ್ಷಣೆ ತಂದೆ-ಮಗಳ ಭಾವುಕ ಸಂಬಂಧ. ಆದಿತ್ಯ (ಡಾರ್ಲಿಂಗ್ ಕೃಷ್ಣ) ಮತ್ತು ನಿಧಿ (ಸಂವೃತಾ) ನಡುವಿನ ಬಾಂಧವ್ಯವನ್ನು ಮನಸೂರೆಗೊಳ್ಳುವ ರೀತಿಯಲ್ಲಿ ಚಿತ್ರಿಸಲಾಗಿದೆ. ದತ್ತು ಪಡೆದ ಮಗಳ ಜೊತೆಗಿನ ದಿನಚರಿ, ತುಂಟಾಟ, ಪ್ರೀತಿ ಹಾಗೂ ಕುಟುಂಬದ ಸನ್ನಿವೇಶಗಳು ಪ್ರೇಕ್ಷಕರ ಮನಸೆಳೆಯುತ್ತವೆ. ಚಿತ್ರದ ದ್ವಿತೀಯಾರ್ಧದಲ್ಲಿ ಭಾವುಕ ತಿರುವು ಮೂಡಿ ಬರುತ್ತದೆ. ಆದಿತ್ಯ ತನ್ನ ಮಗಳನ್ನು ಕಳೆದುಕೊಳ್ಳುತ್ತಾನೆಯೇ ಎಂಬ ಪ್ರಶ್ನೆ…
ದೋಹಾದಲ್ಲಿ ಕರ್ನಾಟಕ ಸಂಘದಿಂದ ಕಾರ್ಮಿಕ ದಿನಾಚರಣೆ; ‘ಕಾಯಕವೇ ಕೈಲಾಸ’ ಸಂದೇಶ
ದೋಹಾ (ಕತಾರ್): ಕರ್ನಾಟಕ ಸಂಘ ಕತಾರ್ ವತಿಯಿಂದ “ಕಾರ್ಮಿಕ ದಿನಾಚರಣೆ 2026”ನ್ನು ದೋಹಾದ ಪರ್ಲಿಂಗ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಭರ್ಜರಿಯಾಗಿ ಆಚರಿಸಲಾಯಿತು. Indian Cultural Centre ಹಾಗೂ Embassy of India, Doha ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮ “ಕಾಯಕವೇ ಕೈಲಾಸ” ಎಂಬ ಘೋಷವಾಕ್ಯದೊಂದಿಗೆ ಕಾರ್ಮಿಕರ ಮಹತ್ವವನ್ನು ಎತ್ತಿಹಿಡಿದಿತು. ಇದು ಸಂಘದ ನೂತನ ಆಡಳಿತ ಸಮಿತಿಯ ಮೊದಲ ಕಾರ್ಯಕ್ರಮವಾಗಿದ್ದು, ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಧ್ಯಕ್ಷ ಸುಬ್ರಮಣ್ಯ ಹೆಬ್ಬಗಿಲು ತಮ್ಮ ಭಾಷಣದಲ್ಲಿ “ಕಾರ್ಮಿಕರಿಗೆ ಕರ್ನಾಟಕ ಸಂಘವು ಸ್ವಗೃಹದಂತಿದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಡಾ. ವೈಭವ್ ತಾಂಡಲೆ, ಖಾಲಿದ್ ಅಬ್ದುಲ್ ರಹ್ಮಾನ್ ಫಖ್ರೂ, ಮಣಿಕಂಟನ್ ಎ.ಪಿ., ಪಿ.ಎನ್. ಬಾಬುರಾಜನ್ ಹಾಗೂ ಫೈಸಲ್ ಅಲ್ ಹುಡಾವಿ ಉಪಸ್ಥಿತರಿದ್ದು, ಕಾರ್ಮಿಕರ ಕೊಡುಗೆ, ಸುರಕ್ಷತೆ ಹಾಗೂ ಕಲ್ಯಾಣದ ಮಹತ್ವವನ್ನು ಒತ್ತಿಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಲಹಾ ಸಮಿತಿ ಸದಸ್ಯರು ಹಾಗೂ ಕನ್ನಡಿಗರ…
IPL 2026: ಬ್ಯಾಟಿಂಗ್ ವೈಫಲ್ಯ, ಚೆನ್ನೈ ವಿರುದ್ಧ ಮುಂಬೈಗೆ ಮತ್ತೊಂದು ಮುಖಭಂಗ
ಚೆನ್ನೈ: Indian Premier League 2026 ಟೂರ್ನಿಯಲ್ಲಿ Mumbai Indians ತಂಡದ ಕಳಪೆ ಪ್ರದರ್ಶನ ಮುಂದುವರಿದಿದ್ದು, ಮತ್ತೊಂದು ಸೋಲು ಅನುಭವಿಸಿದೆ. ಶನಿವಾರ ನಡೆದ 44ನೇ ಪಂದ್ಯದಲ್ಲಿ Chennai Super Kings ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈನ M. A. Chidambaram Stadium ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಿಯಾನ್ ರಿಕೆಲ್ಟಾನ್ 37 ರನ್, ನಮನ್ ಧಿರ್ 57 ರನ್ ಗಳಿಸಿ ಹೋರಾಟ ನಡೆಸಿದರೂ, ಸೂರ್ಯಕುಮಾರ್ ಯಾದವ್ (21), ಹಾರ್ದಿಕ್ ಪಾಂಡ್ಯ (18) ಸೇರಿದಂತೆ ಇತರರು ನಿರೀಕ್ಷೆ ತೀರಿಸಲಿಲ್ಲ. ಪರಿಣಾಮವಾಗಿ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್‌ಗಳಿಗೆ ಸೀಮಿತವಾಯಿತು. ಚೆನ್ನೈ ಪರ ಅಂಶುಲ್ ಕಾಂಬೋಜ್ 3 ವಿಕೆಟ್ ಪಡೆದು ಮಿಂಚಿದರು. 160 ರನ್ ಗುರಿ ಬೆನ್ನಟ್ಟಿದ ಚೆನ್ನೈ…
