ಬೆಂಗಳೂರು: ರಾಷ್ಟ್ರೀಯ ಜನಗಣತಿ–2027 ಹಿನ್ನೆಲೆಯಲ್ಲಿ ನಗರದ ವ್ಯಾಪ್ತಿಯಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಕಾರ್ಯಗಳು ಬುಧವಾರ ಆರಂಭಗೊಂಡಿವೆ. ಈ ಬಾರಿ ನಾಗರಿಕರಿಗೆ ಸ್ವಯಂ-ಗಣತಿಯ ಆಯ್ಕೆಯನ್ನು ನೀಡಲಾಗಿದ್ದು, ಮನೆಯ ವಿವರಗಳನ್ನು ಆನ್‌ಲೈನ್ ಮೂಲಕಲೇ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 1 ರಿಂದ 15ರವರೆಗೆ ಸ್ವಯಂ-ಗಣತಿ ನಡೆಸಲು https://se.census.gov.in ಪೋರ್ಟಲ್ ಸಕ್ರಿಯವಾಗಿದೆ. ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15–20 ನಿಮಿಷಗಳಲ್ಲಿ ಮಾಹಿತಿಯನ್ನು ದಾಖಲು ಮಾಡಬಹುದು. ನೋಂದಣಿಯ ನಂತರ Self-Enumeration ID ಮೊಬೈಲ್ ಅಥವಾ ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಎರಡನೇ ಹಂತವಾಗಿ ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಮನೆ–ಮನೆಗೆ ಭೇಟಿ ನೀಡಿ ಸ್ಥಳೀಯ ಪರಿಶೀಲನೆ ನಡೆಸಲಿದ್ದಾರೆ. ಸ್ವಯಂ-ಗಣತಿ ಮಾಡಿದವರು ತಮ್ಮ Self-Enumeration ID ಅನ್ನು ಗಣತಿದಾರರಿಗೆ ನೀಡುವುದು ಅಗತ್ಯ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೇಳುವಂತೆ, ಜನಗಣತಿಯಲ್ಲಿ ಸಂಗ್ರಹವಾಗುವ ಮಾಹಿತಿ ಭವಿಷ್ಯದ ನಗರ ಯೋಜನೆ, ಸಾರಿಗೆ ವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು…
Year: 2026
ಟ್ರಂಪ್ ನೀತಿಗಳ ವಿರುದ್ಧ ಅಮೆರಿಕದಲ್ಲಿ ‘ಸರಣಿ ಪ್ರತಿಭಟನೆಗಳು
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ಹಾಗೂ ವಿದೇಶಾಂಗ ನೀತಿಗಳ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದ್ದು, “ರಾಜರಿಲ್ಲ” ಎಂಬ ಘೋಷಣೆಯಡಿ ಲಕ್ಷಾಂತರ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ದೇಶದ ವಿವಿಧ ನಗರಗಳಲ್ಲಿ 3,000 ಕ್ಕೂ ಹೆಚ್ಚು ಪ್ರತಿಭಟನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದು ಸಂಘಟಿತ ರಾಷ್ಟ್ರೀಯ ಚಳುವಳಿಯ ರೂಪ ಪಡೆದಿದೆ ಎಂದು ಆಯೋಜಕರು ತಿಳಿಸಿದ್ದಾರೆ. Minnesota State Capitol ನಲ್ಲಿ ನಡೆದ ಪ್ರಮುಖ ರ್ಯಾಲಿಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಇದು ದಿನದ ಅತಿದೊಡ್ಡ ಸಮಾವೇಶಗಳಲ್ಲಿ ಒಂದಾಗಿದೆ. ಪ್ರತಿಭಟನಾಕಾರರು ಮೆರವಣಿಗೆ ನಡೆಸಿ, ಘೋಷಣೆಗಳನ್ನು ಕೂಗಿ, ಟ್ರಂಪ್ ಆಡಳಿತದ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದರು. ವಿಶೇಷವಾಗಿ ವಲಸೆ ಜಾರಿ ಕ್ರಮಗಳು ಹಾಗೂ ಇರಾನ್ ಸಂಘರ್ಷದಲ್ಲಿ ಅಮೆರಿಕದ ಪಾತ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಮಿನ್ನೇಸೋಟದ ಸೇಂಟ್ ಪಾಲ್‌ನಲ್ಲಿ ನಡೆದ ಕೇಂದ್ರ ರ್ಯಾಲಿಯಲ್ಲಿ ಗವರ್ನರ್ ಟಿಮ್…
ಇರಾನ್ ಉದ್ವಿಗ್ನತೆ ನಡುವೆ ಅಮೆರಿಕದ ಬೃಹತ್ ಸೇನಾ ನಿಯೋಜನೆ
ನ್ಯೂಯಾರ್ಕ್: ಇರಾನ್ ವಿರುದ್ಧದ ಯುದ್ಧದ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಅಮೆರಿಕ ಮಧ್ಯಪ್ರಾಚ್ಯದಲ್ಲಿ ಸೇನಾ ಹಾಜರಾತಿಯನ್ನು ಮತ್ತಷ್ಟು ಬಲಪಡಿಸಿದೆ. ಸುಮಾರು 3,500 ನೌಕಾ ಪಡೆಗಳು ಮತ್ತು ನಾವಿಕರನ್ನು ಈ ಪ್ರದೇಶಕ್ಕೆ ನಿಯೋಜಿಸಿರುವುದಾಗಿ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. USS ಟ್ರಿಪೋಲಿ (LHA-7) ಯುದ್ಧನೌಕೆಯಲ್ಲಿ ಸವಾರರಾಗಿರುವ ಈ ಪಡೆಗಳು ಮಾರ್ಚ್ 27ರಂದು ಮಧ್ಯಪ್ರಾಚ್ಯಕ್ಕೆ ಆಗಮಿಸಿವೆ. ಈ ಹಡಗು ಅಮೆರಿಕಾ ವರ್ಗದ ಉಭಯಚರ ದಾಳಿ ಹಡಗುಗಳಲ್ಲೊಂದು ಆಗಿದ್ದು, ಟ್ರಿಪೋಲಿ ಆಂಫಿಬಿಯಸ್ ರೆಡಿ ಗ್ರೂಪ್‌ನ ಫ್ಲ್ಯಾಗ್‌ಶಿಪ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಪಡೆಗಳಲ್ಲಿ ನೌಕಾಪಡೆಯ ಜೊತೆಗೆ ಯುದ್ಧ ವಿಮಾನಗಳು, ಸಾಗಣೆ ವಿಮಾನಗಳು ಹಾಗೂ ಉಭಯಚರ ದಾಳಿ ಕಾರ್ಯಾಚರಣೆಗಳಿಗೆ ಅಗತ್ಯವಾದ ತಂತ್ರಜ್ಞಾನ ಮತ್ತು ಸಾಧನಗಳು ಸೇರಿವೆ. ಸಮುದ್ರ ಮತ್ತು ಭೂ ಆಧಾರಿತ ದಾಳಿಗಳನ್ನು ನಡೆಸುವ ಸಾಮರ್ಥ್ಯವುಳ್ಳ ಈ ಪಡೆಗಳನ್ನು ತುರ್ತು ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ವರದಿಗಳ ಪ್ರಕಾರ, ಈ ನಿಯೋಜನೆ ಇರಾನ್‌ನೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಗೆ ಸಂಬಂಧಿಸಿದ…
ಸಾಲದ ಒತ್ತಡಕ್ಕೆ ದಾರುಣ ಅಂತ್ಯ: ಒಂದೇ ಕುಟುಂಬದ ಇಬ್ಬರು ಸಾವು
ಬೆಂಗಳೂರು: ಸಾಲಗಾರರ ಕಾಟದಿಂದ ಬೇಸತ್ತ ಯುವಕನೊಬ್ಬ ತೀವ್ರ ಕ್ರಮಕ್ಕೆ ಮುಂದಾಗಿ, ಒಂದೇ ಕುಟುಂಬದ ಇಬ್ಬರು ಸಾವಿಗೀಡಾದ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ಮೋಹನ್ ಗೌಡ ಆತ್ಮಹತ್ಯೆ ಮಾಡುವುದಾಗಿ ವಿಡಿಯೋ ದಾಖಲಿಸಿದ್ದಾನೆ. ಈ ವಿಡಿಯೋ ನೋಡಿ ಆತಂಕಗೊಂಡ ಸಂಬಂಧಿಕರು ಮನೆಗೆ ಧಾವಿಸಿದಾಗ ಹೃದಯವಿದ್ರಾವಕ ದೃಶ್ಯ ಎದುರಾಗಿದೆ. ಮೋಹನ್ ತನ್ನ ತಾಯಿ ಹಾಗೂ ಅಕ್ಕನ ಮೇಲೆ ದಾಳಿ ನಡೆಸಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ತಾಯಿ ಆಶಾ (55) ಮತ್ತು ಅಕ್ಕ ವರ್ಷಿತಾ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮೋಹನ್ ಗೌಡ (27) ಮತ್ತು ಅಕ್ಕನ ಮಗ ಮಯಾಂಕ್ (11) ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ…
‘ಲವ್ ಇನ್ಶುರೆನ್ಸ್ ಕಂಪನಿ’; LIK ಬಿಡುಗಡೆ ಮತ್ತೆ ಮುಂದೂಡಿಕೆ
ಚೆನ್ನೈ: ನಿರ್ದೇಶಕ ವಿಘ್ನೇಶ್ ಶಿವನ್ ಅವರ ಬಹುನಿರೀಕ್ಷಿತ ಪ್ರಣಯ ಚಿತ್ರ ಲವ್ ಇನ್ಶುರೆನ್ಸ್ ಕೊಂಪನಿ (LIK) ಬಿಡುಗಡೆಯನ್ನು ಮತ್ತೊಮ್ಮೆ ಮುಂದೂಡಲಾಗಿದ್ದು, ಇದೀಗ ಏಪ್ರಿಲ್ 10ರಂದು ತೆರೆಗೆ ಬರಲಿದೆ. ಈ ಹಿಂದೆ ಏಪ್ರಿಲ್ 3ರಂದು ಬಿಡುಗಡೆ ಮಾಡಲು ಯೋಜಿಸಿದ್ದ ಚಿತ್ರವನ್ನು ವಾರದ ಅಂತರದಲ್ಲಿ ಮುಂದೂಡಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಚಿತ್ರದ ಬಿಡುಗಡೆ ದಿನಾಂಕ ಪದೇಪದೇ ಬದಲಾಗುತ್ತಿರುವುದು ಗಮನಾರ್ಹ. ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ ವಿಘ್ನೇಶ್ ಶಿವನ್, “#LIK from April 10… ಟ್ರಸ್ಟ್ ಮಿ ಬ್ರೋ” ಎಂದು ಹೇಳಿ ಹೊಸ ದಿನಾಂಕವನ್ನು ದೃಢಪಡಿಸಿದರು. ಇದೇ ವೇಳೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ನಟ ಪ್ರದೀಪ್ ರಂಗನಾಥನ್ ಹಾಗೂ ತಾವು ಸೇರಿರುವ ತಮಾಷೆಯ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಚಿತ್ರದ ಬಿಡುಗಡೆಯು ಹಲವು ಹಂತಗಳಲ್ಲಿ ಮುಂದೂಡಿಕೆಯನ್ನು ಕಂಡಿದೆ. ಮೊದಲಿಗೆ ಕಳೆದ ವರ್ಷದ ಸೆಪ್ಟೆಂಬರ್ 18ಕ್ಕೆ ನಿಗದಿಯಾಗಿದ್ದ ಬಿಡುಗಡೆ, ನಂತರ ದೀಪಾವಳಿ ಪ್ರಯುಕ್ತ…
ಎಲ್ಲಾ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; : ಡಾ. ಶರಣಪ್ರಕಾಶ್ ಪಾಟೀಲ್
ಬೆಂಗಳೂರು: ದೇಶದಲ್ಲಿ ಆರೋಗ್ಯ ಸೇವೆಯಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಈಗ ಮಕ್ಕಳಿಗಾಗಿ 450 ಹಾಸಿಗೆಯುಳ್ಳ ಬೃಹತ್, ಅತ್ಯಾಧುನಿಕ ಹಾಗೂ ಸುಸಜ್ಜಿತ ಆಸ್ಪತ್ರೆಯನ್ನು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ನಿರ್ಮಾಣ ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ. ನೂತನ ಆಸ್ಪತ್ರೆ ಲೋಕಾರ್ಪಣೆ ಮಾಡಿದ ನಂತರ ಭಾಷಣ ಮಾಡಿದ ಸಚಿವ ಡಾ. ಪಾಟೀಲ್, ಮಕ್ಕಳಿಗೆ ಉತ್ತರ ಆರೈಕೆ, ಚಿಕಿತ್ಸೆ ಒದಗಿಸಲು ಈ ಆಸ್ಪತ್ರೆ ನಿರ್ಮಿಸಲಾಗಿದೆ. ಸರ್ಕಾರದಿಂದಲೇ ಇಷ್ಟೊಂದು ಬೃಹತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇಷ್ಟು ದೊಟ್ಟಮಟ್ಟದ ಕಾರ್ಯ ನಿರ್ವಹಿಸುತ್ತಿರುವುದು ದೇಶದಲ್ಲಿ ಮೊದಲ ಎಂದರು. ಬೇರೇ ಬೇರೆ ರಾಜ್ಯಗಳಿಂದ ಬರುವ ರೋಗಿಗಳಿಗೂ ಇಲ್ಲಿ ಒಂದೇ ತರನಾದ ಚಿಕಿತ್ಸೆ ಒದಗಿಸಲಾಗುತ್ತದೆ. ಶೇ. 100ರಷ್ಟು ಗುಣಮಟ್ಟದ ಆರೋಗ್ಯ ಚಿಕಿತ್ಸೆ ಕೊಡುವುದು ನಮ್ಮ…
ನಕಲಿ ಹೂಡಿಕೆ ವಂಚನೆ ಮಾಫಿಯಾ: ದೆಹಲಿಯಲ್ಲಿ ಐವರ ಬಂಧನ
ನವದೆಹಲಿ: ಸೈಬರ್ ಅಪರಾಧಗಳಿಗೆ ಬಳಸಲಾಗುತ್ತಿದ್ದ ಮ್ಯೂಲ್ ಬ್ಯಾಂಕ್ ಖಾತೆಗಳ ಜಾಲವನ್ನು ಪತ್ತೆಹಚ್ಚಿದ ದೆಹಲಿ ಪೊಲೀಸ್ ಹೂಡಿಕೆ ವಂಚನೆ ಸಿಂಡಿಕೇಟ್ ಅನ್ನು ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿದೆ. ನೈಋತ್ಯ ಜಿಲ್ಲೆಯ ಸೈಬರ್ ಪೊಲೀಸ್ ಠಾಣೆ ತಂಡವು ಶ್ರೀಧರ್ ದಿಲೀಪ್ ಇಂಗಲ್ (25), ಅರ್ಚಿರಿಯನ್ ಗೋರಕ್ಷ್ ಕಾಂಬ್ಳೆ (21), ಅಜಿಜ್ ಮಿರಾನ್ ಶೇಖ್ (25), ಪ್ರಣವ್ ಜಲಿಂದರ್ ಗುಲ್ದಗಡ್ (24) ಮತ್ತು ವಿಶಾಲ್ ದುರ್ಗಾದಾಸ್ ಬಚಲ್ (25) ಅವರನ್ನು ಬಂಧಿಸಿದೆ. ಬಂಧಿತರಿಂದ ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಂಚನೆಗೆ ಸಂಬಂಧಿಸಿದ 35 ಬ್ಯಾಂಕ್ ಖಾತೆಗಳ ವಿವರಗಳನ್ನು ಪತ್ತೆಹಚ್ಚಲಾಗಿದೆ. ಈ ಪ್ರಕರಣವು 2025ರ ಸೆಪ್ಟೆಂಬರ್ 4ರಂದು NCRP ಪೋರ್ಟಲ್‌ನಲ್ಲಿ ಸಲ್ಲಿಸಲಾದ ದೂರಿನ ಆಧಾರದ ಮೇಲೆ ಬೆಳಕಿಗೆ ಬಂದಿದೆ. ಅರುಣಾಚಲ ಪ್ರದೇಶ ಮೂಲದ ವ್ಯಕ್ತಿಯೊಬ್ಬರನ್ನು ‘ನೆಕ್ಸ್ಟ್ ಬಿಲಿಯನ್ ಟೆಕ್ನಾಲಜಿ ಪ್ರೈ. ಲಿ.’ ಎಂಬ ಹೆಸರಿನಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಮಾಡುವ ನೆಪದಲ್ಲಿ ವಂಚಿಸಲಾಗಿದೆ…
ಯುಕೆಗೆ ಹೊಸ ಭಾರತೀಯ ಹೈಕಮಿಷನರ್; ಲಂಡನ್ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಸ್ವಾಗತ
ಲಂಡನ್ (ಯುನೈಟೆಡ್ ಕಿಂಗ್‌ಡಮ್): ಯುನೈಟೆಡ್ ಕಿಂಗ್‌ಡಮ್‌ಗೆ ಭಾರತದ ಹೊಸ ಹೈಕಮಿಷನರ್ ಆಗಿ ನೇಮಕಗೊಂಡಿರುವ ಪೆರಿಯಸಾಮಿ ಕುಮಾರನ್ ಅವರಿಗೆ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಆತ್ಮೀಯ ಸ್ವಾಗತ ಕೋರಿದೆ. ಫೌಂಡೇಶನ್ ಮುಖ್ಯಸ್ಥರೂ, ಲಂಡನ್‌ನ ಮಾಜಿ ಮೇಯರ್ ಆಗಿರುವ ಡಾ. ನೀರಜ್ ಪಾಟೀಲ್ ಅವರು ಮಾತನಾಡಿ, 2005ರಿಂದ 2007ರವರೆಗೆ ಬೆಂಗಳೂರಿನಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಕುಮಾರನ್ ಅವರ ಕರ್ನಾಟಕದೊಂದಿಗಿನ ಸಂಪರ್ಕವನ್ನು ವಿಶೇಷವಾಗಿ ಉಲ್ಲೇಖಿಸಿದರು. ಈ ಪ್ರದೇಶದ ಬಗ್ಗೆ ಅವರ ಅನುಭವ ಮತ್ತು ತಿಳುವಳಿಕೆ ಭಾರತ–ಯುನೈಟೆಡ್ ಕಿಂಗ್‌ಡಮ್ ನಡುವಿನ ಸಾಂಸ್ಕೃತಿಕ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದೇ ವೇಳೆ, ನಿರ್ಗಮಿತ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರು ಏಪ್ರಿಲ್ 30, 2025ರಂದು ಭಗವಾನ್ ಬಸವೇಶ್ವರರಿಗೆ ಸಲ್ಲಿಸಿದ ಗೌರವವನ್ನು ಸ್ಮರಿಸಿ, ಅವರ ಸೇವೆಗೆ ಕೃತಜ್ಞತೆ ಸಲ್ಲಿಸಲಾಯಿತು. ಬ್ರಿಟಿಷ್ ಹಿಂದೂ ಸಮುದಾಯದೊಂದಿಗೆ ಅವರು ಬೆಳೆಸಿದ ಬಾಂಧವ್ಯವನ್ನು ಫೌಂಡೇಶನ್…
ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ನೂತನ ಮೆಮು ರೈಲು
ಬೆಂಗಳೂರು: ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ನೂತನ ಮೆಮು ರೈಲಿನ ಸೇವೆಯನ್ನು ಒದಗಿಸಲಾಗಿದೆ. ಈ ಮೂಲಕ ಪ್ರಯಾಣಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಕೇಂದ್ರ ರೈವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಯಲಹಂಕದಿಂದ, ಯಶವಂತಪುರ ಮಾರ್ಗವಾಗಿ ಹೊರಡುವ ಈ ಮೆಮು ರೈಲು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು, ಉದ್ಯೋಗಿಗಳು, ರೈತರು, ವ್ಯಾಪಾರಿಗಳು ಸೇರಿದಂತೆ ಮುಂತಾದ ಪ್ರಯಾಣಿಕರಿಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯನ್ನು ಒದಗಿಸಲಿದೆ ಎಂದವರು ಹೇಳಿದ್ದಾರೆ. ಈ ಭಾಗದ ಪ್ರಯಾಣಿಕರು ಈ ನೂತನ ಮೆಮು ರೈಲಿನ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಳ್ಳಲು ಅನುಕೂಲವಾಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೇಪಾಳದಲ್ಲಿ ರಾಜಕೀಯ ಸುನಾಮಿ: ಮಾಜಿ ಪ್ರಧಾನಿ ಓಲಿ ಬಂಧನ
ಕಠ್ಮಂಡು: ನೇಪಾಳದ ರಾಜಕೀಯದಲ್ಲಿ ಭಾರೀ ಸಂಚಲನ ಉಂಟಾಗಿದ್ದು, ಹೊಸ ಸರ್ಕಾರವು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹಾಗೂ ಮಾಜಿ ಗೃಹ ಸಚಿವ ರಮೇಶ್ ಲೇಖಾಕ್ ಅವರನ್ನು ಜನರಲ್ ಝಡ್ ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದೆ. ಹೊಸ ಪ್ರಧಾನಿ ಬಾಲೇಂದ್ರ ಶಾ ನೇತೃತ್ವದ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ದಿನವೇ ನಡೆದ ಸಚಿವ ಸಂಪುಟ ಸಭೆಯಲ್ಲಿ, ಈ ಪ್ರಕರಣದ ತನಿಖೆಗೆ ರಚಿಸಲಾದ ಉನ್ನತ ಮಟ್ಟದ ಆಯೋಗದ ವರದಿಯನ್ನು ಜಾರಿಗೆ ತರಲು ನಿರ್ಧಾರ ಕೈಗೊಳ್ಳಲಾಗಿದೆ. ಆಯೋಗವು ಓಲಿ, ಲೇಖಾಕ್ ಹಾಗೂ ಮಾಜಿ ಪೊಲೀಸ್ ಮುಖ್ಯಸ್ಥ ಚಂದ್ರ ಕುಬೇರ್ ಖಪುಂಗ್ ವಿರುದ್ಧ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪದ ಮೇಲೆ ಪ್ರಕರಣ ದಾಖಲಿಸಲು ಶಿಫಾರಸು ಮಾಡಿತ್ತು. ಈ ಹಿನ್ನೆಲೆ, ನ್ಯಾಯಾಲಯದ ಬಂಧನ ವಾರಂಟ್ ಆಧಾರದ ಮೇಲೆ ಶನಿವಾರ ಮುಂಜಾನೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓಲಿಯನ್ನು ಭಕ್ತಪುರದ ಗುಂಡುವಿನ…
