ಕೊರೋನಾಗೆ ಮತ್ತೆ ಮೂವರು ಬಲಿ; ಮೃತರ ಸಂಖ್ಯೆ 72ಕ್ಕೇರಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸವಾರಿ ಮುಂದುವರಿದಿದ್ದು ಗುರುವಾರ ಮತ್ತೆ 204 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಮೂವರು ಬಲಿಯಾಗಿದ್ದು ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 72ಕ್ಕೇರಿಕೆಯಾಗಿದೆ.

 • ಯಾದಗಿರಿಯಲ್ಲಿ 66 ಹೊಸ ಕೇಸ್
 • ಉಡುಪಿಯಲ್ಲಿ 22 ಹೊಸ ಕೇಸ್
 • ಬೆಂಗಳೂರು ನಗರದಲ್ಲಿ 17 ಹೊಸ ಕೇಸ್
 • ಕಲಬುರಗಿಯಲ್ಲಿ 16 ಹೊಸ ಕೇಸ್
 • ರಾಯಚೂರಿನಲ್ಲಿ 15 ಹೊಸ ಕೇಸ್
 • ಬೀದರ್‌ನಲ್ಲಿ 14 ಹೊಸ ಕೇಸ್
 • ಶಿವಮೊಗ್ಗದಲ್ಲಿ 10 ಹೊಸ ಕೇಸ್
 • ದಾವಣಗೆರೆಯಲ್ಲಿ 9 ಹೊಸ ಕೇಸ್
 • ಕೋಲಾರದಲ್ಲಿ 6 ಹೊಸ ಕೇಸ್
 • ಮೈಸೂರು 5 ಹೊಸ ಕೇಸ್
 • ರಾಮನಗರದಲ್ಲಿ 5 ಹೊಸ ಕೇಸ್
 • ವಿಜಯಪುರದಲ್ಲಿ 4 ಹೊಸ ಕೇಸ್
 • ಬಾಗಲಕೋಟೆ 3 ಹೊಸ ಕೇಸ್
 • ಉತ್ತರಕನ್ನಡದಲ್ಲಿ  3 ಹೊಸ ಕೇಸ್
 • ದಕ್ಷಿಣ ಕನ್ನಡ 2 ಹೊಸ ಕೇಸ್
 • ಹಾಸನ 2 ಹೊಸ ಕೇಸ್
 • ಧಾರವಾಡದಲ್ಲಿ  2 ಹೊಸ ಕೇಸ್
 • ಬೆಂಗಳೂರು ಗ್ರಾಮಾಂತರ 1 ಹೊಸ ಕೇಸ್
 • ಚಿಕ್ಕಮಗಳೂರು 1 ಹೊಸ ಕೇಸ್
 • ಕೊಪ್ಪಳದಲ್ಲಿ  1 ಹೊಸ ಕೇಸ್

ಹೊಸದಾಗಿ ಪತ್ತೆಯಾದ 204 ಸೋಂಕಿತರ ಪೈಕಿ 157 ಮಂದಿ ಹೊರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Related posts