ಮೈಸೂರಿನಲ್ಲಿ ಜಿಟಿಡಿ-ಹೆಚ್ಡಿಡಿ ಫ್ಯಾಮಿಲಿ ಫೈಟ್; ಮೈಮೂಲ್‌ನಲ್ಲಿ ಹೆಚ್ಡಿಕೆ ಬಣ ಸೈಡ್

ಮೈಸೂರು: ಜೆಡಿಎಸ್ ನಾಯಕರ ಗುಂಪುಗಳ ನಡುವಿನ ಮುಸುಕಿನ‌ ಗುದ್ದಾಟ ಇದೀಗ ಎಲೆಕ್ಷನ್ ಫೈಟ್ ವರೆಗೂ ಸಾಗಿದೆ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಡುವೆ ಪ್ರತಿಷ್ಠೆಯ ಕಣವೆನಿಸಿದ್ದ ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ ದೇವೇಗೌಡ ಕುಟುಂಬಕ್ಕೆ ತೀವ್ರ ನಿರಾಸೆಯಾಗಿದೆ.

ಮೈಮುಲ್‌ನ 15 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳು ಜಿಟಿಡಿ ಬಣದ ಪಾಲಾದರೆ, 3 ಸ್ಥಾನಗಳಿಗೆ ಮಾತ್ರ ಹೆಚ್‌ಡಿಕೆ ಬಣ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಒಬ್ಬ ಸದಸ್ಯ ಮಾತ್ರ ಗೆದ್ದಿದ್ದಾರೆ.

 

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಚಾರ ನಡೆಸಿದರು. ಹೆಚ್.ಡಿ.ಕೆ ಬಣದಲ್ಲಿದ್ದ ಹೆಚ್.ಡಿ.ರೇವಣ್ಣ ಭಾಮೈದ ಎಸ್.ಕೆ.ಮಧುಚಂದ್ರ ಸಹ ಸೋಲನಪ್ಪಿದ್ದಾರೆ.
ಮೈಸೂರು ವಿಭಾಗದ 7 ಹಾಗೂ ಹುಣಸೂರು ವಿಭಾಗದ 8 ಸೇರಿ ಒಟ್ಟು 15 ನಿರ್ದೇಶಕ ಸ್ಥಾನಗಳಿಗೆ ಮತದಾನ ನಡೆಯಿತು. ಈ ಪೈಕಿ ಬಹುತೇಕ ಜಿ.ಟಿ.ದೇವೇಗೌಡ ನೇತೃತ್ವದ ಬಣದ 12 ಮಂದಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

Related posts