ಬೆಂಗಳೂರು: ಪ್ರಭು ಶ್ರೀರಾಮನ ಆದರ್ಶ, ಶ್ರೀಕೃಷ್ಣನ ಉಪದೇಶ, ಅಣ್ಣಾ ಬಸವಣ್ಣರ ವಚನಗಳನ್ನು ಜನರು ಅಳವಡಿಸಿ ಅನುಸರಿಸಿದರೆ, ನಮಾಜದಲ್ಲಿ ಕಾನೂನು, ನ್ಯಾಯಾಲಯ ಸೇರಿದಂತೆ ನ್ಯಾಯಾಂಗ ವ್ಯವಸ್ಥೆಯೇ ಅವಶ್ಯಕತೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅರುಣ್ ಶ್ಯಾಮ್ ಪ್ರತಿಪಾದಿಸಿದ್ದಾರೆ. ಅನ್ನದಾನ, ಅಕ್ಷರದಾನದೊಂದಿಗೆ ನ್ಯಾಯದಾನಕ್ಕೂ ಹೆಸರಾದ ಸಿರಿಗೆರೆ ಮಠದ ಪರಮಪೂಜ್ಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಯೋಜಿಸಿದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಜನಪರ ಆಡಳಿತ ಹಾಗೂ ಜನಸ್ನೇಹಿ ಸಮಾಜಕ್ಕೆ ರಾಮ ರಾಜ್ಯವನ್ನು ನಾವು ಉದಾಹರಿಸುತ್ತೇವೆ. ಯಾಕೆಂದರೆ, ಶ್ರೀರಾಮಾನ ಆಶಯವು ಸಮಾಜದ ಹಿತಕ್ಕಾಗಿ ಇತ್ತು. ಶ್ರೀಕೃಷ್ಣನ ಉಪದೇಶ, ಅಣ್ಣ ಬಸವಣ್ಣರ ವಚನಗಳು ಕೂಡಾ ಶಾಂತಿ ಸಹಬಾಳ್ವೆ, ಸಾಮಾಜಿಕ ಹಿತಾಸಕ್ತಿಯ ಸೂತ್ರ ಎಂಬಂತಿದೆ. ಈ ಸೂತ್ರವನ್ನು ಅನುಸರಿಸಿದರೆ ಸಮಾಜದಲ್ಲಿ ವಿವಾದಗಳೇ ಇರಲ್ಲ ಎಂದು ಅರುಣ್ ಶ್ಯಾಮ್ ಪ್ರತಿಪಾದಿಸಿದರು. ಹಿರಿಯ ವಕೀಲರೂ ಆದ ಅರುಣ್ ಶ್ಯಾಮ್ ಅವರು,…
Day: February 2, 2026
ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಬಜೆಟ್ ನೀಲನಕ್ಷೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2026–27ರ ಕೇಂದ್ರ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಕನಸನ್ನು ಸಾಕಾರಗೊಳಿಸುವ ಸ್ಪಷ್ಟ ನೀಲನಕ್ಷೆಯಾಗಿದೆ ಎಂದು ಕೇಂದ್ರ ಆಹಾರ, ಸಾರ್ವಜನಿಕ ವಿತರಣೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಬಜೆಟ್ ಏಳು ಪ್ರಮುಖ ವಲಯಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶ ಹೊಂದಿರುವ ಬೆಳವಣಿಗೆ ಕೇಂದ್ರೀತ ದಾಖಲೆ ಎಂದು ಅವರು ಅಭಿಪ್ರಾಯಪಟ್ಟರು. ಬಯೋಫಾರ್ಮಾ ವಲಯಕ್ಕೆ ರೂ.10,000 ಕೋಟಿ ಹಂಚಿಕೆ ಮಾಡಿರುವುದು ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ನಾವೀನ್ಯತೆ ಹಾಗೂ ಉತ್ಪಾದನೆಗೆ ಮಹತ್ವದ ಉತ್ತೇಜನ ನೀಡಲಿದೆ ಎಂದರು. ಭಾರತೀಯ ಸೆಮಿಕಂಡಕ್ಟರ್ ಮಿಷನ್ 2.0ರ ಉಡಾವಣೆ ಭಾರತವನ್ನು ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ರೂಪಿಸುವ ದಿಟ್ಟ ಹೆಜ್ಜೆಯಾಗಿದೆ ಎಂದು ಜೋಶಿ ಹೇಳಿದರು. ದೇಶೀಯ ಉತ್ಪಾದನೆಗೆ ವೇಗ ನೀಡುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ಯೋಜನೆಯಡಿಯಲ್ಲಿ ಹೂಡಿಕೆಯನ್ನು…
