ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಬಂಗವಾಗಿದೆ. ಬಿಜೆಪಿ ಸರ್ಕಾರದಲ್ಲಿದ್ದ ಸಚಿವರನೇಕರು ಈ ಚುನಾವಣಾ ಮತ ಎಣಿಕೆ ಪ್ರಕ್ರಿಯೆಯುದ್ದಕ್ಕೂ ಹಿನ್ನಡೆ ಅನುಭವಿಸಿದ್ದರು. ಕ್ಷಣಕಣಕ್ಕೂ ಹಾವು ಏಣಿಯಾಟ ರೀತಿಯಲ್ಲಿ ಸಾಗಿತ್ತು. ಆರಂಭದಿಂದಲೂ ಕಾಗ್ರೇಸ್ ಮುನ್ನಡೆ ಸಾಧಿಸುತ್ತಾ ಬಂದಿತ್ತು. ಅಂತೂ ಇಂತೂ ಕಾಂಗ್ರೆಸ್ ಪಕ್ಷ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದೆ. ಡಾ. ಸುಧಾಕರ್. ಬಿ,ಸಿ,ಪಾಟೀಲ್, ಮಹೇಶ್ ಕುಮಟಳ್ಳಿ, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ನಾಗೇಶ್, ಸಹಿತ ಕಳೆದ ವಿಧಾನಸಭಾ ಅವಧಿಯಲ್ಲಿ ಆಪರೇಷನ್ ಕಮಲಕ್ಕೆ ಬಲಿಯಾಗಿದ್ದ ನಾಯಕರನೇಕರು ಈ ಬಾರಿಯ ಚುನಾವಣೆಯಲ್ಲಿ ಸೋಲುಂಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಇದೆ ವೇಳೆ, ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಾಂತರ ಮಾಡಿರುವ ನಾಯಕರೂ ಈ ಚುನಾವಣೆಯಲ್ಲಿ ಸೋಲುಂಡಿರುವುದೂ ಅಚ್ಚರಿಯ ಸಂಗತಿ.
ಪಕ್ಷಗಳ ಬಲಾಬಲ (ಮುನ್ನಡೆ/ಗೆಲುವಿನ ಸ್ಥಿತಿ)
-
ಒಟ್ಟು ಸ್ಥಾನಗಳು – 224
-
ಕಾಂಗ್ರೆಸ್ : 136
-
ಬಿಜೆಪಿ : 64
-
ಜೆಡಿಎಸ್ : 20
-
ಇತರರು : 4