ಮಂಗಳೂರು; ಕರಾವಳಿ ಜಿಲ್ಲೆ ದಕ್ಷಿಣಕನ್ನಡದ 16 ಕಡೆ ಇಂದು ಬೆಳ್ಳಂಬೆಳಗ್ಗೆ ಎನ್ಐಎ ದಾಳಿ ನಡೆಸಿದೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ವೇಣೂರು, ಉಪ್ಪಿನಂಗಡಿ ಸೇರಿದಂತೆ ಹಲವೆಡೆ ಇಂದು ಈ ದಾಳಿ ನಡೆದಿದೆ.
ಬಿಹಾರದ ಪಾಟ್ನಾದಲ್ಲಿ ಇತ್ತೀಚೆಗೆ ಮೋದಿ ಹತ್ಯೆಗೆ ಸಂಚು ನಡೆದಿತ್ತು ಎಂಬ ಸುದ್ದಿ ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತಿ. ಈ ಸಂಚಿನ ಸಂಬಂಧ ಕೆಲವು ದಿನಗಳ ಹಿಙದೆ ಕೆಲವರನ್ನು ಎನ್ಐಎ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈ ಕೃತ್ಯದಲ್ಲಿ ಮತ್ತಷ್ಟು ಮಂದಿಗೆ ನಂಟು ಇರುವ ಸಾಧ್ಯತೆಗಳ ಬಗ್ಗೆ ಮಾಹಿತಿ ಪೇರಿಸಿರುವ ಕೇಂದ್ರೀಯ ತನಿಖಾ ತಂಡದ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬುಧವಾರ ಬೆಳ್ಳಂಬೆಳಿಗ್ಗೆಯೇ ಶಂಕಿತರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಎನ್ಐಎ ತಂಡಗಳು ಹವಾಲಾ ಹಣ ವಹಿವಾಟು ಕುರಿತ ದಾಖಲೆಗಳಿಗೂ ಜಾಲಾಡಿದ್ದಾರೆನ್ನಲಾಗಿದೆ. ಇದೇ ವೇಳೆ ಮಂಗಳೂರು ಹೊರವಲಯದ ಆಸ್ಪತ್ರೆ ಜೊತೆ ಗುರುತಿಸಿಕೊಂಡಿರುವವರ ಮನೆ ಮೇಲೂ ಎನ್ಐಎ ದಾಳಿ ನಡೆದಿದೆ ಎನ್ಬಲಾಗಿದ್ದು ಕರಾವಳಿಯಲ್ಲಿನ ಈ ಬೆಳವಣಿಗೆ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ. ಮಂಜೇಶ್ವರ ಸಮೀಪದ ಕುಂಜತ್ತೂರು ಬಳಿಯೂ ಎನ್ಐಎ ತಂಡ ಪರಿಶೀಲನೆ ನಡೆಸಿದೆ ಎನ್ನಲಾಗಿದೆ.
National Investigation Agency is conducting raids at about 25 locations in Karnataka, Kerala and Bihar in the Popular Front of India Phulwarisharif case. pic.twitter.com/kh8exI1CJb
— ANI (@ANI) May 31, 2023