‘ಕಲ್ಲಂಗಡಿ ತೊಗಟೆಯ ಹಲ್ವ’ ಸ್ವಾದಿಷ್ಟ ತಿಂಡಿ

ನಾಲ್ಪಕ್ಕೆ ಪ್ರವೀಣ ವಾಯುದರಲ್ಲೂ ಸ್ವಾದಿಷ್ಟ ಖಾದ್ಯ ಮಾಡಬಲ್ಲ. ಕಲ್ಲಂಗಡಿಯಲ್ಲೂ ಅವೆಷ್ಟೋ ತಿಂಡಿಗಳನ್ನು ಮಾಡಬಹುದು. ಅವುಗಳ ಪೈಕಿ ಕಲ್ಲಂಗಡಿಯ ತೊಗಟೆಯ ಹಲ್ವ ಕೂಡಾ ಒಂದು..

ಬೇಕಾದ ಸಾಮಗ್ರಿ

  • ಕಲ್ಲಂಗಡಿ ತೊಗಟೆ 8 ಕಪ್
  • ಸಕ್ಕರೆ 3 ಕಪ್
  • ಉಪ್ಪು ಕಾಲ್ ಚಮಚ
  • ಹಾಲು ಅರ್ಧ ಕಪ್
  • ಗೇರುಬೀಜ 10
  • ಒಣ ದ್ರಾಕ್ಷಿ 10
  • ತುಪ್ಪ ಕಾಲ್ ಕಪ್

ಮಾಡುವ ವಿಧಾನ

ಕಲ್ಲಂಗಡಿಯನ್ನು ತುಂಡು ಮಾಡಿ ಬಿಳಿಯ ಭಾಗವನ್ನು ತೆಗದು, ನಂತರ ಅದರ ಸಿಪ್ಪೆಯನ್ನು ತೆಗೆದು ಬಿಳಿ ಭಾಗವನ್ನು ಮಾತ್ರ ತುರಿದು ಇಟ್ಟುಕೊಳ್ಳಬೇಕು. ಒಂದು ಚಿಕ್ಕ ಬಾಣಲೆಯಲ್ಲಿ ತುಪ್ಪ,ಗೋಡಂಬಿ, ದ್ರಾಕ್ಷಿಯನ್ನು ಹುರಿದು ತೆಗೆದಿಡಿ. ಒಂದು ದೊಡ್ಡ ಬಾಣಲೆಯಲ್ಲಿ ತುರಿದ ಕಲ್ಲಂಗಡಿ ತೊಗಟೆಯನ್ನು ಹಾಕಿ ಬೇಯಿಸಬೇಕು. ಬೆಂದ ನಂತರ ಒಂದು ಚಿಟಿಕಿ ಉಪ್ಪು , ಸಕ್ಕರೆ ಹಾಕಿ ಚೆನ್ನಾಗಿ 5 ನಿಮಿಷಗಳ ಕಾಲ ಕಲಸುತ್ತ ಇರಿ. ಅದಕ್ಕೆ ಹಾಲು ಹಾಕಿ ಚೆನ್ನಾಗಿ ಕಲಸಿ. ನಂತರ ಅದಕ್ಕೆ ತುಪ್ಪ ಸೇರಿಸಿಕೊಂಡು ಚೆನ್ನಾಗಿ ಕಲಸುತ್ತ ಇರಬೇಕು. ಎಲ್ಲಾ ಹೊಂದಿಕೊಂಡು ಹಲ್ವ ಹದ ಬಂದಾಗ ಕೊನೆಯಲ್ಲಿ ಹುರಿದ ಡ್ರೈ ಫ್ರೂಟ್ಸ್ ಸೇರಿಸಿ ಮಿಕ್ಸ್ ಮಾಡಿ.  ಆರೋಗ್ಯಕರ ಹಾಗೆ ತುಂಬಾ ರುಚಿಯಾದ ಕಲ್ಲಂಗಡಿಯ ತೊಗಟೆಯ ಹಲ್ವ ಸಿದ್ಧವಾಗುತ್ತದೆ.

ಮನೆಯಲ್ಲೇ ಮಾಡಿ ನೋಡಿ.. ತೆಂಗಿನಕಾಯಿ ಹಾಲು, ಪೌಡರ್..

 

 

Related posts