ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟ ಇದೀಗ ಮತ್ತೊಂದು ಮಜಲಿನತ್ತ ಸಾಗಿದ್ದು, ಸೆಪ್ಟಂಬರ್ 10 ಭಾನುವಾರದಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತೀವ್ರ ಹೋರಾಟಕ್ಕೆ ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ.
ಸೆಪ್ಟೆಂಬರ 3ರ ಬದಲು ಸೆಪ್ಟಂಬರ್ 10 ಭಾನುವಾರದಂದು ನಿಪ್ಪಾಣಿಯಲ್ಲಿ ಬೆಳಗಾವಿ ಹಾಗೂ ಶೈಕ್ಷಣಿಕ ಜಿಲ್ಲಾ ಮಟ್ಟದ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟಕ್ಕೆ ಚಾಲನೆ ಅಂಗವಾಗಿ ನಿಪ್ಪಾಣಿ ತಾಲ್ಲೂಕಿನ ಪೂರ್ವಭಾವಿ ಶ್ರಾವಣ ಸಂದೇಶ ಸಭೆ ಯಶಸ್ವೀಯಾಗಿ ನಡೆಯಿತು.
ನಿಪ್ಪಾಣಿ ತಾಲ್ಲೂಕಿನ ಪೂರ್ವಭಾವಿ ಶ್ರಾವಣ ಸಂದೇಶ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಶಶಿಕಾಂತ ನಾಯಕ, ತಾಲೂಕು ಅಧ್ಯಕ್ಷ ಕಿರಣ್ ಪಾಂಗ್ ರೀ , ಪಂಚಸೇನಾ ಅಧ್ಯಕ್ಷ ರವಿ ಗುಲಗಳೆ , ರೈತ ನಾಯಕ ರಮೇಶ್ ಪಾಟೀಲ, ಗಳತಗ ಬಸವರಾಜ ಪಾಟಿಲ್, ಜಿಲ್ಲಾ ಯುವ ಅಧ್ಯಕ್ಷ ಗುಂಡು ಪಾಟೀಲ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅಧ್ಯಕ್ಷ ಸಿದಗೌಡ ಪಾಟಿಲ್, ಕಾರ್ಯಾಧ್ಯಕ್ಷ ಅಶೋಕ ಹರಗಾಪುರೆ, ತಾಲ್ಲೂಕು ಅಧ್ಯಕ್ಷ ಸುಧಾಕರ ಪಾಟೀಲ , ಚಿಕ್ಕೋಡಿ ಜಿಲ್ಲಾ ಯುವ ಕಾರ್ಯದರ್ಶಿ ಶಿವಪ್ಪ ಸೌದೆ , ಹೊನಗೌಡ ಮೊದಲಾದವರು ಉಪಸ್ಥಿತರಿದ್ದರು.
ಸಮುದಾಯಕ್ಕೆ ಜಗದ್ಗುರು ಕರೆ:
ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆಯ ತೀರ್ಮಾನ ಕುರಿತಂತೆ ಮಾಹಿತಿ ಹಂಚಿಕೊಂಡಿರುವ, ಹೋರಾಟದ ರೂವಾರಿಯೂ ಆದ ಕೂಡಲಸಂಗಮದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು, ಬೆಳಗಾವಿ ಗ್ರಾಮೀಣ ಜಿಲ್ಲೆ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಮಾಜ ಬಾಂಧವರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದ್ದಾರೆ.
ಮೀಸಲಾತಿ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾಗಿ ಸಹಕಾರ ರತ್ನ ಚಂದನ ಕೋಟಿವಾಲ್ ಹಾಗೂ ಅಧ್ಯಕ್ಷರಾಗಿ ಸುನೀಲ ಪಾಟೀಲ ಅವರನ್ನು ಸರ್ವಾನುಮತದದಿಂದ ಆಯ್ಕೆ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.