ಬೆಂಗಳೂರು: ತೆರಿಗೆ ಹಣ ಕರುನಾಡಿನವರದ್ದು, ಕೊಡುಗೆ ತೆಲಂಗಾಣದ ಕಾಂಗ್ರೆಸ್ಸಿಗೆ? ಇದು ಸಿದ್ದರಾಮಯ್ಯ ಸರ್ಕಾರದ ನಡೆ ಎಂಬಂತಿದೆ.
ಚುನಾವಣೆ ನಡೆಯುತ್ತಿರುವ ತೆಲಂಗಾಣ ಜನರ ಮೇಲೆ ಕರ್ನಾಟಕದ ಸಾಧನೆಯನ್ನು ತೋರಿಸುವ ಜಾಹೀರಾತು ಮೂಲಕ ಪ್ರಭಾವ ಬೀರುವ ಪ್ರಯತ್ನ ಕಾಂಗ್ರೆಸ್ ಪಕ್ಷದಿಂದ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ನವೆಂಬರ್ 30 ರಂದು ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿನ ಪತ್ರಿಕೆಗಳಲ್ಲಿ ‘ಗ್ಯಾರಂಟಿ’ ಕುರಿತು ಜಾಹಿರಾತು ಪ್ರಕಟಿಸಲಾಗುತ್ತಿದೆ. ಈ ಜಾಹೀರಾತು ಮೂಲಕ ಕಾಂಗ್ರೆಸ್ ಪಕ್ಷ ಪರೋಕ್ಷ ಪ್ರಚಾರ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ನೊಟೀಸ್ ನೀಡಿದೆ. ತೆಲಂಗಾಣದ ಪತ್ರಿಕೆಗಳಿಗೆ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ಆಯೋಗ ಸೂಚಿಸಿದೆ. ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯದ ಬಗ್ಗೆ ವಿವರಣೆಯನ್ನೂ ಕೇಳಿದೆ.
ಬಿಜೆಪಿ ಆಕ್ರೋಶ..
ತೆಲಂಗಾಣ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಸಿದ್ದರಾಮಯ್ಯ ಸರ್ಕಾರದ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಕರ್ನಾಟಕವನ್ನು ಕಾಂಗ್ರೆಸ್ ತನ್ನ ಪಾಲಿನ ATM ಮಾಡಿಕೊಂಡಿದೆ ಎಂಬುದು ವೃಥಾ ಆರೋಪವಲ್ಲ. ಈ ಬಗ್ಗೆ ಕಣ್ಣಿಗೆ ಕಾಣುವ ಸಾಕ್ಷ್ಯಗಳೇ ಇವೆ ಎಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ತೆಲಂಗಾಣ ಚುನಾವಣೆಗೆ ಪ್ರಚಾರಕ್ಕಾಗಿ ಕಾಂಗ್ರೆಸ್ ನಮ್ಮ ರಾಜ್ಯದ ಸರ್ಕಾರಿ ಖಜಾನೆಯಿಂದ ಖರ್ಚು ಮಾಡಿ, ರಾಜ್ಯ ಸರ್ಕಾರದ ಹೆಸರಿನಲ್ಲಿ ತೆಲಂಗಾಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಕಾಂಗ್ರೆಸ್ ಚುನಾವಣಾ ಅಕ್ರಮದಲ್ಲಿ ತೊಡಗಿದೆ ಎಂದು ಆರೋಪಿಸಿದೆ.
ಚುನಾವಣಾ ಆಯೋಗ ಕಾಂಗ್ರೆಸ್ಗೆ ನೋಟಿಸ್ ನೀಡಿ ಛೀಮಾರಿ ಹಾಕಿದೆ. ನೈತಿಕವಾಗಿ ದಿವಾಳಿಯಾಗಿ, ಭ್ರಷ್ಟಾಚಾರದಲ್ಲಿ ಹೊಸ ದಾಖಲೆ ಬರೆಯುತ್ತಿರುವ ಸಿದ್ದರಾಮಯ್ಯ ಅವರು ಕರ್ನಾಟಕದ ಮಾನವನ್ನು ದೇಶದೆಲ್ಲೆಡೆ ಹರಾಜು ಹಾಕುತ್ತಿದ್ದಾರೆ ಎಂದು ಬಿಜೆಪಿ ಗೇಲಿ ಮಾಡಿದೆ.
ಕರ್ನಾಟಕವನ್ನು ಕಾಂಗ್ರೆಸ್ ತನ್ನ ಪಾಲಿನ ATM ಮಾಡಿಕೊಂಡಿದೆ ಎಂಬುದು ವೃಥಾ ಆರೋಪವಲ್ಲ. ಈ ಬಗ್ಗೆ ಕಣ್ಣಿಗೆ ಕಾಣುವ ಸಾಕ್ಷ್ಯಗಳೇ ಇವೆ.
ತೆಲಂಗಾಣ ಚುನಾವಣೆಗೆ ಪ್ರಚಾರಕ್ಕಾಗಿ @INCKarnataka ನಮ್ಮ ರಾಜ್ಯದ ಸರ್ಕಾರಿ ಖಜಾನೆಯಿಂದ ಖರ್ಚು ಮಾಡಿ, ರಾಜ್ಯ ಸರ್ಕಾರದ ಹೆಸರಿನಲ್ಲಿ ತೆಲಂಗಾಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಕಾಂಗ್ರೆಸ್… https://t.co/56MKEOcRr9
— BJP Karnataka (@BJP4Karnataka) November 27, 2023