ಬಳ್ಳಾರಿ: ತುಂಗಭದ್ರಾ ಗೇಟ್ ಮುರಿದ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಲಿ. ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ತುಂಗಭದ್ರಾ ಜಲಾಶಯ ಗೇಟ್ ಮುರಿದು ನೀರು ಖಾಲಿಯಾಗಿ ರೈತರ ಬದುಕು ಹಾಳಾಗಲು. ಸರ್ಕಾರದ ನಿರ್ಲಕ್ಷತನವೇ ಕಾರಣ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ದೂರಿದ್ದಾರೆ.
ಕಳೆದ ಒಂದು ತಿಂಗಳಿಂದ ನಿರಂತರ ಮಳೆ. ಪ್ರವಾಹ ಬರುತ್ತಿದ್ದರೂ ಜಲಾಶಯಗಳ ಸುರಕ್ಷತೆ ಪ್ರವಾಹ ಹಾನಿ ಬಗ್ಗೆ ಗಂಭೀರ ಚಿಂತನೆ ನಡೆಸದೆ ಸರ್ಕಾರ ನಿರ್ಲಕ್ಷ್ಯ ತಾಳಿದೆ. ಇದು ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಬೇಜವಾಬ್ದಾರಿತನ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ 4-5 ಜಿಲ್ಲೆಗಳ 22 ಲಕ್ಷ ಎಕ್ಟರ್ ನಲ್ಲಿ ಭತ್ತ ಬೆಳೆಯುತ್ತಿದ್ದ ರೈತರ ಬದುಕು ನಾಶವಾಗಲು ಕಾರಣವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ 70 ವರ್ಷಗಳ ಹಳೆಯದಾದ ಗೇಟ್ಗಳನ್ನು ಬದಲಾಯಿಸಬೇಕು ಈ ಬಗ್ಗೆ ನಿಗಾ ವಹಿಸುವಂತೆ ಒತ್ತಾಯ ಮಾಡುತ್ತಿದ್ದರೂ ನಿರ್ಲಕ್ಷ್ಯ ಮಾಡಿದ ನೀರಾವರಿ ಇಲಾಖೆ ಈ ಘಟನೆಗೆ ಕಾರಣವಾಗಿದೆ ಎಂದಿದ್ದಾರೆ.
ರೈತರು ಬೆಳೆದ ಅನ್ನ ತಿನ್ನುವ ಜನಪ್ರತಿನಿಧಿಗಳಿಗೆ ರೈತರ ಸಂಕಷ್ಟ ಅರಿವಾಗುತ್ತಿಲ್ಲ ಸ್ವಹಿತಾ ಶಕ್ತಿಯ ರಾಜಕೀಯವೇ ಮುಖ್ಯವಾಗಿರುವ ಕಾರಣ ರೈತರ ಬದುಕು ಬೀದಿ ಪಾಲಾಗುತ್ತಿದೆ. ಕಳೆದ ವರ್ಷದ ಬರಗಾಲ ರೈತರನ್ನು ಕಾಡಿತ್ತು ಈ ವರ್ಷ ಉತ್ತಮ ಮಳೆಯಾಗಿದೆ ಜಲಾಶಯ ಭರ್ತಿಯಾಗಿದೆ ಉತ್ತಮ ಬೆಳೆ ಬರುತ್ತದೆ ಎನ್ನುವ ರೈತರ ಸಂತೋಷ ಕಮರಿ ಹೋಗುವಂತಾಗಿದೆ ಎಂದವರು ಕಿಡಿ ಕಾರಿದ್ದಾರೆ.
ನೀರಾವರಿ ಸಚಿವರು ಕಳೆದ ವರ್ಷ ಕಾವೇರಿ ಭಾಗದ ನೀರನ್ನು ಖಾಲಿ ಮಾಡಿ ರೈತರನ್ನ ಬಲಿಕೊಟ್ಟಾಗಿದೆ. ಇವರ ಬೇಜವಾಬ್ದಾರಿತನ ಈ ವರ್ಷ ಈ ಭಾಗದ ರೈತರು ಬಲಿಪಶು ಆಗಿದ್ದಾರೆ. ನೀರಾವರಿ ಸಚಿವರು ಕೂಡಲೇ ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷಗಿರಿ ರಾಜಕೀಯ ಮಾಡುವುದು ಒಳ್ಳೆಯದು ಎಂದು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.