ಪ್ರಚೋದನಾಕಾರಿ ಹೇಳಿಕೆಯ ಪ್ರತಿಧ್ವನಿ; ಬಂಟ್ವಾಳ ಬಳಿ ಹಿಂದೂ ಕಾರ್ಯಕರ್ತರಿಂದ ದಿಢೀರ್ ‘ಬಿ.ಸಿ.ರೋಡ್ ಚಲೋ’; ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಪರದಾಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ಚಾಳದಲ್ಲಿ  ಪ್ರಚೋದನಕಾರಿ ಹೇಳಿಕೆ ವಿರುದ್ದ ಹಿಂದೂ ಕಾರ್ಯಕರ್ಯರು ಬೀದಿಗಿಳಿದಿದ್ದಾರೆ. ‘ತಾಕತ್ತಿದ್ದರೆ ಈದ್ ಮಿಲಾದ್ ಮೆರವಣಿಗೆಯ ಮೇಲೆ ದಾಳಿ ಮಾಡಿ’ ಎಂದು ಬಂಟ್ವಾಳ ಪುಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ನೀಡಿದ್ದಾರೆ ಎನ್ನಲಾದ ಪ್ರಚೋದನಕಾರಿ ಹೇಳಿಕೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರು ಬಂಟ್ವಾಳ ಸಮೀಪ ಬಿ.ಸಿ.ರೋಡ್‌ನಲ್ಲಿ ರ್ಯಾಲಿ ಕೈಗೊಂಡಿದ್ದಾರೆ.

ಮುಸ್ಲಿಂ ಮುಖಂಡರು ಹಿಂದೂ ಸಂಘಟನೆಯ ನಾಯಕ ಶರಣ್ ಪಂಪ್‌ವೆಲ್ ವಿರುದ್ದ ಪ್ರಚೋದನಾಕಾರಿ ಹೇಳಿಕೆ ನೀಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಇದರಿಂದ ಕೆರಳಿರುವ ಹಿಂದೂ ಸಂಘಟನೆಗಳು ‘ಬಿ.ಸಿ.ರೋಡ್ ಚಲೋ’ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಬಿ.ಸಿ.ರೋಡ್‌ ಪಟ್ಟಣದಲ್ಲಿ ಜಮಾಯಿಸಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ನೂರಾರು ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದರೂ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ, ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನೂ ಬೇಧಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ನಡವೆ, ಹಿಂದೂಗಳನ್ನು ಕೆರಳಿಸುವ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ಹೊಂದೂ ಸಂಘಟನೆಯ ಕಾರ್ಯಕರ್ತರು ಹೇಳಿದ್ದಾರೆ.

Related posts