ದೆಹಲಿಯ 3ನೇ ಮಹಿಳಾ ಸಿಎಂ ಆಗಿ ಅತಿಶಿ ಪದಗ್ರಹಣ

ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಹಿರಿಯ ಎಎಪಿ ಶಾಸಕಿ ಅತಿಶಿ ಅವರು ಪ್ರಮಾಣವಚನ ಸ್ವೀಕರಿಸಿದರು.
ರಾಜಧಾನಿಯ ರಾಜ್ ನಿವಾಸದಲ್ಲಿ ಶನಿವಾರ ಅವರು ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಮಾಡಿದರು. ಅವರ ಜೊತೆ ಐವರು ಸಂಪುಟ ಸಚಿವರಾಗಿ ಕೂಡಾ ಪ್ರಮಾಣ ವಚನ ಸ್ವೀಕರಿಸಿದರು.

ದೆಹಲಿಯ 3ನೇ ಸಿಎಂ ಆಗಿ ಆತಿಶಿ ಅವರು ಅಧಿಕಾರ ವಹಿಸಿಕೊಂಡು ಗಮನಸೆಳೆದಿದ್ದಾರೆ. ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಹಿನ್ನಲೆಯಲ್ಲಿ ಸಿಎಂ ಪದಗ್ರಹಣ ಸಮಾರಂಭ ಸರಳವಾಗಿ ನಡೆಯಿತು. ಆತಿಶಿ ಸರ್ಕಾರ ಈ ತಿಂಗಳ 26-27 ರಂದು ನಡೆಯಲಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಬಹುಮಾನ ಸಾಬೀತುಪಡಿಸಲಿದೆ ಎಂದು ಆಪ್ ನಾಯಕರು ತಿಳಿಸಿದ್ದಾರೆ.

Related posts