ನಟಿ ರಶ್ಮಿಕಾಗೆ ಗಾಯ; ‘ಸಿಖಂದರ್’ನಿಂದಲೂ ದೂರ

ನಟಿ ರಶ್ಮಿಕಾ ಮಂದಣ್ಣ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸಲ್ಮಾನ್‌ ಖಾನ್‌ ನಟನೆಯ ಸಿಖಂದರ್‌ ಸಿನಿಮಾದ ಶೂಟಿಂಗ್‌ಗೆ ತಯಾರಿ ನಡೆಸುವ ನಡುವೆ ಜಿಮ್‌ನಲ್ಲಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಎಡವಟ್ಟಾಗಿ ನಟಿಗೆ ಗಾಯಗಳಾಗಿವೆ ಎನ್ನಲಾಗಿದೆ. ಆದರೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನಟಿ ರಶ್ಮಿಕಾ ಅವರಿಗೆ ಕೆಲ ದಿನಗಳವರೆಗೆ ವಿಶ್ರಾಂತಿ ಅಗತ್ಯವಿದ್ದು, ‘ಸಿಖಂದರ್’ ಚಿತ್ರದ ಶೂಟಿಂಗ್’ನಿಂದಲೂ ಅವರು ದೂರ ಉಳಿಯಬೇಕಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

Related posts