ಮೈಸೂರು: ಉದಯಗಿರಿ ಪೋಲಿಸ್ ಸ್ಟೇಷನ್ ಮೇಲೆ ಮತ್ತು ಪೊಲೀಸರ ಮೇಲೆ ನಡೆದ ಹಲ್ಲೆ,ಡಿ.ಸಿ.ಪಿ ಯವರ ವಾಹನದ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆಯನ್ನು ಸಂಸದ ಯಧುವೀರ್ ಖಂಡಿಸಿದ್ದಾರೆ.
ರಾಜ್ಯದಲ್ಲಿ ಪ್ರತಿನಿತ್ಯ ಹಿಂಸಾಚಾರˌ ಕೊಲೆˌ ಕಲ್ಲು ತೂರಾಟಗಳಂತಹ ಕೃತ್ಯಗಳು ಸಾಲುಸಾಲಾಗಿ ನಡೆಯುತ್ತಿವೆ. ಶಾಂತಿˌ ಸಮೃದ್ದಿˌ ಸಂಸ್ಕೃತಿಗೆ ಇಡಿ ವಿಶ್ವಕ್ಕೆ ಮಾದರಿಯಾಗಿರುವ ಮೈಸೂರಿನಲ್ಲಿ ಈ ರೀತಿಯ ಗಲಾಟೆಗಳು ನಡೆಯುವುದು ಮತ್ತು ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗುವುದು ಈ ನಾಡಿಗೆ ಶೋಭೆ ತರುವುದಿಲ್ಲ ಎಂದವರು ಪ್ರತಿಪಾದಿಸಿದ್ದಾರೆ.
ನಿನ್ನೆ ನಮ್ಮ ಮೈಸೂರಿನ ಉದಯಗಿರಿ ಪೋಲಿಸ್ ಸ್ಟೇಷನ್ ಮೇಲೆ ಮತ್ತು ಪೊಲೀಸರ ಮೇಲೆ ನಡೆದ ಹಲ್ಲೆ,ಡಿ.ಸಿ.ಪಿ ಯವರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವುದು ಖಂಡನೀಯ.
ರಾಜ್ಯದಲ್ಲಿ ಪ್ರತಿನಿತ್ಯ ಹಿಂಸಾಚಾರˌ ಕೊಲೆˌ ಕಲ್ಲು ತೂರಾಟಗಳಂತಹ ಕೃತ್ಯಗಳು ಸಾಲುಸಾಲಾಗಿ ನಡೆಯುತ್ತಿವೆ. ಶಾಂತಿˌ ಸಮೃದ್ದಿˌ ಸಂಸ್ಕೃತಿಗೆ ಇಡಿ ವಿಶ್ವಕ್ಕೆ ಮಾದರಿಯಾಗಿರುವ… pic.twitter.com/F43lrc4Rpf
— Yaduveer Wadiyar (@yaduveerwadiyar) February 11, 2025
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿ ನಿಂತಿದ್ದರೂˌ ರಾಜ್ಯ ಸರ್ಕಾರ ಮಾತ್ರ ಈ ಕುರಿತಾಗಿ ಯಾವುದೇ ಕಠೀಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬುದು ವಿಷಾದನೀಯ ಎಂದು ಟ್ವೀಟ್ ಮಾಡಿರುವ ಯಧುವೀರ್, ಮುಖ್ಯಮಂತ್ರಿಯ ತವರು ಜಿಲ್ಲೆಯಲ್ಲಿಯೇ ಇಂತಹ ಗಲಭೆ ನಡೆದಿರುವುದು ದುರದೃಷ್ಟಕರ ಸಂಗತಿ ಎಂದಿದ್ದಾರೆ.
ಕೂಡಲೇ ತಪ್ಪಿತಸ್ಥರನ್ನು ಹುಡುಕಿ ಅವರ ವಿರುದ್ಧ ಕಠಿಣ ಕಾನೂನೂ ಕ್ರಮ ಜರುಗಿಸಬೇಕೆಂದು. ಈ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.