ದೆಹಲಿ: ವಿದೇಶಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕಿಲ್ಲರ್ ಕೊರೋನಾ ಭಾರತದಲ್ಲೂ ಅಟ್ಟಹಾಸ ಮೆರೆಯುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ಭಾರತದಲ್ಲಿ ಸಾವಿರದ ಗಡಿಗೆ ಸಮೀಪವಿದೆ. ದಿನ ಕಳೆದಂತೆಲ್ಲಾ ಹೆಚ್ಚುಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದ್ದು ನಾವೆಷ್ಟು ಸೇಫ್ ಎಂಬ ಭಾವನೆ ಭಾರತೀಯರಲ್ಲೂ ಮೂಡಲಾರಂಭಿಸಿದೆ. ಲಾಕ್ ಡೌನ್ ಇದ್ದಾಗಿಯೂ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಮುಂದೇನು ಎಂಬ ಚಿಂತೆ ಸರ್ಕಾರವನ್ನೂ ಕಾಡುತ್ತಿದೆ.
ಒಂದೇ ದಿನದಲ್ಲಿ 180 ಮಂದಿಯಲ್ಲಿ ಸೋಂಕು
ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಶನಿವಾರ ಒಂದೇ ದಿನದಲ್ಲಿ 180 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 980 ದಾಟಿದೆ.
ಎಲ್ಲೆಲ್ಲಿ ಸಾವು?
ದೆಹಲಿ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಕೇರಳ, ತಮಿಳುನಾಡು, ಮಧ್ಯಪ್ರದೇಶ, ಬಿಹಾರ, ಪಂಜಾಬ್, ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ, ಕೇರಳ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಕೊರೋನಾದಿಂದ ಸಾವು ಸಂಭವಿಸಿರುವ ವರದಿಗಳಾಗಿವೆ. ಈಗಾಗಲೇ ಭಾರತದಲ್ಲಿಯೋ ೨೬ ಮಂದಿಯನ್ನು ಬಲಿಪಡೆದಿರುವ ಕೊರೋನಾ ಮಹಾಮಾರಿಯಿಂದ ಪಾರಾಗಲು ಮನೆಯಲ್ಲೇ ಇರಿ ಎಂಬ ಸೂಚನೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ.