2026ರ ಸಾರ್ವತ್ರಿಕ ರಜಾ ಪಟ್ಟಿ ಪ್ರಕಟಿಸಿದ ಕರ್ನಾಟಕ ಸರ್ಕಾರ

ಬೆಂಗಳೂರು: ಕರ್ನಾಟಕ ಸರ್ಕಾರವು 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪಟ್ಟಿ ಅನುಮೋದನೆಗೊಂಡಿದೆ. ರಾಷ್ಟ್ರೀಯ ಹಬ್ಬಗಳು ಹಾಗೂ ಪ್ರಮುಖ ಧಾರ್ಮಿಕ ಹಬ್ಬಗಳನ್ನು ಒಳಗೊಂಡಂತೆ ಒಟ್ಟು 20 ರಜೆಗಳು ಈ ಪಟ್ಟಿ ಒಳಗೊಂಡಿವೆ.

2026ರ ಸಾರ್ವತ್ರಿಕ ರಜಾ ದಿನಗಳು:

  • ಜನವರಿ 15 (ಗುರುವಾರ) – ಉತ್ತರಾಯಣ ಪುಣ್ಯಕಾಲ / ಮಕರ ಸಂಕ್ರಾಂತಿ
  • ಜನವರಿ 26 (ಸೋಮವಾರ) – ಗಣರಾಜ್ಯೋತ್ಸವ
  • ಮಾರ್ಚ್ 19 (ಗುರುವಾರ) – ಯುಗಾದಿ ಹಬ್ಬ
  • ಮಾರ್ಚ್ 21 (ಶನಿವಾರ) – ಖುತುಬ್-ಎ-ರಂಜಾನ್
  • ಮಾರ್ಚ್ 31 (ಮಂಗಳವಾರ) – ಮಹಾವೀರ ಜಯಂತಿ
  • ಏಪ್ರಿಲ್ 3 (ಶುಕ್ರವಾರ) – ಗುಡ್ ಫ್ರೈಡೇ
  • ಏಪ್ರಿಲ್ 14 (ಮಂಗಳವಾರ) – ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ
  • ಏಪ್ರಿಲ್ 20 (ಸೋಮವಾರ) – ಬಸವ ಜಯಂತಿ / ಅಕ್ಷಯ ತೃತೀಯ
  • ಮೇ 1 (ಶುಕ್ರವಾರ) – ಕಾರ್ಮಿಕ ದಿನಾಚರಣೆ
  • ಮೇ 28 (ಗುರುವಾರ) – ಬಕ್ರೀದ್
  • ಜೂನ್ 26 (ಶುಕ್ರವಾರ) – ಮೊಹರಂ
  • ಆಗಸ್ಟ್ 15 (ಶನಿವಾರ) – ಸ್ವಾತಂತ್ರ್ಯ ದಿನಾಚರಣೆ
  • ಆಗಸ್ಟ್ 26 (ಬುಧವಾರ) – ಈದ್-ಮಿಲಾದ್
  • ಸೆಪ್ಟೆಂಬರ್ 14 (ಸೋಮವಾರ) – ವರಸಿದ್ಧಿ ವಿನಾಯಕ ವ್ರತ
  • ಅಕ್ಟೋಬರ್ 2 (ಶುಕ್ರವಾರ) – ಗಾಂಧಿ ಜಯಂತಿ
  • ಅಕ್ಟೋಬರ್ 20 (ಮಂಗಳವಾರ) – ಮಹಾನವಮಿ / ಆಯುಧ ಪೂಜೆ
  • ಅಕ್ಟೋಬರ್ 21 (ಬುಧವಾರ) – ವಿಜಯದಶಮಿ
  • ನವೆಂಬರ್ 10 (ಮಂಗಳವಾರ) – ಬಲಿಪಾಡ್ಯಮಿ / ದೀಪಾವಳಿ
  • ನವೆಂಬರ್ 27 (ಶುಕ್ರವಾರ) – ಕನಕದಾಸ ಜಯಂತಿ
  • ಡಿಸೆಂಬರ್ 25 (ಶುಕ್ರವಾರ) – ಕ್ರಿಸ್‌ಮಸ್

ಭಾನುವಾರಕ್ಕೆ ಬಂದಿರುವ ಹಬ್ಬಗಳು:

  • ಫೆಬ್ರವರಿ 15 – ಮಹಾಶಿವರಾತ್ರಿ
  • ಅಕ್ಟೋಬರ್ 10 – ಮಹಾಲಯ ಅಮಾವಾಸ್ಯೆ (2ನೇ ಶನಿವಾರ)
  • ಅಕ್ಟೋಬರ್ 25 – ಮಹರ್ಷಿ ವಾಲ್ಮೀಕಿ ಜಯಂತಿ
  • ನವೆಂಬರ್ 1 – ಕನ್ನಡ ರಾಜ್ಯೋತ್ಸವ
  • ನವೆಂಬರ್ 8 – ನರಕ ಚತುರ್ದಶಿ

ರಾಜ್ಯ ಸರ್ಕಾರದ ಪ್ರಕಟಣೆಯ ಪ್ರಕಾರ, ಭಾನುವಾರಕ್ಕೆ ಬಂದಿರುವ ಹಬ್ಬಗಳಿಗೆ ಪ್ರತ್ಯೇಕ ರಜೆ ಅನ್ವಯಿಸುವುದಿಲ್ಲ. ಈ ಪಟ್ಟಿ ಪ್ರಕಾರ, ಸರ್ಕಾರಿ ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಕ್ರಮವಾಗಿ ಮುಚ್ಚಲಿವೆ.

Related posts