ಕರ್ನಾಟಕದ ಕಾವೇರಿ ನೀರಿನ ಸಂಕಷ್ಟ: ಕೇಂದ್ರದ ಗಮನಸೆಳೆಯುವಲ್ಲಿ ಯಶಸ್ವಿಯಾದ ಜಲ ಸಂರಕ್ಷಣಾ ಸಮಿತಿ

ದೆಹಲಿ: ಕರ್ನಾಟಕದ ಕಾವೇರಿ ನೀರಿನ ಸಂಕಷ್ಟದ ಬಗ್ಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನಿಯೋಗ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

9ರಂದು ಬೆಳಿಗ್ಗೆ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕೇಂದ್ರ ಸಚಿವರ ಗೃಹ ಕಚೇರಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಜಲ ಸಂರಕ್ಷಣಾ ಸಮಿತಿ ನಿಯೋಗ ಭೇಟಿ ಮಾಡಿದೆ. ಸಚಿವರ ಜೊತೆ ಸುಮಾರು 20 ನಿಮಿಷಗಳ ಕಾಲ ವಿಸೃತ ಚರ್ಚೆ ನಡೆಸಿ ಕರ್ನಾಟಕದ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಲಾಯಿತು ನಿಯೋಗದಲ್ಲಿದ್ದ ಕರ್ನಾಟಕ ಜಲಸಂರಕ್ಷಣಾ ಸಮಿತಿಯ ಮುಖ್ಯಸ್ಥ, ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ .

ಕರ್ನಾಟಕದ ಜನರು 25 ಜನ ಬಿಜೆಪಿ ಎಂ ಪಿ ಗಳನ್ನ ಆಯ್ಕೆ ಮಾಡಿ ಕಳಿಸಿದ್ದಾರೆ ಈ ಸರ್ಕಾರದಿಂದಲೇ ನಮಗೆ ಅನ್ಯಾಯವಾಗುತ್ತಿದೆ ರಾಜ್ಯದ ರೈತರ ಬಲಿಕೊಡುವಂತಾಗಿದೆ ರೈತರು ಕೃಷಿ ತೊರೆದು ವಲಸೆ ಹೋಗುತ್ತಿದ್ದಾರೆ ,ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಎಂಟು ತಿಂಗಳು ಯಾವುದೇ ಬೆಳೆ ಬೆಳೆದಿಲ್ಲ, ಬೆಂಗಳೂರಿನಲ್ಲಿ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ ಆದ್ದರಿಂದ ಕಾವೇರಿ ನೀರು ನಿರ್ವಹಣ ಮಂಡಳಿ ಆದೇಶ ತಡೆಯಾಕಬೇಕು ಎಂದು ಒತ್ತಾಯಿಸಿದರು ಕುಡಿಯುವ ನೀರಿಗಾಗಿ ಬೆಂಗಳೂರು ಬಂದ್ ಹಾಗೂ ಕರ್ನಾಟಕ ಬಂದ್ ಆಚರಿಸಿ ಜನಸಾಮಾನ್ಯರು ಬೀದಿಗೆ ಬಂದಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವರಿ್ಿಎಗ ಮನವರಿಕೆ ಮಾಡಲಾಯಿತು ಎಂದು ಕುರುಬೂರು ಶಾಂತಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

ಸಚಿವರು ನಿಯೋಗದ ಮನವಿಯನ್ನು ಆಲಿಸಿ ನನಗೆ ಕಾವೇರಿ ಅಚ್ಚುಕಟ್ಟು ಭಾಗದ ಎಲ್ಲ ಸಮಸ್ಯೆಗಳು ಅರಿವಾಗಿದೆ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು, ಆದರೂ ಸಹ ಮುಂದಿನ ಎರಡು ದಿನಗಳಲ್ಲಿ ಕಾವೇರಿ ನೀರಿನ ನಿರ್ವಹಣಾ ಸಮಿತಿ ಸಭೆ ನಡೆಯಲಿದೆ ಆ ಸಭೆಯಲ್ಲಿ ಕರ್ನಾಟಕದ ನಿಯೋಗದ ಒತ್ತಾಯಗಳ ಬಗ್ಗೆ ಮಂಡಿಸಿ ಗಮನ ಸೆಳೆಯಲಾಗುವುದು ಸಕಾರಾತ್ಮಕವಾದ ನಿರ್ಧಾರ ಕೈಗೊಳ್ಳಲು ತಿಳಿಸಿ ಕೇಂದ್ರ ಸರ್ಕಾರ ಕರ್ನಾಟಕದ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಸಚಿವರು ಆಶಾ ಭಾವನೆಯ ಭರವಸೆ ನೀಡಿದರು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಜನಸಾಮಾನ್ಯರಿಗೆ ನೀರು ಉಳಿಸದೆ ,ಕಾವೇರಿ ನೀರು ತಮಿಳುನಾಡಿಗೆ ಹರಿಸಿ, ರಾಜ್ಯದ ರೈತರಿಗೆ ಕುಡಿಯುವ ನೀರಿಗೆ ಸಂಕಷ್ಟ ತಂದಿರುವ ನೀತಿಯನ್ನು ಸರಿಪಡಿಸುವಂತೆ , ಕಾವೇರಿ ನೀರು ನಿರ್ವಹಣಾ ಮಂಡಳಿ ಆವೈಜ್ಞಾನಿಕ ಆದೇಶ ತಡೆಯಬೇಕು. ಕರ್ನಾಟಕ ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ಬರಗಾಲಕ್ಕೆ 195 ತಾಲೂಕುಗಳು ತುತ್ತಾಗಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕಾವೇರಿ ಅಚ್ಚುಕಟ್ಟು ಭಾಗದ 38 ತಾಲೂಕುಗಳು ಬರಗಾಲಕ್ಕೆ ತುತ್ತಾಗಿ ರೈತರು ಯಾವುದೇ ಬೆಳೆ ಬೆಳೆದಿರುವುದಿಲ್ಲ ಕಾವೇರಿ ವ್ಯಾಪ್ತಿಗೆ ಬರುವ ಬೆಂಗಳೂರು ಒಂದು ಕೋಟಿ 30 ಲಕ್ಷ ಜನರ ಕುಡಿಯುವ ನೀರಿನ ಸಂಕಷ್ಟ ಬಂದಿದೆ. ಇಂಥ ಸಂದಿಗ್ಧ ಸಮಯದಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ಪ್ರತಿನಿತ್ಯ 5000 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಸಬೇಕೆಂಬ ಅವೈಜ್ಞಾನಿಕ ಆದೇಶವನ್ನು ಹೊರಡಿಸಿತ್ತು. ಆದೇಶ ಪಾಲನೆ ಮಾಡಬೇಕು ಎಂದು ಕಾವೇರಿ ನೀರು ತಮಿಳನಾಡಿಗೆ ಬಿಡುವ ಮೂಲಕ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದೆ ಜನರಿಗೆ ಆತಂಕವಾಗಿದೆ ಬೆಂಗಳೂರು ನಗರದಲ್ಲಿ ಎರಡು ಬಾರಿ ಜನಸಾಮಾನ್ಯರೇ ಶಾಂತಿಯುತ ಬಂದ್ ಆಚರಣೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ, ನಾವು ನಡೆಸಿದ ಹೋರಾಟದ ನಂತರವೂ ಮಂಡಳಿ 3000 ಕ್ಯೂಸೆಕ್ಸ್ ನೀರು ಬಿಡಬೇಕೆಂಬ ಆದೇಶ ನೀಡಿರುವುದನ್ನು ಒಪ್ಪಿ, ರಾಜ್ಯ ಸರ್ಕಾರ ಮತ್ತೆ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ನಿಯೋಗ ಒತ್ತಾಯಿಸಿದೆ ಎಂದು ಅವರು ತಿಳಿಸಿದ್ದಾರೆ.

ಜಲ ಸಂರಕ್ಷಣಾ ಸಮಿತಿಯ ಹಕ್ಕೊತ್ತಾಯಗಳು :

  • ರಾಜ್ಯ ಸರ್ಕಾರ ನೀರು ನಿರ್ವಹಣಾ ಮಂಡಳಿ ಆದೇಶ ಪಾಲಿಸಿ ತಮಿಳುನಾಡಿಗೆ ಅವೈಜ್ಞಾನಿಕವಾಗಿ ಹರಿಸುತ್ತಿರುವ ನೀರನ್ನು ಈ ಕೂಡಲೇ ನಿಲ್ಲಿಸಬೇಕು,

  • ಸಾಂಪ್ರದಾಯಿಕ ಮುಂಗಾರು ಮಾರುತದ ಅವಧಿಯಲ್ಲಿ ನಿಗದಿತ ಪ್ರಮಾಣದ ಮಳೆ ಬಾರದೇ ಕೊರತೆ ಉಂಟಾದರೆ ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಮತ್ತು ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾದರೆ ಇದರ ಪರಿಹಾರಕ್ಕಾಗಿ ಉಭಯ ರಾಜ್ಯಗಳ ನಡುವೆ ಮಳೆ ಆಧಾರಿತ ಸಂಕಷ್ಟ ಸೂತ್ರವನ್ನು ಜಾರಿಗೊಳಿಸುವುದು ಅತ್ಯಂತ ಪ್ರಮುಖ ಆದ್ಯತೆಯ ವಿಷಯವಾಗಿರುತ್ತದೆ ಹಾಗೂ ಹಿಂಗಾರಿನ ಅವಧಿಯಲ್ಲಿ ಪಕ್ಕದ ರಾಜ್ಯವಾದ ತಮಿಳುನಾಡಿನಲ್ಲಿ ವ್ಯಾಪಕವಾದ ಮಳೆ ಆಗುವ ಕಾರಣ ಈ ಸಂದರ್ಭದಲ್ಲಿ ಉತ್ಪತ್ತಿಯಾಗುವ 70 ಟಿಎಂಸಿಗೂ ಅಧಿಕ ನೀರನ್ನು ತಮಿಳುನಾಡು ರಾಜ್ಯವು ಬಳಸಿಕೊಳ್ಳುತ್ತಿದೆ ಆದ್ದರಿಂದ ಉಲ್ಲೇಖಿತ ಪ್ರಮಾಣಕ್ಕೆ ಸಮನಾದ ನೀರನ್ನು ಕರ್ನಾಟಕವು ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಸಂಗ್ರಹಿಸಿಕೊಂಡು, ಕುಡಿಯುವ ನೀರಿಗಾಗಿ ಹಾಗೂ ಕೈಗಾರಿಕೆಗಳ ಉಪಯೋಗಕ್ಕಾಗಿ ಬಳಸಿಕೊಂಡು ನಂತರ ತಡೆಹಿಡಿಯಲಾದ ನೀರನ್ನು ಪರಿಸ್ಥಿತಿ ಆದರಿಸಿಕೊಂಡು ತಮಿಳುನಾಡಿಗೆ ಬಿಡಲಾಗುವುದು ಇದರಿಂದ ನೆರೆಯ ರಾಜ್ಯ ತಮಿಳುನಾಡಿಗೆ ಯಾವ ರೀತಿಯ ದಕ್ಕೆ ಆಗುವುದಿಲ್ಲ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ತಮಿಳುನಾಡಿಗೆ ತಿಳಿಸಬೇಕು ಮೊದಲು ಕುಡಿಯುವ ನೀರಿಗೆ ಆದ್ಯತೆ ಎಂಬ ಸಂದೇಶ ರವಾನಿಸಬೇಕು.

  • ಈಗಾಗಲೇ ಕಾವೇರಿ ನೀರು ನಿರ್ವಹಣಾ ಮಂಡಳಿ ಜಾರಿ ಮಾಡಿರುವ 3000 ಕೂಸೆಸ್ ನೀರು ಬಿಡಬೇಕೆಂಬ ಆದೇಶ ವಾಸ್ತವಂಶವನ್ನು ಆಧರಿಸಿರುವುದಿಲ್ಲ ಆದ್ದರಿಂದ ಆದೇಶ ರದ್ದುಗೊಳಿಸಬೇಕು

  • ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳ ಒತ್ತಡದಲ್ಲಿ ಕಾವೇರಿ ಪ್ರಾಧಿಕಾರ , ನೀರು ನಿರ್ವಹಣಾ ಮಂಡಳಿ ಕಾರ್ಯನಿರ್ವಹಿಸುತ್ತಿರುವ ಕಾರಣ ಕೂಡಲೇ ಅವುಗಳನ್ನು ರದ್ದುಪಡಿಸಬೇಕು .ಯಾರ ಒತ್ತಡಕ್ಕೂ ತಲೆಬಾಗದೆ , ಪರಿಸ್ಥಿತಿಯ ಗಂಭೀರತೆ ಅರಿತು , ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು . ಈ ಮಂಡಳಿಯಲ್ಲಿ : ಕಾವೇರಿ ವ್ಯಾಪ್ತಿಗೆ ಸೇರಿದ ನಾಲ್ಕು ರಾಜ್ಯಗಳ ಪರಿಣಿತರು , ನೀರಾವರಿ ತಜ್ಞರು , ರೈತ ಪ್ರತಿನಿಧಿಗಳು , ಹವಮಾನ ತಜ್ಞರು , ನೀರಾವರಿ ಇಲಾಖೆಯ ಅಧಿಕಾರಿಗಳು- ಎಲ್ಲರನ್ನು ಒಳಗೊಂಡಂತೆ ಶಾಶನಬದ್ಧ ಮಂಡಳಿ ರಚನೆ ಮಾಡಿ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ , ಭಾರತೀಯ ಚುನಾವಣಾ ಆಯೋಗ ಕಾರ್ಯನಿರ್ವಹಿಸುವಂತೆ ನಿರ್ವಹಣೆ ಮಾಡಲು ಮಾನ್ಯ ಸರ್ವೋಚ್ಚ ನ್ಯಾಯಾಲಯ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ನಿರ್ದೇಶನ ನೀಡಬೇಕು.

  • ಪಶ್ಚಿಮ ಘಟ್ಟಗಳ ಅರಣ್ಯವನ್ನ ಬೆಳೆಸಿ ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯದ ಹಣ ಖರ್ಚು ಮಾಡಲಾಗುತ್ತಿದೆ ಈ ಅರಣ್ಯದ ಒತ್ತಡದಿಂದಲೇ ಮಳೆ ಸುರಿದು ನೀರು ಉತ್ಪತ್ತಿಯಾಗುತ್ತಿದೆ ಅದಕ್ಕೆ ನಮ್ಮ ರಾಜ್ಯದ ಹಣ ಖರ್ಚಾಗುತ್ತಿದೆ ಅದರ ಹಕ್ಕು ನಮ್ಮ ರಾಜ್ಯಕ್ಕೆ ಮುಖ್ಯವಾಗಿರಬೇಕು ನೀರಿನಲ್ಲಿ ಪಾಲು ಕೇಳುವ ತಮಿಳುನಾಡಿನವರು ಅರಣ್ಯ ಸಂರಕ್ಷಣೆ ಮಾಡಲು ಕರ್ನಾಟಕ ಸರ್ಕಾರಕ್ಕೆ ವರ್ಷಕ್ಕೆ 2000 ಕೋಟಿ ಹಣ ನೀಡುವ ವ್ಯವಸ್ಥೆ ಜಾರಿಗೆ ತರಬೇಕು.

  • ಹೆಚ್ಚು ಮಳೆ ಬಂದಾಗ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕಿಂತಲೂ ಹೆಚ್ಚು ನೀರು ತಮಿಳುನಾಡಿಗೆ ಹರಿದಿರುತ್ತದೆ ಕಳೆದ ವರ್ಷ ಸುಮಾರು 480 ಟಿಎಂಸಿ ನೀರು ತಮಿಳುನಾಡಿಗೆ ಹರಿಸಿದಾಗ ಹೆಚ್ಚುವರಿ ನೀರನ್ನ ತಮಿಳುನಾಡು ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳದೆ ವ್ಯರ್ಥವಾಗಿ ಬಂಗಾಳಕೊಲ್ಲಿ ಸಮುದ್ರ ಸೇರಿದೆ ತಮಿಳುನಾಡಿಗೆ ಬಿಡಬೇಕಾದ ನೀರನ್ನು ಕರ್ನಾಟಕ ಹರಿಸಿದ ನಂತರ ಹೆಚ್ಚುವರಿಯಾಗಿ ಉಳಿಯುವ ನೀರನ್ನ ಕುಡಿಯುವ ಹಾಗೂ ವಿದ್ಯುತ್ ಉತ್ಪಾದನೆಗಾಗಿ ಬಳಸಿಕೊಳ್ಳಲು ಸಮಾನಂತರ ಜಲಾಶಯವನ್ನು ಕರ್ನಾಟಕದ ಮೇಕೆದಾಟುವಿದಲ್ಲಿ ನಿರ್ಮಿಸಲು ಕೂಡಲೇ ಅನುಮತಿ ನೀಡುವುದು ಅವಶ್ಯಕವಿದೆ ಆದ್ದರಿಂದ ಸಂಕಷ್ಟಕಾಲಕ್ಕೆ ಅನುಕೂಲವಾಗುವ 65 ಟಿಎಂಸಿ ಸಾಮರ್ಥ್ಯದ ಮೇಕೆದಾಟು ನಿರ್ಮಾಣಕ್ಕೆ ಕೂಡಲೇ ಸೂಚನೆ ನೀಡಬೇಕು ಇದರಿಂದ ತಮಿಳುನಾಡಿಗೆ ನೀರು ಹರಿಸಲು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂಬುದನ್ನು ಆ ರಾಜ್ಯಕ್ಕೆ ತಿಳಿಸಬೇಕು

  • ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಣಯ ಕೈಗೊಂಡು ಕರ್ನಾಟಕದ ಜನರ ಹಿತ ಶಕ್ತಿ ಕಾಪಾಡಬೇಕು.

  • ಮೇಲಿನ ಒತ್ತಾಯಗಳ ಬಗ್ಗೆ ತಾವು ಕೂಡಲೇ ಬೆಂಗಳೂರು ನಗರ ಹಾಗೂ ಕಾವೇರಿ ಜಲಾನಯನ ಪ್ರದೇಶದ ರೈತರ ಹಿತ ದೃಷ್ಟಿಯಿಂದ ಗಂಭೀರ ಕ್ರಮ ಕೈಗೊಳ್ಳಬೇಕು.

ಇದೇ ವೇಳೆ, ಕಾವೇರಿ ನೀರು ನಿರ್ವಹಣಾ ವ್ಯವಸ್ಥಾಪನ ಪ್ರಾಧಿಕಾರ ಅಧ್ಯಕ್ಷ ಎಸ್ ಕೆ ಹಲ್ದಾರೆ ಅವರನ್ನ ಕೇಂದ್ರ ಕಚೇರಿಯಲ್ಲಿ ಭೇಟಿಯಾಗಿ ಕರ್ನಾಟಕದ ನೀರಿನ ಸಮಸ್ಯೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ಗಮನ ಸೆಳೆಯಲಾಯಿತು ತಮಿಳುನಾಡು ಹಾಗೂ ಕರ್ನಾಟಕ ಸರ್ಕಾರಗಳು ನೀರಿನ ಬಳಕೆಯ ಬಗ್ಗೆ ಕಾಲಕಾಲಕ್ಕೆ ಸಮರ್ಪಕ ವರದಿಗಳನ್ನು ನೀಡುತ್ತಿಲ್ಲ ಅದು ನಮಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.

Related posts