ದೊಣೆಹಳ್ಳಿ ಶರಣಬಸವೇಶ್ವರ ದಾಸೋಹಮಠದಲ್ಲಿ ವೈಭವದ ವಚನ ಕಾರ್ತಿಕ ದೀಪೋತ್ಸವ

ದಾವಣಗೆರೆ:  ಜಗಳೂರು ತಾಲ್ಲೂಕಿನ ದೊಣೆಹಳ್ಳಿಯ ಶರಣಬಸವೇಶ್ವರ ದಾಸೋಹ ಮಠದಲ್ಲಿ ವೈಭವದ ವಚನ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗಿತು. ದೊಣೆಹಳ್ಳಿಯ ಶರಣಬಸವೇಶ್ವರ ದಾಸೋಹ ಮಠದಲ್ಲಿ ವೈಭವದ ವಚನ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗಿತು.

ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಠದ ಪಟ್ಟಾಧ್ಯಕ್ಷರಾದ ಶ್ರೀ ಗುರು ಮಲ್ಲಿಕಾರ್ಜುನ ದೇವರು, ಚಿತ್ರದುರ್ಗ ಮುರುಘಾಮಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ವೇಳೆ ಚಿತ್ರದುರ್ಗ ಬೃಹನ್ಮಠದ ಕಲಾವೃಂದದ ಮುಖ್ಯಸ್ಥ ಉಮೇಶ್ ಪತ್ತಾರ್ ಅವರ ತಂಡದಿಂದ ವಚನಸಂಗೀತ ಕಾರ್ಯಕ್ರಮ ನಡೆದವು.ಭಕ್ತಸಮೂಹಕ್ಕೆ ದಾಸೋಹ ನಡೆಸಲಾಯಿತು.ಅಪಾರಸಂಖ್ಯೆಯಲ್ಲಿ ಭಕ್ತಸಮೂಹ ದೀಪಗಳೊಂದಿಗೆ ಕಾರ್ತಿಕ ದೀಪೋತ್ಸವದೊಂದಿಗೆ ಶರಣಬಸವೇಶ್ವರ ದಾಸೋಹ ಮಠದ ಭಕ್ತಿಪರ್ವ ಮೆರೆದರು.

ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಬಿ.ದೇವೇಂದ್ರಪ್ಪ, ತ್ರಿವಿಧ ದಾಸೋಹದೊಂದಿಗೆ ಜಗತ್ತಿನಲ್ಲಿ ಅಮೂಲಾಗ್ರ ಬದಲಾವಣೆಗೆ ಪೂರಕವಾಗಿ ಸೇವೆಗೈಯುತ್ತಿರುವ ದೊಣೆಹಳ್ಳಿ ಶರಣಬಸವೇಶ್ವರ ದಾಸೋಹ ಮಠ ಉತ್ತುಂಗಕ್ಕೆ ಬೆಳೆಯಲಿ.ಕತ್ತಲೆಯಿಂದ ಬೆಳಕಿನಡೆಗೆ,ಅಜ್ಞಾನದಿಂದ ಜ್ಞಾನದೆಡೆಗೆ ಪ್ರತಿಯೊಬ್ಬರೂ ಸಾಗಬೇಕಿದೆ.ಧರ್ಮದ ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತಿದೆ.ಇಂದಿನ ವಚನಕಾರ್ತಿಕ ದೀಪೋತ್ಸವದ ವಿನೂತನ ಕಾರ್ಯಕ್ರಮಗಳಿಂದ ಬಸವಣ್ಣನ. ಅನುಭವಮಂಟಪದ ಆಶಯಗಳ ಈಡೇರಿಕೆಗೆ ಸಾಕ್ಷೀಕರಿಸಿದಂತಿದೆ ಎಂದು ಪ್ರತಿಪಾದಿಸಿದರು.

ಮಠನಿರ್ಮಾಣ ಸಮಿತಿ ಮುಖ್ಯ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ ಮಾತನಾಡಿ, ಶರಣ ಸಂಸ್ಕೃತಿಯ ಹಾದಿಯಲ್ಲಿ ಬಸವತತ್ವದಡಿ ಸಮಾಜದಲ್ಲಿ ವೈಚಾರಿಕತೆ,ಸಮಾನತೆಯ ಭಾವ,ಮಾನವೀಯ ಮೌಲ್ಯಗಳನ್ನು ಭಿತ್ತುವ ಕೆಲಸ ನಡೆಯಬೇಕಿದೆ. ವಚನಕ್ರಾಂತಿಯ ಮೂಲಕ 12 ನೇ ಶತಮಾನದಲ್ಲಿನ ಬಸವಣ್ಣನ ತತ್ವಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಕರ್ನಾಟಕ ಆಗ್ರೋ ಸೀಡ್ಸ್ ಕಾರ್ಪೋರೇಷನ್ ನ ನಿವೃತ್ತ ಎಜಿಎಂ ಜಿ.ಮಂಜುನಾಥ್, ಅಖಿಲಭಾರತ ಶರಣಸಾಹಿತ್ಯ ಪರಿಷತ್ ನ ರಾಜ್ಯ ಉಪಾಧ್ಯಕ್ಷ ವೀರೇಶ್, ಪೋಲೀಸ್ ಇನ್ಸ್ ಪೆಕ್ಟರ್ ಸಿದ್ದರಾಮಯ್ಯ, ಯುವಮುಖಂಡ ಸಂಜಯ್, ಪ್ರಾಂಶುಪಾಲ ಸುಭಾಸ್ ಚಂದ್ರಬೋಸ್, ಶಿಕ್ಷಕಿ ಆಶಾ ಸೇರಿದಂತೆ ಅಪಾರ ಸಂಖ್ಯೆಯ ಶರಣ ಭಕ್ತಸಮೂಹ ಪಾಲ್ಗೊಂಡಿದ್ದರು.

ಇದೇ ವೇಳೆ, ಜಗಳೂರು ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ರಸ್ತೆಯಲ್ಲಿರುವ ಗವಿಸ್ವಾಮಿ ಮಠದವರೆಗೆ ನಡೆಯುವ ಶ್ರೀ ಗವಿ ಶಾಂತವೀರ ಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಗಮನಸೆಳೆಯಿತು. ಅಡ್ಡ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿ ಕುಮಾರ್ಸಮಾಜಕ್ಕೆ ಸಂತರು ಶರಣರು, ಪಾವಡಪುರುಷರ ಕೊಡುಗೆ ಅಪಾರವಾಗಿದೆ ಎಂದು ನೆನಪಿಸಿದರು.

Related posts