ಪರಿಹಾರದ ಹಣ ಬೇಕೆ? ಬ್ಯಾಂಕ್ ಖಾತೆ ಜೊತೆ ಆಧಾರ್ ಸಂಖ್ಯೆ ಜೋಡಣೆ ಮಾಡಿ; ರೈತರಿಗೆ ಸಚಿವರ ಸಲಹೆ

ಬೆಂಗಳೂರು: ರೈತರು ಆದಷ್ಟು ಬೇಗ ತಪ್ಪದೇ ಆಧಾರ್ ಸಂಖ್ಯೆಗೆ ಬ್ಯಾಂಕ್ ಅಕೌಂಟನ್ನು ಜೋಡಣೆ‌ ಮಾಡಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಲಹೆ ಮಾಡಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ರಾಜ್ಯದ ವಿವಿಧ ಯೋಜನೆಯಡಿ ಡಿಬಿಟಿ ಮಾರ್ಗಸೂಚಿಯಂತೆ ವಿದ್ಯುನ್ಮಾನವಾಗಿ ನೇರವಾಗಿ ರೈತರ ಖಾತೆಗೆ ಆಧಾರ್ ಆಧಾರಿತ ವ್ಯವಸ್ಥೆಯ ಮೂಲಕವರ್ಗಾಯಿಸಲಾಗುತ್ತಿದೆ ಎಂದರು.

ಬಹುತೇಕ ರೈತರು ತಮ್ಮ ಆಧಾರ್ ಕಾರ್ಡನ್ನು ಅಕೌಂಟ್ ನಂ.ಗೆ ಲಿಂಕ್ ಮಾಡಿಲ್ಲ. ರೈತರು ತಮ್ಮತಮ್ಮ ಆಧಾರ್ ಕಾರ್ಡನ್ನು ತಾವು ಉಪಯೋಗಿಸುತ್ತಿರುವ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ.. ರೈತರ ಇಚ್ಛೆಯಂತೆ ಸರಕು ರಫ್ತು; ಕೇಂದ್ರ ಸರ್ಕಾರ ಒಪ್ಪಿಗೆ

Related posts