ಪ್ರಧಾನಿಯ ‘ದೀಪ’ದ ಕರೆಗೆ ವ್ಯಾಪಕ ಬೆಂಬಲ; ಸಪೋರ್ಟ್ ಮೋದಿ ಅಭಿಯಾನ ಆರಂಭ

ದೆಹಲಿ: ಕೊರೋನಾ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯನ್ನು ದೇಶದ ಜನ ಗೌರವಿಸಿ ಅನುಸರಿಸಿದ್ದಾರೆ.  ಚಪ್ಪಾಳೆ, ಶಂಖ, ಜಾಗಟೆ ಬಳಿಕ ಕೊರೊನಾ ವಿರುದ್ಧದ ಹೋರಾಟಕ್ಕೆ ಪ್ರಧಾನಿ ಮೋದಿಯವರು ಜನತೆಗೆ ಮತ್ತೊಂದು ಟಾಸ್ಕ್ ನೀಡಿದ್ದಾರೆ. ಇದನ್ನು ಜನ ಯಾವ ರೀತಿ ಸ್ವೀಕರಿಸ್ತಾರೆ? ಯಾವ ರೀತಿ ಪ್ರತಿಕ್ರಿಯಿಸುತ್ತಾರೆ? ಯಾವ ರೀತಿ ಅನುಸರಿಸುತ್ತಾರೆ ಎಂಬುದೇ ಈಗಿರುವ ಕುತೂಹಲ..

  • ಕಳೆದೆ 22 ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದ ಮೋದಿಯವರು ಚಪ್ಪಾಳೆ ತಟ್ಟಲು ಹೇಳಿದ್ದರು. ವೈದ್ಯರ ಸಹಿತ ಕೊರೋನಾ ವಿರುದ್ಧ ಹೋರಾಡುವವರಿಗೆ ಧನ್ಯವಾದ ಹೇಳುವ ಮಾರ್ಗ ಅದಾಗಿತ್ತು.
  • ಅನಂತರ ಲಾಕ್ ಡೌನ್ ಕರೆಗೂ ಜನ ಬೆಂಬಲ ವ್ಯಕ್ತವಾಯಿತು. ಇದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಗವಾಗಿದೆ.
  • ಆದರೆ ಭಾನುವಾರ ರಾತ್ರಿ  ಜ್ಯೋತಿ ಬೆಳಗಿಸುವುದರ ಪ್ರಯೋಜನ ಏನು?

ಈ ಭಾನುವಾರ ಅಂದರೆ ಏಪ್ರಿಲ್ 5ರಂದು ರಾತ್ರಿ 9 ಗಂಟೆ ಹೊತ್ತಿಗೆ 9 ನಿಮಿಷಗಳನ್ನು ನನಗಾಗಿ ಕೊಡಿ ಎಂದಿದ್ದಾರೆ ಮೋದಿ. ಆ 9 ನಿಮಿಷಗಳ ಕಾಲ ದೇಶದ ಜನತೆ ಮನೆಯಲ್ಲಿನ ಲೈಟ್ ಗಳನ್ನು ಆರಿಸಿ ಹಣತೆ ಬೆಳಗಿಸಿ  ಅಂಧಕಾರ ತೊಲಗಿಸೋಣ, ಮಹಾಮಾರಿ ಕೊರೋನಾವನ್ನು ತೊಲಗಿಸಲು ಒಗ್ಗಟ್ಟು ಪ್ರದರ್ಶಿಸೋಣ ಎಂಬುದು ಮೋದಿಯವರ ಕರೆ.

 

ಒಗ್ಗಟ್ಟಿನಲ್ಲಿ ಬಲವಿದೆ.

ಪ್ರಸ್ತುತ ಲಾಕ್ ಡೌನ್ ಜಾರಿಯಲ್ಲಿದ್ದರೂ ಅನೇಕರು ಬೀದಿ ಸುತ್ತುತ್ತಿದ್ದಾರೆ. ಇದರಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶಕ್ಕೆ ಹೊಡೆತ ನೀಡಿದೆ. ಹಾಗಾಗಿ ಎಲ್ಲರೂ ದೇಶಕ್ಕಾಗಿ ಒಂದಾಗಿದ್ದೇವೆ ಎಂಬುದನ್ನು ಸಾರಿ ಹೇಳಲು ಹಣತೆಗಳ ಮೂಲಕ ಪ್ರಯತ್ನಿಸೋಣ ಎಂಬುದು ಮೋದಿ ಅವರ ಕರೆಯಾಗಿದೆ. ಇದರಲ್ಲಿ ನಾವು ಫಲ ಕಾಣುತ್ತೇವೆ ಎಂಬುದೂ ಅವರ ವಿಶ್ವಾಸ.

ಮೋದಿಯವರ ಈ ಕರೆಯನ್ನು ಬೆಂಬಲಿಸಿ ಈಗಾಗಲೇ ಅಭಿಯಾನಗಳು ಆರಂಭವಾಗಿದೆ. ಮೋದಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಕರೆ ಬೆಂಬಲಿಸಿ ಪೋಸ್ಟ್’ಗಳನ್ನೂ ಹಾಕಲಾರಂಭಿಸಿದ್ದಾರೆ. ಈ ಸಪೋರ್ಟ್ ಮೋದಿ ಅಭಿಯಾನಕ್ಕೆ ಭಾರೀ ಬೆಂಬಲವೂ ವ್ಯಕ್ತವಾಗಿದೆ.

ವೀಡಿಯೋ ನೋಡಿ.. ಸಂದೇಶ ಕೇಳಿ..

Related posts