ಸಂಕಷ್ಟ ಕಾಲದಲ್ಲಿ ರಾಜಕೀಯ ಮರೆತು ಒಂದಾಗಿದ್ದಾರೆ ತ್ರಿಮೂರ್ತಿಗಳು. ಕೊರೋನಾ ಹಾವಳಿ ಸಂದರ್ಭದಲ್ಲಿ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಮಾಜಿ ಸಿಎಂಗಳು ಸಲಹೆ ನೀಡುತ್ತಿರುವುದು ಸೌಹಾರ್ದ ರಾಜಕೀಯಕ್ಕೆ ಸಾಕ್ಷಿ ಎಂಬಂತಿದೆ.
ಬೆಂಗಳೂರು: ಕೊರೋನಾ ರೌದ್ರಾವತಾರದಿಂದಾಗಿ ರಾಜ್ಯದ ಜನ ಪರದಾಡುವಂತಾಗಿದೆ. ಅದರಲ್ಲೂ ರೈತಾಪಿವರ್ಗ ತೀರಾ ಸಂಕಷ್ಟದಲ್ಲಿದೆ. ಇಂತಹಾ ಸಂಧಿಕಾಲದಲ್ಲಿ ಸರ್ಕಾರ ಕೂಡಾ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಪ್ರಸ್ತುತ ಸಂಕಷ್ಟ ಕಾಲದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಕೂಡಾ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿರುವುದು ಉತ್ತಮ ಬೆಳವಣಿಗೆ. ಸಿಎಂ ಯಡಿಯೂರಪ್ಪ ಕೂಡಾ ತನ್ನ ಶಾಸಕ ಮಿತ್ರರ ಸಲಹೆಗಳನ್ನು ಗೌರವಿಸಿ ರಾಜಕೀಯ ಪ್ರಬುದ್ಧತೆ ತೋರುತ್ತಾ ಎಲ್ಲರ ಮೆಚ್ಚುಗೆಗೂ ಪಾತ್ರರಾಗುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಿತ್ಯವೂ ಒಂದಿಲ್ಲೊಂದು ಸಲಹೆಗಳನ್ನು ನೀಡುತ್ತಿರುವ ಮಾಜಿ ಸಿಎಂ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಇಂದು ರೈತರ ಸಂಕಷ್ಟಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ. ಸಂಪೂರ್ಣ ಲಾಕ್ ಡೌನ್ ಆಗಿರುವುದರಿಂದ ವಾಹನ ಸಂಚಾರಗಳಿಲ್ಲದೆ ರೈತರ ಉತ್ಪನ್ನಗಳನ್ನು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೃಷಿ ಉತ್ಪನ್ನಗಳು ಹಾಳಾಗುತ್ತಿವೆ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಹಾಗಾಗಿ ರೈತರ ಉತ್ಪನ್ನಗಳನ್ನು ಸರ್ಕಾರವೇ ಖರೀದಿಸಿ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಪ್ಯಾಕೆಜ್ ಗಳನ್ನು ಬಿಡುಗಡೆ ಮಾಡಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ಮತ್ತೊಬ್ಬ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಟ್ವೀಟ್ ಕೂಡಾ ಸರ್ಕಾರಕ್ಕೆ ಸೂಕ್ತ ಸಲಹೆ ಎಂಬಂತೆ ಗಮನ ಕೇಂದ್ರೀಕರಿಸಿದೆ. “ಲಾಕ್ ಡೌನ್‌ನಿಂದಾಗಿ ಕಚ್ಛಾ ವಸ್ತುಗಳ ಪೂರೈಕೆ ಸ್ಥಗಿತಗೊಂಡು ರಾಜ್ಯದಾದ್ಯಂತ ನೇಕಾರರು ದುಡಿಮೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ನಿತ್ಯಬದುಕಿಗಾಗಿ ರೂ.5,000 ಮತ್ತು ದುಡಿಮೆ ಬಂಡವಾಳವಾಗಿ ರೂ.50,000 ನೀಡಬೇಕೆಂಬ ಅವರ ಬೇಡಿಕೆ ನ್ಯಾಯಬದ್ಧವಾಗಿದೆ. ಈ ಬಗ್ಗೆ ತಕ್ಷಣ ಗಮನಹರಿಸಿ ನೆರವಾಗಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಲಾಕ್ ಡೌನ್‌ನಿಂದಾಗಿ ಕಚ್ಛಾ ವಸ್ತುಗಳ ಪೂರೈಕೆ ಸ್ಥಗಿತಗೊಂಡು ರಾಜ್ಯದಾದ್ಯಂತ ನೇಕಾರರು ದುಡಿಮೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ.
ರಾಜ್ಯ ಸರ್ಕಾರ ನಿತ್ಯಬದುಕಿಗಾಗಿ ರೂ.೫,೦೦೦ ಮತ್ತು ದುಡಿಮೆ ಬಂಡವಾಳವಾಗಿ ರೂ.೫೦,೦೦೦ ನೀಡಬೇಕೆಂಬ ಅವರ ಬೇಡಿಕೆ ನ್ಯಾಯಬದ್ಧವಾಗಿದೆ. @CMofKarnataka ತಕ್ಷಣ ಗಮನಹರಿಸಿ ನೆರವಾಗಬೇಕು. pic.twitter.com/tp04Tqbv0u
— Siddaramaiah (@siddaramaiah) April 11, 2020