ಚೀನಾದಲ್ಲಿ ಕೊರೋನಾಗೆ ಸಾವನ್ನಪಿದ್ದು 3,300 ಮಂದಿ? ನಿಜವಾದ ಲೆಕ್ಕ ತಿಳಿದರೆ ಬೆಚ್ಚಿ ಬೀಳೋದು ಖಚಿತ

ಕೊರೋನಾ ಸೋಂಕಿಗೆ ಅಮೆರಿಕಾದಲ್ಲಿ 20,000, ಇಟಲಿಯಲ್ಲಿ 19,000, ಸ್ಪೇನ್’ನಲ್ಲಿ 16,000 ಮಂದಿ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಚೀನಾದಲ್ಲಿ 3,300 ಮಂದಿಯಷ್ಯೆ ಬಲಿಯಾಗಿದ್ದಾರೆಂಬ ಮಾತನ್ನು ಒಪ್ಪಲು ಸಾಧ್ಯವೇ?

ದೆಹಲಿ: ಮಾರಕ ಕೊರೋನಾ ವೈರಾಣು ಜಗತ್ತಿನಾದ್ಯಂತ ಆತಂಕ ಸೃಷ್ಟಿಸುತ್ತಿದೆ. ಇದನ್ನು ಪರೋಕ್ಷ ಬಯೋಲಾಜಿಕಲ್ ವಾರ್ ಎಂದೇ ಬಣ್ಣಿಸುತ್ತಿರುವವರು ಅನೇಕರು. ಆದರೂ ವಿಶ್ವದ ಬಲಾಢ್ಯ ರಾಷ್ಟ್ರಗಳು ಕೊರೋನಾ ಎದುರು ಮಣಿದಿದ್ದು, ಸಮರ ಸಾರಿರುವ ಚೀನಾವೇ ಈ ‘ಥರ್ಡ್ ವರ್ಲ್ಡ್ ವಾರ್’ನಲ್ಲಿ ಗೆದ್ದಿದೆ ಎಂದು ವಿವಿಧೆಡೆಯಿಂದ ವ್ಯಂಗ್ಯದ ಮಾತುಗಳು ಪ್ರತಿಧ್ವನಿಸುತ್ತಿವೆ.

ಈ ಮಧ್ಯೆ ಅಮೆರಿಕಾ, ಇಟಲಿ ಸಹಿತ ಹಲವು ದೇಶಗಳಲ್ಲಿ ಮಾರಣ ಹೋಮವೇ ನಡೆಯುತ್ತಿದ್ದು ಚೀನಾದಲ್ಲಿ ಮಾತ್ರ ಅಷ್ಟೇನೂ ಸಾವು ಸಂಭವಿಸಿಲ್ಲ ಎಂದು ಆ ದೇಶ ಬೀಗುತ್ತಿದೆ. ತನ್ನ ದೇಶದಲ್ಲಿ ಸುಮಾರು 3,300, ಮಂದಿ ಸಾವನ್ನಪ್ಪಿದ್ದಾರೆಂದು ಚೀನಾ ಸರ್ಕಾರ ಹೇಳಿದೆ. ಆದರೆ ಕೊರೋನಾ ಸೃಷ್ಟಿಯಾಗಿರುವ ದೇಶದಲ್ಲಿ ಅದೂ ಕೂಡಾ ಇನ್ನೂ ಔಷಧಿಯೇ ಇಲ್ಲದಿರುವಾಗ, ನಡೆದಿರುವ ಬೆಳವಣಿಗೆಯನ್ನು ಗಮನಿಸಿದಾಗ ಚೀನಾ ಸರ್ಕಾರದ ಹೇಳಿಕೆ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತವೆ.

ಇದನ್ನೂ ಓದಿ.. ಅಮೆರಿಕಾ ಅಕ್ಷರಶ: ಸ್ಮಾಶಾನ; ಕೊರೋನಾ ಸೋಂಕಿಗೆ 20 ಸಾವಿರಕ್ಕೂ ಹೆಚ್ಚು ಬಲಿ

ಪ್ರಸ್ತುತ ಜಗತ್ತಿನಾದ್ಯಂತ 17 ಲಕ್ಷಕ್ಕೂ ಹೆಚ್ಚು ಜನ ಕೋವಿಡ್-೧೯ ಸೋಂಕಿಗೊಳಗಾಗಿದ್ದು 1 ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಮೆರಿಕಾದಲ್ಲೇ 20 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇಟಲಿ, ಸ್ಪೇನ್ ದೇಶಗಳ್ಲಲೂ ಈ  ಸಂಖ್ಯೆ 16 ಸಾವಿರಕ್ಕೂ ಹೆಚ್ಚು. ಆದರೆ ಚೀನಾ ಹೇಳುತ್ತಿರುವಂತೆ ಆ ದೇಶದಲ್ಲಿ 80 ಸಾವಿರ ಜನರಿಗೆ ಸೋಂಕು ತಗುಲಿದ್ದು 3300 ಜನ ಸಾವನ್ನಪ್ಪಿದ್ದಾರೆ ಎಂದು.

ಆದರೆ ವಾಸ್ತವವೇ ಬೇರೆ. ಅಲ್ಲಿನ ಸರ್ಕಾರ ಹೇಳಿರುವ ಅಂಕಿ ಸಂಖ್ಯೆಗಳಿಗಿಂತ 10 ಪಟ್ಟು ಹೆಚ್ಚು ಜನರು ಸಾವನ್ನಪಿರಬಹುದೆಂದು ಅಂದಾಜಿಸಲಾಗುತ್ತಿದೆ.

ಆದರೆ ಜಗತ್ತಿನಲ್ಲಿ ಸದ್ದಾಗುತ್ತಿರುವ ಮಾಹಿತಿ ಚರ್ಚೆಗಷ್ಟೇ ಸೀಮಿತ. ವಾಸ್ತವ ಏನೇ ಆಗಿದ್ದರೂ ಚೀನಾ ಸರ್ಕಾರ ಘೋಷಿಸಿರುವ ಸಂಗತಿಯೇ ಅಂತಿಮವಾಗಿರುತ್ತಾದೆ. ಆದರೂ ಕೂಡಾ ಈ ಬಗ್ಗೆ ಡೈಲಿಮೇಲ್ ಮಾಡಿರುವ ವರದಿ ವ್ಯಾಪಕ ಚರ್ಚೆಗೂ ಎಡೆಮಾಡಿಕೊಟ್ಟದ್ದು ಚೀನಾ ಬಗ್ಗೆ ವಿಶ್ವ ಸಮುದಾಯದಲ್ಲಿ ಅನುಮಾನ ಹೆಚ್ಚುವಂತಾಗಿದೆ.

ಇದನ್ನೂ ಓದಿ.. ಬೆಂಗಳೂರು ಮಂದಿ ನಿರಾಳ.. ಹೊರಗಿನಿಂದ ಬಂದವರಲ್ಲೇ ಕೊರೋನಾ ಸೋಂಕು

 

Related posts