ದೆಹಲಿ: ಈ ಶತಮಾನದಲ್ಲೇ ಅತ್ಯಂತ ಭೀಕರತೆಗೆ ಸಾಕ್ಷಿಯಾಗುತ್ತಿರುವ ಕೊರೋನಾ ವಿದ್ಯಮಾನ ಪರಿಸ್ಥಿಗೆ ತಂದೊಡ್ಡಿದ ದೊಡ್ಡ ಸವಾಲು ಎಂಬಂತಿದೆ. ದೇಶದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದ್ದು ಸಾವಿನ ಸಂಖ್ಯೆಯೂ ಹೆಚ್ಚುತ್ತಲಿದೆ. ಹಾಗಾಗಿ ಪ್ರಸ್ತುತ ಜಾರಿಯಲ್ಲಿರುವ ಲಾಕ್’ಡೌನ್ ಮೇ 3ರ ನಂತರವೂ ಮುಂದುವರಿಸಬೇಕಾ? ಅಥವಾ ಪರ್ಯಾಯ ಕ್ರಮ ಅನುಸರಿಸಬೇಕಾ ಎಂಬ ಚಿಂತೆಯಲ್ಲಿದೆ ಮೋದಿ ಸರ್ಕಾರ.
ಮಾರಕ ಕೊರೋನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಮೇ 3ರವರೆಗೂ ಜಾರಿಯಲ್ಲಿರುವ ಲಾಕ್’ಡೌನನ್ನು ವಿಸ್ತರಿಸಬೇಕೆಂಬುದು ಹಲವು ರಾಜ್ಯಗಳ ಇಂಗಿತವಾಗಿದೆ. ಆದರೆ ಕೇಂದ್ರ ಸರ್ಕಾರ ಈ ವರೆಗೆ ಯಾವುದೇ ಸುಳಿವನ್ನು ನೀಡಿಲ್ಲ.
ಈ ನಡುವೆ ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ವಿಸ್ತರಣೆ ಮಾಡಬೇಕಾ? ಬೇಡವೇ? ಎಂಬ ಬಗ್ಗೆ ರಾಜ್ಯಗಳ ನಿಲುವಿನ ಬಗ್ಗೆ ಪ್ರಧಾನಿಯವರು ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಇದನ್ನೂ ಓದಿ.. ಕೊರೋನಾದಿಂದ ಕಂಗಾಲಾಯಿತೇ ಅಮೆರಿಕ? ಸೋಂಕಿತರಿಗೆ ವಿಷ ಪ್ರಾಶನ ಮಾಡಲು ಸೂಚಿಸಿದರೇ ಟ್ರಂಪ್?
ಈ ಮಧ್ಯೆ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ ರಾಜ್ಯಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಲಿದ್ದು ಆ ರಾಜ್ಯಗಳಲ್ಲಿ ಮತ್ತಷ್ಟು ದಿನಗಳ ಕಾಲ ಲಾಕ್’ಡೌನ್ ವಿಸ್ತರಿಸಬೇಕೆಂಬ ಸಲಹೆ ವ್ಯಕ್ತವಾಗುತ್ತಿದೆ. ದೆಹಲಿಯಲ್ಲೂ ಮೇ 16ರ ವರೆಗೆ ಲಾಕ್’ಡೌನ್ ವಿಸ್ತರಿಸುವಂತೆ ಅಲ್ಲಿನ ಅಧಿಕಾರಿಗಳು ಸಲಹೆ ಮುಂದಿಟ್ಟಿದ್ದಾರೆ.
ಇನ್ನೊಂದೆಡೆ ತೆಲಂಗಾಣದಲ್ಲಿ ಮೇ 7ರವರೆಗೂ ಪ್ರಸ್ತುತ ಇರುವ ಮಾರ್ಗಸೂಚಿ ಹಾಗೂ ನಿಯಮಗಳು ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ. ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಒಡಿಶಾ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ಮೇ ೩ ರ ನಂತರವೂ ಕಠಿಣ ಕ್ರಮ ಅನುಸರಿಸುವ ಬಗ್ಗೆ ಚಿಂತನೆ ನಡೆಸಿವೆ.
ಇದನ್ನೂ ಓದಿ.. ಜೂನ್ 30ರ ವರೆಗೂ ಮದುವೆ, ಸಭೆ ಸಮಾರಂಭ ನಿಷೇಧ..?