ಮನೆ ಮಂದಿಗೆಲ್ಲಾ ಕೊರೋನಾ ಸೋಂಕು; ಸಂಸದರು ಕಂಗಾಲು

ಇಡೀ ಜಗತ್ತೇ ಕೊರೋನಾದ ಕರಾಳ ನರ್ತನದಿಂದ ನಲುಗಿದೆ. ಅದರಲ್ಲೂ ಅನೇಕ ರಾಜ್ಯಗಳಲ್ಲಿ ಕೊರೋನಾದಿಂದಾಗಿ ಸಾವಿನ ಸರಣಿ ಮುಂದುವರಿದಿದೆ. ಇನ್ನೊಂದೆಡೆ ತನ್ನ ಮನೆ ಮಂದಿಗೆಲ್ಲ ಸೋಂಕು ಹರಡಿರುವುದರಿಂದಾಗಿ ಸಂಸದ ಕಂಗಾಲಾಗಿದ್ದಾರೆ.

ಹೈದರಾಬಾದ್: ಜಗತ್ತಿನಾದ್ಯಂತ ಕೊರೋನಾ ರೌದ್ರಾವತಾರ ಮುಂದುವರಿದಿದ್ದು ಭಾರತದಲ್ಲೂ ಐದಾರು ರಾಜ್ಯಗಳು ಈ ಸೋಂಕಿನಿಂದಾಗಿ ನಲುಗಿವೆ. ಅದರಲ್ಲೂ ಆಂದ್ರಪ್ರದೇಶದಲ್ಲಿ ನಿತ್ಯವೂ ಆತಂಕದ ಕ್ಷಣ. ಆಂದ್ರಪ್ರದೇಶದ ಸಂಸದನ ಮನೆಮಂದಿಯೆಲ್ಲಾ ಕೊರೋನಾ ಸೋಂಕಿಗೊಳಗಾಗಿದ್ದು ಈ ಬೆಳವಣಿಗೆಯಿಂದಾಗಿ ಅಲ್ಲಿನ ಸರ್ಕಾರ ಗಲಿಬಿಲಿಗೊಂಡಿದೆ.

ಕರ್ನೂಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವೈ.ಎಸ್.ಆರ್ ಕಾಂಗ್ರೆಸ್ ಸಂಸದ ಸಂಜೀವ್ ಕುಮಾರ್ ಪರಿವಾರ ಹಾಗೂ ಆಪ್ತವಲಯದ ಆರು ಮಂದಿಯಲ್ಲೋ ಕೊರೋನಾ ಸೋಂಕು ಪತ್ತೆಯಾಗಿದೆ. ಸಂಸದರ ತಂದೆಗೆ ಸೋಂಕು ಇರುವುದು ಗೊತ್ತಾಗಿದೆ. ಅದಾಗಲೇ ಪತ್ನಿ ಹಾಗೂ ಇಬ್ಬರು ಸಹೋದರರಲ್ಲೂ ಸೋಂಕು ದೃಢಪಟ್ಟಿದೆ. ಅಷ್ಟೇ ಅಲ್ಲ ಸಂಸದರ ಆಪ್ತರಿಬ್ಬರ ವರದಿಯೂ ಪಾಸಿಟಿವ್ ಎಂದು ಬಂದಿದೆ.

ಇದನ್ನೂ ಓದಿ.. 13 ರಾಜ್ಯಗಳಲ್ಲಿ ಲಾಕ್ ಡೌನ್ ವಿಸ್ತರಣೆ? ಮೋದಿ ತೀರ್ಮಾನದತ್ತ ಎಲ್ಲರ ಚಿತ್ತ

ಈ ಕುರಿತು ಪ್ರಕಿಕ್ರಿಸಿರುವ ಸಂಸದ ಸಂಜೀವ್ ಕುಮಾರ್, ತಮ್ಮ ಕುಟುಂಬದ ಸದಸ್ಯರಿಗೆ ಹೇಗೆ ಸೋಂಕು ಅಂಟಿಕೊಂಡಿದೆ ಎಂದು ತಿಳಿದಿಲ್ಲ ಎಂದಿದ್ದಾರೆ. ತಮ್ಮ ಕುಟುಂಬ ಸದಸ್ಯರು ಚಿಕಿತ್ಸೆ ಪಡೆಯುತ್ತಿದ್ದು ಯಾವುದೇ ಅಪಾಯವಿಲ್ಲ, ಎಲ್ಲರೂ ನಿಯಮಾನುಸಾರ ಪ್ರತ್ಯೇಕವಾಗಿಯೇ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಬ್ಲೀಘಿ ಪ್ರಕರಣ:

ಪ್ರಸ್ತುತ ಆಂಧ್ರಪ್ರದೇಶದಲ್ಲೂ ಕೊರೋನಾ ವೈರಾಣು ಆತಂಕಕಾರಿ ರೀತಿಯಲ್ಲಿ ಸೋಂಕಿಗೆ ಕಾರಣವಾಗುತ್ತಿದೆ. ಬಹಳಷ್ಟು ಮಂದಿ ತಬ್ಲೀಘಿಗಳಿಂದಾಗಿ ಅನೇಕ ಮಂದಿಯಲ್ಲಿ ಸೋಂಕು ಹರಡಿದೆ ಎಂದೂ ಹೇಳಲಾಗುತ್ತಿದೆ. ಭಾನುವಾರದವರೆಗಿನ ಅಂಕಿ ಅಂಶಗಳ ಪ್ರಕಾರ ಆಂದ್ರಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1097 ಕ್ಕೆ ಏರಿದೆ. ಅದರಲ್ಲೂ ಕರ್ನೂಲ್ ಜಿಲ್ಲೆಯಲ್ಲೇ 279 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೀಗ ಈ ಜಿಲ್ಲೆಯ ಸಂಸದರ ಕುಟುಂಬ ಸದಸ್ಯರೂ ಕೊರೋನಾದಿಂದ ಸಂಕಷ್ಟಕ್ಕೊಳಗಾಗಿದ್ದಾರೆ.

ಇದನ್ನೂ ಓದಿ.. ಚೀನಾಕ್ಕೆ ಸೆಡ್ಡು ಹೊಡೆದ ಭಾರತ; TikTok ಬದಲಿಗೆ ಬಂದೇ ಬಂತು ‘MITRAN’ App

Related posts