ಕೊರೋನಾ ಸಂಕಟವೇ..? ಕವಿತೆಗಳ ಸಾಲುಗಳೇ ಇಲ್ಲಿ ಚೈತನ್ಯ.. ಸಂಗೀತದ ನಿನಾದವೇ ಔಷಧ

ಮಂಗಳೂರು: ಕೊರೋನಾ ಸಂಕಟ ಇಡೀ ಜಗತ್ತನೇ ಆವರಿಸಿಕೊಂಡಿದೆ. ನಿಜಕ್ಕೂ ಇದು ಸಂಕಟ ಕಾಲ. ಕೊರೋನಾ ಹೊಡೆತದಿಂದ ಪಾರಾಗಲು ಲಾಕ್’ಡೌನ್ ಸಂಕೋಲೆ ಹೆಣೆದು ಜನರನ್ನು ಗೃಹಬಂಧನಕ್ಕೆ ತಳ್ಳಿರುವ ಈ ಪರಿಸ್ಥಿತಿಯಲ್ಲಿ ಪರಿಹಾರದ ಹುಡುಕಾಟ ಸಾಧ್ಯವೇ?
ಈ ಸಂಧಿಕಾಲದಲ್ಲೂ ನಿರ್ಮಲ ಮನಸುಗಳು ಒಂದಾಗಿವೆ.. ಸಾಲು ಸಾಲು ಕವಿತೆಗಳನ್ನು ಹರಿಯಬಿಟ್ಟಿವೆ.. ಕೊರೋನಾ ಬೀಸಿರುವ ಬಲೆಯಲ್ಲಿ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದ್ದರೂ ಅದರಿಂದ ಹೊರಬರಲು ಈ ಕವಿತೆಗಳ ಸಾಲು ಚೈತನ್ಯವಾಗಿವೆ. ಸಂಗೀತದ ನಿನಾದವೇ ಔಷಧಿಯಾಗಿವೆ..

ಹಾಡುಗಳನ್ನು ಕೇಳಲು ಇಮೇಜ್ ಕ್ಲಿಕ್ ಮಾಡಿ

ಸರಕಾರ ಈ ಕೊರೊನ ಸಂಕೋಲೆಯನ್ನು ತುಂಡರಿಸಲು ಲಾಕ್’ಡೌನ್ ಸೂತ್ರಕ್ಕೆ ಮೊರೆ ಹೋಗಿದ್ದರಿಂದಾಗಿ ಜನ ದಿಗ್ಬಂಧನಕ್ಕೊಳಗಾಗಿದ್ದಾರೆ.
ಮನೆಯೊಳಗಡೆ ಕೂತು ಜನ ವಿವಿಧ ಕಸರತ್ತುಗಳನ್ನು ಮಾಡಿ ಕಾಲ ಕಳೆಯುತ್ತಿದ್ದಾರೆ.ಇವೆಲ್ಲದರ ನಡುವೆ ಕೊಂಕಣಿ ಕವಿಗಳ ಮಸ್ತಕಕ್ಕೆ ಒಂದು ವಿಭಿನ್ನ ಆಲೋಚನೆ ಹೊಳೆಯಿತು. ಅದುವೇ ಕವನ ಸಂಕೋಲೆ (ಕವಿತಾ ಸಾಂಕಳ್). ದೂರದ ಇಸ್ರೇಲ್ ದೇಶದಿಂದ ಲೆನಾರ್ಡ್ ಫೆರ್ನಾಂಡಿಸ್ ವಾಮಂಜೂರು ಈ ಒಂದು ಐಡಿಯಾವನ್ನು ಫೇಸ್’ಬುಕ್ ಮಾಧ್ಯಮದಲ್ಲಿ ಹಂಚಿಕೊಂಡರು. ಒಂದೆರಡು ದಿನಗಳಲ್ಲಿ ಈ ಐಡಿಯಾವನ್ನು ಕವಿ ವಂದನೀಯ ಜೊ. ಸಿ. ಸಿದ್ಧಕಟ್ಟೆಕಾರ್ಯರೂಪಕ್ಕೆ ತಂದಿದ್ದಾರೆ.

ಕವನ ಸಂಕೋಲೆಯ ಜೋಡಣೆ

ಈ ಕವನ ಸಂಕೋಲೆಯು ಕೊಂಕಣಿ ಭಾಷೆಯ ಕವಿತೆಗಳಿಗೆ ಸಂಬಂಧಿಸಿದ್ದಾಗಿದೆ. ಈ ಕವನ ಸಂಕೋಲೆಯನ್ನು ಒ ಒಬ್ಬರು ಬೇರೊಬ್ಬ ಕವಿಯ ಕವಿತೆಯನ್ನು ವಾಚನದ ವಿಡಿಯೋ ಮಾಡಿ ಕವಿತಾ ಮಾಟೊವ್ ಗುಂಪಿನಲ್ಲಿ ಪೋಸ್ಟ್ ಮಾಡಿ ನಂತರ ಮೂವರಿಗೆ ಮುಂದಿನ ಕವನ ವಾಚನ ಮಾಡಲು ಪಂಥಾಹ್ವಾನ ನೀಡುವರು. ಹೀಗೆ ಈ ಸಂಕೋಲೆಗೆ ಕವನಗಳ ಕೊಂಡಿಗಳು ಜೋಡಣೆಯಾಗುತ್ತಾ ಹೋಗುವುವು. ಈ ಸಂಕೋಲೆಯು ಯಾವಾಗ ಮತ್ತು ಎಲ್ಲಿ ಕೊನೆಗೊಳ್ಳಲಿದೆ ಎಂಬುದನ್ನು ಪ್ರಸ್ತುತ ಹೇಳುವುದು ಅಸಾಧ್ಯ.

ಹಾಡುಗಳನ್ನು ಕೇಳಲು ಇಮೇಜ್ ಕ್ಲಿಕ್ ಮಾಡಿ

ಸಂಕೋಲೆಯ ಪ್ರಾರಂಭದಿಂದ ಇಂದಿನವರೆಗೆ…

ಕವಿತಾ ಮಾಟೊವ್ (ಕವಿತೆಗಳ ಚಪ್ಪರ) ಎಂಬ ಫೇಸ್’ಬುಕ್ ಗುಂಪಿನಲ್ಲಿ ಈ ಸಂಕೋಲೆಯು ಏಪ್ರಿಲ್ 12ರಂದು ಮೊದಲ್ಗೊಂಡಿತು. ವಂದನೀಯ ಜೊ. ಸಿ. ಸಿದ್ಧಕಟ್ಟೆ ಮೊದಲ ಕವನ ವಾಚನ ವಾಚಿಸಿ ನಂತರ ಮೂರು ವ್ಯಕ್ತಿಗಳಿಗೆ ಕವನ ವಾಚನ ಮಾಡಲು ಕರೆ ಕೊಟ್ಟರು. ಹೀಗೆ ಪ್ರಾರಂಭವಾದ ಸಂಕೋಲೆಯಲ್ಲಿ ಪ್ರಸ್ತುತ 130ಕ್ಕಿಂತ ಹೆಚ್ಚು ಮಂದಿ xx ಕವಿಗಳ ಕವಿತೆಗಳನ್ನು ವಾಚಿಸಿದ್ದಾರೆ. ಈ ಸಂಕೋಲೆಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಈ ವರೆಗೆ ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದಲ್ಲದೆ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದಲೂ ಜನ ಕವನ ವಾಚಿಸಿದ್ದಾರೆ. ಇಷ್ಟೇ ಅಲ್ಲದೆ ದೂರದ ಸಾಗರದಾಚೆಯ ಇಸ್ರೇಲ್, ಅಮೆರಿಕ, ಗಲ್ಫ್ ದೇಶಗಳಿಂದಲೂ ಜನ ಹುರುಪಿನಿಂದ ಈ ಸಂಕೋಲೆಗೆ ಕೊಂಡಿಗಳನ್ನು ಜೋಡಿಸಿದ್ದಾರೆ.

ಈ ಸಂಕೋಲೆಯಲ್ಲಿ ಕೊಂಕಣಿ ಭಾಷೆ ಮಾತನಾಡುವ ಎಲ್ಲಾ ಧರ್ಮದವರು ತಮ್ಮ ಸಾಹಿತ್ಯ ಪ್ರೇಮವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ಕವನ ಸಂಕೋಲೆಯು ಎಗ್ಗಿಲ್ಲದೆ ವೇಗವಾಗಿ ಬೆಳೆಯುತ್ತಾ ಇದೆ.

 

Related posts