ಬೆಂಗಳೂರು: ರಾಜ್ಯಕ್ಕೆ ಮತ್ತೆ ಮತ್ತೆ ಕೊರೋನಾಘಾತ ಸಂಭವಿಸುತ್ತಲೇ ಇದೆ. ಹೆಲ್ತ್ ಬುಲೆಟಿನ್ ರಾಜ್ಯದ ಜನತೆಗೆ ಮತ್ತೊಮ್ಮೆ ಶಾಕ್ ಕೊಟ್ಟಿದ್ದು, ಶುಕ್ರವಾರ ಸಂಜೆಯ ವರದಿಯಂತೆ ರಾಜ್ಯದಲ್ಲಿ ಹೊಸದಾಗಿ 48 ಪಾಸಿಟಿವ್ ಕೇಸ್’ಗಳು ಪತ್ತೆಯಾಗಿವೆ.
ಶುಕ್ರವಾರ ಸಂಜೆ 5 ಗಂಟೆವರೆಗಿನ ವರದಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ 48 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರು, ಉತ್ತರಕನ್ನಡ, ಬೆಳಗಾವಿ, ದಾವಣಗೆರೆ ಜಿಲ್ಲೆಗಳಿಂದ ಆತಂಕಕಾರಿ ವರದಿಗಳು ಬಂದಿವೆ.
- ದಾವಣಗೆರೆ – 14 ಕೇಸ್
- ಉತ್ತರಕನ್ನಡ – 12 ಕೇಸ್
- ಬೆಳಗಾವಿ – 11 ಕೇಸ್
- ಬೆಂಗಳೂರು ನಗರ – 7 ಕೇಸ್
- ಚಿತ್ರದುರ್ಗ – 3 ಕೇಸ್
- ಬಳ್ಳಾರಿ – 1 ಕೇಸ್
ಈ ಪೈಕಿ ಉತ್ತರಕನ್ನಡ ಜಿಲ್ಲೆ ಭಟ್ಕಳದಲ್ಲಿ ಒಬ್ಬ ರೋಗಿಯ ಸಂಪರ್ಕದಿಂದಾಗಿ ಬರೋಬ್ಬರಿ 12 ಮಂದಿಗೆ ಸೋಂಕು ಹರಡಿದೆ ಎನ್ನಲಾಗಿದೆ.
ಇದನ್ನೂ ಓದಿ.. ‘ಗೋಲ್ಡ್ ಮ್ಯಾನ್’ ಇನ್ನಿಲ್ಲ; ಸದ್ದಿಲ್ಲದೆ ನಡೆದ ಅಂತ್ಯಕ್ರಿಯೆ
ಈ ನಡುವೆ ಕರ್ನಾಟಕದಲ್ಲಿ ಈ ವರೆಗೂ 753 ಮಂದಿಯಲ್ಲಿ ಸೋಂಕು ಕಂಡುಬಂದಿದ್ದು ಈ ಪೈಕಿ 346 ಮಂದಿ ಚಿಕಿತ್ಸೆ ಗುಣಮುಖರಾಗಿದ್ದಾರೆ. 30 ಮಂದಿ ಸಾವಿಗೀಡಾಗಿದ್ದಾರೆ ಎಂದು ಇಲಾಖೆ ಶುಕ್ರವಾರ ಸಂಜೆ ಹೊರಡಿಸಿದ ಹೆಲ್ತ್ ಬುಲೆಟಿನ್’ನಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ.. ದೇಶವನ್ನೇ ಬೆಚ್ಚಿ ಬೀಳಿಸಿದ ವೀಡಿಯೋ.. ಭಾರತದಲ್ಲೂ ಅಮಾನವೀಯತೆ