ಬೆಂಗಳೂರು: ಹೊರ ರಾಜ್ಯಗಳಿಂದ ಬಂದವರು ಹಾಗೂ ವಿದೇಶದಿಂದ ಏರ್ ಲಿಫ್ಟ್’ಗೊಳಗಾದವರು ಕ್ವಾರಂಟೈನ್’ಗೆ ಒಳಗಾಗಲೇಬೇಕು. ಬೆಂಬಿಡದ ಬೇತಾಳನಂತೆ ಕಾಡುತ್ತಿರುವ ಕೋವಿಡ್-19 ವೈರಾಣು ಹರಡುವುದನ್ನು ತಡೆಯಲು ಇನ್ನಿಲ್ಲದ ಕಸರತ್ತು ಸಾಗಿದ್ದು, ಇದೀಗ ದೂರದೂರುಗಳಿಂದ ತಾಯ್ನಾಡಿಗೆ ಆಗಮಿಸುವವರೂ ಕ್ವಾರಂಟೈನ್ ಶಿಕ್ಷೆ ಅನುಭವಿಸುವುದು ಕಡ್ಡಾಯ. ಇದು ಶಿಕ್ಷೆಯಲ್ಲ ಬದಲಾಗಿ ಕಡ್ಡಾಯ ನಿಯಮ.
ವಿದೇಶದಲ್ಲಿದ್ದಾಗ ತಿಳಿದೋ ತಿಳಿಯದೆಯೋ ಕೊರೋನಾ ಸೋಂಕಿತರ ಸಂಪರ್ಕ ಹೊಂದಿದ್ದರೆ ಅವರಿಂದ ಮತ್ತೊಬ್ಬರಿಗೆ ಸೋಂಕು ಹರಡದಂತೆ ತಡೆಯುವ ಕಡ್ಡಾಯ ಕ್ರಮ ಇದಾಗಿದೆ. ಹಾಗಾಗಿ ವಿದೇಶಗಳಿಂದ ಆಗಮಿಸಿರುವ ಮಂದಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ.
ಇದನ್ನೂ ಓದಿ.. ಕರುನಾಡಿಗೆ ಸಮಾಧಾನ ತಂದ ಕೊರೋನಾ ವರದಿ
ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ ಸುಮಾರು 6,100 ಮಂದಿ ಕನ್ನಡಿಗರನ್ನು ಬೆಂಗಳೂರು ಸುತ್ತಮುತ್ತಲ 41 ಸ್ಟಾರ್ ಹೋಟೆಲ್’ಗಳಲ್ಲಿ ಹಾಗೂ 18 ಬಜೆಟ್ ಹೋಟೆಲ್’ಗಳಲ್ಲಿ ಕ್ವಾರಂಟೈನ್ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ ಎನ್ನಲಾಗಿದೆ. ದಂಪತಿ ಒಟ್ಟಾಗಿಯೇ ಕ್ವಾರಂಟೈನ್’ಗೊಳಪಡಲು ಅವಕಾಶ ಕಲ್ಪಿಸಲಾಗಿದೆ. ಈ ಹೋಟೆಲ್ ಹಾಗೂ ಊಟ-ತಿಂಡಿ ದರವನ್ನು ಸರ್ಕಾರವೇ ನಿಗದಿಪಡಿಸಿದ್ದು, ಎಲ್ಲಾ ವೆಚ್ಚಗಳನ್ನು ಕ್ವಾರಂಟೈನ್’ಗೊಳಗಾಗುವವರೇ ಭರಿಸಬೇಕಿದೆ. ಸರ್ಕಾರ ನಿಗದಿಪಡಿದ ದರ ಹೀಗಿದೆ.
ಫೈವ್ ಸ್ಟಾರ್ ಹೋಟೆಲ್:
- ತಿಂಡಿ-ಬಾಡಿಗೆ – 3 ಸಾವಿರ ರೂಪಾಯಿ
- ಮಧ್ಯಾಹ್ನದ ಊಟ – 550 ರೂಪಾಯಿ
- ರಾತ್ರಿಯ ಊಟ – 550 ರೂಪಾಯಿ
ಸ್ಟಾರ್ ಹೋಟೆಲ್:
- ತಿಂಡಿ-ಬಾಡಿಗೆ – 1,500 ರೂಪಾಯಿ .
- ಮಧ್ಯಾಹ್ನದ ಊಟ – 175 ರೂಪಾಯಿ
- ರಾತ್ರಿಯ ಊಟ – 175 ರೂಪಾಯಿ
- ಒಟ್ಟು 1 ದಿನಕ್ಕೆ – 1,850 ರೂ.
ಬಜೆಟ್ ಹೋಟೆಲ್:
- ಬಾಡಿಗೆ, ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಲ್ಲವೂ ಸೇರಿ 1,200 ರೂಪಾಯಿ .
ಇದನ್ನೂ ಓದಿ ರಾಜ್ಯದ ಖಜಾನೆಗೆ ಹಣದ ಹೊಳೆ; ಮದ್ಯ ಮಾರಾಟದಿಂದ ಬಂದ ಆದಾಯ ಎಷ್ಟು ಗೊತ್ತಾ?