ಖಡಕ್ ಅಧಿಕಾರಿ ಮಣಿವಣ್ಣನ್ ವರ್ಗಾವಣೆ; ಒತ್ತಡಕ್ಕೆ ಮಣಿಯಿತೇ ಸರ್ಕಾರ?

ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ರಾಜ್ಯ ಕಾರ್ಮಿಕ ಇಲಾಖೆಗೆ ಮೇಜರ್ ಸರ್ಜರಿಗೆ ಸರ್ಕಾರ ಮುಂದಾಗಿದೆ. ಕಾರ್ಮಿಕ ಇಲಾಖೆ ಮತ್ತು ವಾರ್ತಾ ಇಲಾಖೆಯಿಂದ ಪಿ.ಮಣಿವಣ್ಣನ್ ಅವರನ್ನು ಎತ್ತಂಗಡಿ ಮಾಡುವ ಮೂಲಕ ಈ ಪ್ರಕ್ರಿಯೆಗೆ ಮುನ್ನುಡಿ ಬರೆಯಲಾಗಿದೆ ಎನ್ನಲಾಗುತ್ತಿದೆ.

ಹಿರಿಯ ಐಎಎಸ್ ಅಧಿಕಾರಿ ಮಣಿವಣ್ಣನ್ ಅವರು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಖಡಕ್ ಅಧಿಕಾರಿ ಎಂದೇ ಗುರುತಾಗಿರುವ ಮಣಿವಣ್ಣನ್ ಅವರು ಯಾವ ರಾಜಕೀಯ ನಾಯಕರ ಒತ್ತಡಕ್ಕೂ ಜಗ್ಗದ ಸೇನಾನಿ ಎಂದೇ ಗುರುತಾದವರು. ಈ ಅಧಿಕಾರಿಯನ್ನು ಸರ್ಕಾರ ಈ ಕೊರೋನಾ ಸಂಕಷ್ಟ ಕಾಲದಲ್ಲೇ ಎತ್ತಂಗಡಿ ಮಾಡಿದೆ. ಅವರ ಜಾಗಕ್ಕೆ ಹಿರಿಯ ಐಎಎಸ್ ಅಧಿಕಾರಿ ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ.. ವಿದೇಶದಿಂದ ಬಂದವರಿಗೆ ಸ್ಟಾರ್ ಹೋಟೆಲ್’ಗಳಲ್ಲಿ ಕಡ್ಡಾಯ ಕ್ವಾರಂಟೈನ್; ಬಿಲ್ ಎಷ್ಟು ಗೊತ್ತಾ?

ಕಾರ್ಮಿಕ ಇಲಾಖೆಯಿಂದ ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಲಾಗಿದೆಯಾದರೂ ಅವರಿಗೆ ಪರ್ಯಾಯ ಸ್ಥಳವನ್ನು ನಿಯೋಜಿಸಿಲ್ಲ. ಹಾಗಾಗಿ ಈ ವರ್ಗಾವಣೆ ಕ್ರಮದ ಬಗ್ಗೆ ಅನೇಕಾನೇಕ ಅನುಮಾನಗಳು ಹುಟ್ಟಿಕೊಂಡಿವೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

ಲಾಕ್’ಡೌನ್ ಅವಧಿಯಲ್ಲಿ ಕಿಟ್’ಗಳ ವಿತರಣೆ ಹಾಗೂ ಪಾಸ್’ಗಳ ವಿತರಣೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶಕ್ಕೆ ಮಣಿವಣ್ಣನ್ ಗುರಿಯಾಗಿದ್ದರು. ಶಾಸಕರ ಬೇಡಿಕೆಗೆ ತರಾತುರಿಯಲ್ಲಿ ಸ್ಪಂಧಿಸುವ ಬದಲು ಕಾನೂನು ಚೌಕಟ್ಟಿನಲ್ಲಿ ಪ್ರಕ್ರಿಯೆ ಅನುಸರಿಸುತ್ತಿದ್ದರು. ಈ ಕಾರಣಕ್ಕಾಗಿಯೇ ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳೂ ಹರಿದಾಡುತ್ತಿವೆ.

ಇದನ್ನೂ ಓದಿ ರಾಜ್ಯದ ಖಜಾನೆಗೆ ಹಣದ ಹೊಳೆ; ಮದ್ಯ ಮಾರಾಟದಿಂದ ಬಂದ ಆದಾಯ ಎಷ್ಟು ಗೊತ್ತಾ? 

 

Related posts