‘ಮೋದಿ ಮನಿ’.. ಮತ್ತಷ್ಟು ವಲಯಕ್ಕೆ ಇನ್ನಷ್ಟು ಕೋಡುಗೆ.. ಕಾರ್ಮಿಕರಿಗೆ ಬಂಪರ್

ದೆಹಲಿ: ಕೊರೋನಾ ಸಂಕಟಕಾಲದಲ್ಲಿ ಅಸಹಾಯಕ ಜನರ ನೆರವಿಗೆ ಧಾವಿಸಿರುವ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ  20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ಘೋಷಿಸಿದ್ದರು. ಈ ಪ್ಯಾಕೇಜ್ ಬಗ್ಗೆ ವಿವರ ಒದಗಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಾತ್ತಷ್ಟು ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

ರೈತರು, ವಲಸೆ ಕಾರ್ಮಿಕರಿಗೆ ಬಂಪರ್ ಕೊಡುಗೆ ಪ್ರಕಟಿಸಿರುವ  ನಿರ್ಮಲಾ ಸೀತಾರಾಮನ್ ಅಭದ್ರತೆ ಕಾಡುತ್ತಿರುವ ಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ.

ವಲಸೆ ಕಾರ್ಮಿಕರ ಬಾಡಿಗೆ ಮನೆಗಳಿಗೆ ನಿರ್ಧಿಷ್ಟ ಬಾಡಿಗೆ ನಿಗದಿಗೆ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿರುವ ಅವರು, ಇನ್ನು ಮುಂದೆ ಒಂದು ಸಂಸ್ಥೆಯಲ್ಲಿ 10ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ಇ.ಎಸ್.ಐ. ಕಡ್ಡಾಯ ಎಂದು ಹೇಳಿದ್ದಾರೆ. ಜೊತೆಗೆ ಗ್ರಾಚ್ಯುಟಿ ಅವಧಿಯನ್ನು 5 ವರ್ಷಗಳಿಂದ 1 ವರ್ಷಕ್ಕೆ ಇಳಿಸಲಾಗಿದೆ ಎಂದೂ ಪ್ರಕಟಿಸಿದ್ದಾರೆ. ರಸ್ತೆ ಬದಿ ವ್ಯಾಪಾರ ಮಾಡುವವರಿಗೂ ಗಿಫ್ಟ್ ಸಿಕ್ಕಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2 ನೇ ಬಾರಿಗೆ ಪ್ರಕಟಿಸಿ ನಡೆಸಿದ ಸುದ್ದಿಗೋಷ್ಠಿಯ ಹೈಲೈಟ್ ಇಲ್ಲಿದೆ.

 

  • ಕಳೆದ 2 ತಿಂಗಳಲ್ಲಿ ನಗರದಲ್ಲಿರುವ ಬಡವರಿಗಾಗಿ 7,200 ಹೊಸ ಸ್ವ-ಸಹಾಯ ಸಂಘಗಳ ಸ್ಥಾಪನೆ.
  • ಮುಂದಿನ 2 ತಿಂಗಳು ಎಲ್ಲಾ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳ ವಿತರಣೆ.
  • ವಲಸೆ ಕಾರ್ಮಿಕರ ಬಾಡಿಗೆ ಮನೆಗಳಿಗೆ ಬಾಡಿಗೆ ನಿಗದಿ ಪಡಿಸಲು ರಾಜ್ಯ ಸರಕಾರಗಳಿಗೆ ಸೂಚನೆ
  • ಇನ್ನು ಮುಂದೆ ಒಂದು ಸಂಸ್ಥೆಯಲ್ಲಿ 10ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದರೆ ESI ಕಡ್ಡಾಯ.
  • ಗ್ರಾಚ್ಯುಟಿ ಅವಧಿಯನ್ನು 5 ವರ್ಷಗಳಿಂದ 1 ವರ್ಷಕ್ಕೆ ಇಳಿಕೆ
  • ಪಡಿತರ ಚೀಟಿ ಪೋರ್ಟಬಿಲಿಟಿ ಮಾಡಲು ಅವಕಾ‍ಶ. ಇದರಿಂದ 67 ಕೋಟಿ ಪಡಿತರದಾರರಿಗೆ ಪ್ರಯೋಜನ.
  • ರೈತರ ಬೆಳೆ ಸಾಲದ ಮೇಲಿನ ಕಂತು ಪಾವತಿ ಅಂತಿಮ ದಿನಾಂಕವನ್ನು ಮೇ 31ಕ್ಕೆ ವಿಸ್ತರಣೆ.
  • 25 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ವಿತರಣೆಗೆ ಕ್ರಮ
  • 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ವಿಶೇಷ ಸಾಲ ಸೌಲಭ್ಯ. 5 ಸಾವಿರ ಕೋಟಿ ರೂ. ನಿಗದಿ.
  • ಬೀದಿಬದಿ ವ್ಯಾಪಾರ ಪುನರಾರಂಭಿಸಲು 10 ಸಾವಿರ ರೂ.
  • 6 ರಿಂದ 18 ಲಕ್ಷ ರೂ.ವರೆಗಿನ ವೇತನದಾರರು, ಮಧ್ಯಮ ವರ್ಗದ ಜನರಿಗೆ ಸಾಲ ಸಬ್ಸಿಡಿ ಯೋಜನೆ
  • ಬುಡಕಟ್ಟು ಹಾಗೂ ಆದಿವಾಸಿಗಳಿಗೆ ಉದ್ಯೋಗ ಸೃಷ್ಟಿಗೆ ಕ್ರಮ.
  • ಮುದ್ರಾ ಶಿಶು ಸಾಲ ಯೋಜನೆಯಲ್ಲಿ 50 ಸಾವಿರ ರೂ.ವರೆಗೆ ಸೌಲಭ್ಯ.
  • ಗೃಹ ಸಾಲ ಸೌಲಭ್ಯಕ್ಕಾಗಿ 70 ಸಾವಿರ ಕೋಟಿ ರೂ. ಮೀಸಲು.
  • ಸಬ್ಸಿಡಿ ಯೋಜನೆ ಮುಂದಿನ ವರ್ಷದ ಮಾರ್ಚ್ 31ರವರೆಗೆ ವಿಸ್ತರಣೆ.

ಇದನ್ನೂ ಓದಿ.. ಮುತ್ತಪ್ಪ ರೈ ಬಗ್ಗೆ ಆಘಾತಕಾರಿ ಸುದ್ದಿ; ಆಸ್ಪತ್ರೆಯತ್ತ ಅಭಿಮಾನಿಗಳ ಚಿತ್ತ 

 

Related posts