ಕಿಲ್ಲರ್ ಕೊರೋನಾ ಹಾವಳಿ: ನಿಲ್ಲದ ಸಾವಿನ ಸರಣಿ..  ಜೊತೆಗೆ 28 ಸೋಂಕು ಕೇಸ್..

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ತಲ್ಲಣ. ಜೊತೆಗೆ ಕಡಲ ತಡಿಯ ಆಸ್ಪತ್ರೆಯಲ್ಲಿ ಮತ್ತೊಬ್ಬರು ಸೋಂಕಿತರು ಬಲಿಯಾಗಿದ್ದಾರೆ.

ಯಮಧೂತ ಕೊರೋನಾ ವೈರಸ್ ರಾಜ್ಯದಲ್ಲಿ ತಾಂಡವವಾಡುತ್ತಿದ್ದು, ಮಂಗಳೂರಿನಲ್ಲಂತೂ ವೈರಾಣುವಿನ ರುದ್ರ ನರ್ತನ ಸಾವಿನ ಸರಣಿಗೆ ಕಾರಣವಾಗುತ್ತಿದೆ. ಖಾಸಗಿ ಆಸ್ಪತ್ರೆಯೇ ಈ ಸಾವಿನ ನಿಗೂಢತೆಯ ಕೇಂದ್ರಬಿಂದುವಾಗಿದ್ದರೂ ಈ ಕೊರೋನಾ ರಹಸ್ಯವನ್ನು ಬೇಧಿಸಲು ಸಾಧ್ಯವಾಗಿಲ್ಲ. ಇತ್ತ ಬೆಂಗಳೂರಿನಲ್ಲೂ ಒಬ್ಬರು ಸೋನಿನ ಕಾರಣದಿಂದಾಗಿ ಸುವಿಗೀಡಾಗಿದ್ದಾರೆ.

ಈ ನಡುವೆ, ಕರ್ನಾಟಕದಲ್ಲಿ ಮತ್ತೆ 28 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 987ಕ್ಕೆ ಏರಿಕೆಯಾಗಿದೆ. ಮಂಗಳವಾರ ಸಂಜೆಯಿಂದ ಬುಧವಾರ ಸಂಜೆವರೆಗಿನ ಕೊರೋನಾ ವಿದ್ಯಮಾನ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಿದೆ.

  • ಬೀದರ್ – 7 ಹೊಸ  ಕೇಸ್
  • ಬೆಂಗಳೂರು ನಗರ – 5 ಹೊಸ  ಕೇಸ್ 
  • ಮಂಡ್ಯ – 5 ಹೊಸ  ಕೇಸ್
  •  ದಾವಣಗೆರೆ – 3 ಹೊಸ  ಕೇಸ್
  • ಕಲಬುರ್ಗಿ – 2 ಹೊಸ  ಕೇಸ್ 
  • ಗದಗ್ – 4 ಹೊಸ  ಕೇಸ್
  • ಬೆಳಗಾವಿ – 1 ಹೊಸ  ಕೇಸ್
  • ಬಾಗಲಕೋಟೆ – 1 ಹೊಸ  ಕೇಸ್

ರಾಜ್ಯದಲ್ಲಿ ಈ ವರೆಗೂ 987 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಈ ಪೈಕಿ 460 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 35 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

ಇದನ್ನೂ ಓದಿ.. ಮುತ್ತಪ್ಪ ರೈ ಬಗ್ಗೆ ಆಘಾತಕಾರಿ ಸುದ್ದಿ; ಆಸ್ಪತ್ರೆಯತ್ತ ಅಭಿಮಾನಿಗಳ ಚಿತ್ತ

 

 

Related posts