ದೆಹಲಿ: ಲಾಕ್ಡೌನ್ ಮತ್ತೆ ವಿಸ್ತರಣೆಯಾಗುತ್ತೋ ಎಂಬ ಕುತೂಹಲ ಇದೀಗ ತಣಿದಿದೆ. ಲಾಕ್’ಡೌನ್-3.0 ಮುಗಿದಿದ್ದು, ಹೊಸ ರೂಪ, ಹೊಸ ನಿಯಮದೊಂದಿಗೆ ಲಾಕ್’ಡೌನ್’ನ ನೂತನ ಅವತಾರವಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮೇ 31ರವರೆಗೆ ಪರಿಷ್ಕೃತ ಮಾರ್ಗಸೂಚಿ ಜಾರಿಯಲ್ಲಿರಲಿದೆ.
ಕಂಟೈನಮೆಂಟ್ ಝೋನ್ ಹೊರತುಪಡಿಸಿ ಸಾರಿಗೆ ವ್ಯವಸ್ಥೆ ಸುಗಮವಾಗಲಿದೆ. ಅಂತಾರಾಜ್ಯ ವಾಹನ ಸಂಚಾರಕ್ಕೆ ಅವಕಾಶಕ್ಕೆ ಇದೆ. ಆದರೆ ಎಲ್ಲೂ ಕೂಡಾ ರಾತ್ರಿ 7ರಿಂದ ಬೆಳಗ್ಗೆ 7 ಗಂಟೆ ವರೆಗೆ ಅಗತ್ಯ ಚಟುವಟಿಕೆ ಹೊರತುಪಡಿಸಿ ವೈಯಕ್ತಿಕ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಗರ್ಭಿಣಿಯರು, 10 ವರ್ಷದ ವಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯರು ಮನೆಯಿಂದ ಹೊರಬರುವಂತಿಲ್ಲ.
ವಿಮಾನಯಾನ, ಮೆಟ್ರೋ, ರೈಲು ಸಂಚಾರ ನಿರ್ಬಂಧ. ಥಿಯೇಟರ್, ಶಾಪಿಂಗ್ ಮಾಲ್, ಜಿಮ್ ಕೇಂದ್ರ, ಸ್ವಿಮಿಂಗ್ ಪೂಲ್, ಪಾರ್ಕ್, ಸಿನಿಮಾ ಹಾಲ್, ಬಾರ್, ಸಭಾಂಗಣ ಬಂದ್. ಶಾಲೆ, ಕಾಲೇಜು, ತರಬೇತಿ, ಶಿಕ್ಷಣ ಸಂಸ್ಥೆಗಳು ಬಂದ್. ಹೋಟೆಲ್ ಮತ್ತು ರೆಸ್ಟೋರೆಂಟ್’ಗಳಲ್ಲಿ ಪಾರ್ಸೆಲ್ ಸರ್ವಿಸ್ ಮಾತ್ರ. ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ.
ಒಂದರ್ಥದಲ್ಲಿ ಮುಕ್ತ ಬದುಕಿಗೆ ಅವಕಾಶ ಸಿಕ್ಕಿದೆಯಾದರೂ ಪ್ರತಿಯೊಬ್ಬರೂ ಆರೋಗ್ಯ ಸೇತು ಆ್ಯಪ್ ಬಳಸಲೇಬೇಕಿದೆ. ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ, ಪಾನ್, ಗುಟ್ಕಾ , ತುಂಬಾಕು ಸೇವನೆ ಮಾಡುವಂತಿಲ್ಲ, ಉಗುಳುವಂತಿಲ್ಲ. ಮದುವೆ ಇನ್ನಿತರ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಜನರು ಹಾಗೂ ಅಂತ್ಯಕ್ರಿಯೆಗಳ ಸಂದರ್ಭದಲ್ಲಿ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.
ಅಂಗಡಿಗಳಲ್ಲಿ ಐವರಿಗಿಂತ ಹೆಚ್ಚು ಜನ ಕೆಲಸ ಮಾಡುವಂತಿಲ್ಲ. ವರ್ಕ್ ಫ್ರಮ್ ಹೋಮ್ ಹಾಗೂ ಶಿಫ್ಟ್ ಗಳಲ್ಲಿ ಕೆಲಸಕ್ಕೆ ಪ್ರಾದನ್ಯತೆ ನೀಡಬೇಕಿದೆ.
ಇದನ್ನೂ ಓದಿ.. ಆನ್ ಲೈನ್ ತರಗತಿಗಳಿಗೆ ಕೇಂದ್ರ ಸರ್ಕಾರ ಒತ್ತು; 100 ವಿವಿಗಳ ಆನ್ ಲೈನ್ ಕೋರ್ಸ್’ಗಳಿಗೆ ಅಸ್ತು