ದೆಹಲಿ: ಮಹತ್ವಾಕಾಂಕ್ಷೆಯ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆ ಮುಂದಿನ ವರ್ಷ ಮಾರ್ಚ್ 31ರೊಳಗೆ ದೇಶಾದ್ಯಂತ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ.
ಒಡಿಶಾ, ಸಿಕ್ಕಿಂ ಮತ್ತು ಮಿಜೋರಾಂ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಯೋಜನೆಗೆ ಸೇರ್ಪಡೆಯಾದ ನಂತರ, ಇದೀಗ 20 ರಾಜ್ಯಗಳು ಐಎಂಪಿಡಿಎಸ್ ಗೆ ಸಂಪರ್ಕ ಹೊಂದಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
. ಈ ಯೋಜನೆಯನ್ನು 2021ರ ಮಾರ್ಚ್ 31 ರೊಳಗೆ ದೇಶಾದ್ಯಂತ ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ 2020ರ ಆಗಸ್ಟ್ 1 ರೊಳಗೆ ಉತ್ತರಾಖಂಡ್, ನಾಗಾಲ್ಯಾಂಡ್ ಮತ್ತು ಮಣಿಪುರವನ್ನು ಸಂಪರ್ಕಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
31 मार्च 2021 तक #वन_नेशन_वन_राशनकार्ड योजना को पूरे देश में लागू करना है। इसी कड़ी में 1 अगस्त 2020 तक उत्तराखंड, नागालैंड और मणिपुर को इससे जोड़ने के लिए आवश्यक कदम उठाए जा रहे है। 2/2 @narendramodi @tsrawatbjp @Neiphiu_Rio @NBirenSingh
— Ram Vilas Paswan (@irvpaswan) June 1, 2020
ಇದನ್ನೂ ಓದಿ.. ಜೂನ್ 19ರಂದು ರಾಜ್ಯಸಭೆ ಚುನಾವಣೆ