ಸಂಶೋಧಕರ ಯಶೋಗಾಥೆ; ಕಿಲ್ಲರ್ ಕೊರೋನಾಗೆ ಔಷಧಿ ಸಿದ್ದ

ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕಿಲ್ಲರ್ ಕೊರೋನಾವನ್ನು ಮಣಿಸಲು ಔಷಧಿ ಸಿದ್ದವಾಗಿದೆ. ಈ ಔಷಧಿಗೆ ರಷ್ಯಾ ಸರ್ಕಾರ ಅನುಮೋದನೆ ನೀಡಿದ್ದು ಜೂನ್ 11ರಿಂದ ಬಳಕೆಗೆ ನಿರ್ಧರಿಸಲಾಗಿದೆ.

ಕೊರೋನಾ ವೈರಾಣು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದ್ದು ವಿಶ್ವದ ಹಲವು ರಾಷ್ಟ್ರಗಳನ್ನು ಬಿಗಿ ಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಲಸಿಕೆಯೇ ಇಲ್ಲದ ಈ ವೈರಾಣು ಹಾವಳಿ ಎದುರಿಸಲು ಎಲ್ಲಾ ರಾಷ್ಟ್ರಗಳು ವಿಫಲವಾಗಿವೆ. ಭೀಕರ ಮಾರಣ ಹೋಮವನ್ನೇ ನಡೆಸುತ್ತಿರುವ ಕೋವಿಡ್-19 ವೈರಸ್ ಸೋಂಕು ತಡೆಯಲು ಲಸಿಕೆ ತಯಾರಿ ನಡೆದಿತ್ತಾದರೂ ಅದ್ಯಾವುದೂ ಪರಿಣಾಮ ಬೀರಿಲ್ಲ. ಇದೀಗ ಈ ವಿಚಾರದಲ್ಲಿ ರಷ್ಯಾದ ಸಂಶೋಧಕರು ಯಶೋಗಾಥೆ ಬರೆದಿದ್ದಾರೆ.

‘ಅವಿಫಾವಿರ್’ ಹೆಸರಿನ ಔಷಧಿ ಕೋವಿಡ್-19 ವೈರಾಣು ನಿಗ್ರಹದಲ್ಲಿ ಮಹತ್ವಪೂರ್ಣ ಕೆಲಸ ಮಾಡಲಿದ್ದು, ಪ್ರತೀ ತಿಂಗಳು 60 ಸಾವಿರ ಮಂದಿಗೆ ಈ ಔಷಧಿ ಪೂರೈಸಲು ಔಷಧಿ ತಯಾರಿಕಾ ಕಂಪೆನಿ ಸಿದ್ಧತೆ ನಡೆಸಿದೆ.

1990ರಲ್ಲಿ ಜಪಾನ್ ಮೂಲದ ಕಂಪೆನಿ ‘ಪಾವಿಪಿರವಿರ್’ ಎಂಬ ಔಷಧಿಯನ್ನು ತಯಾರಿಸಿತ್ತು. ಸುಮಾರು 3 ದಶಕಗಳ ಹಿಂದೆಯೇ ತಯಾರಾಗಿದ್ದ ಈ ಔಷಧವನ್ನು ಇದೀಗ ರಷ್ಯಾದ ಸಂಶೋಧಕರು ಕೋವಿಡ್-19 ವೀರಾಣು ನಿಗ್ರಹಕ್ಕಾಗಿ ಅಭಿವೃದ್ಧಿಪಡಿಸಿ ವಿಶ್ವದ ಗಮನಸೆಳೆದಿದ್ದಾರೆ.  ಈಗಾಗಲೇ ಸುಮಾರು 330 ಮಂದಿ ಮೇಲೆ ಈ ಔಷಧಿ ಪ್ರಯೋಗ ನಡೆಸಿ ಯಶಸ್ವಿಯಾಗಿದೆ. ಹಾಗಾಗಿ ಈ ಔಷಧಿ ನೀಡಲು ರಷ್ಯಾ ಸರ್ಕಾರ ಅನುಮಾದನೆ ನೀಡಿದೆ ಎನ್ನಾಲಾಗಿದೆ.

ಇದನ್ನೂ ಓದಿ.. ಬದಲಾಗಲಿದೆ ರೇಷನ್ ಕಾರ್ಡ್.. 2021ರ ಮಾರ್ಚ್ 31 ರೊಳಗೆ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಜಾರಿ 

 

Related posts