ಬೆಂಗಳೂರು: ಕರುನಾಡಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು ಗುರುವಾರ ಒಂದೇ ದಿನ 12 ಮಂದಿ ಸೋಂಕಿಗೆ ಬಲಿಯಾಗಿರುವ ಬೆಳವಣಿಗೆ ರಾಜ್ಯದ ಜನರಲ್ಲಿ ಆತಂಕ ತಂದಿದೆ. ಕೋವಿಡ್-19 ವೈರಾಣು ಮರಣ ಮೃದಂಗ ಭಾರಿಸುತ್ತಿದ್ದು ಗುರುವಾರ ಸಂಜೆಯ ಹೊತ್ತಿಗೆ ಹೊಸದಾಗಿ 210 ಸೋಂಕಿನ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ವೈದ್ಯಕೀಯ ರಂಗವೂ ಸವಾಲನ್ನೇ ಸ್ವೀಕರಿಸುವಂತಾಯಿತು.
ಬಳ್ಳಾರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ 48 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದರೆ ದಕ್ಷಿಣ ಕನ್ನಡದಲ್ಲಿ 23, ರಾಮನಗರದಲ್ಲಿ 21 ಹೊಸ ಕೇಸ್’ಗಳು ವರದಿಯಾಗಿವೆ. ಬೆಂಗಳೂರು ನಗರದಲ್ಲಿ 17, ಯಾದಗಿರಿಯಲ್ಲಿ 8, ಮಂಡ್ಯದಲ್ಲಿ 7, ಬೀದರ್ ನಲ್ಲಿ 6, ಗದಗದಲ್ಲಿ 5 ಹೊಸ ಕೇಸ್’ಗಳು ಈ ಪಟ್ಟಿಯನ್ನು ಸೇರಿವೆ. ರಾಯಚೂರು, ಹಾಸನ, ಧಾರವಾಡದಲ್ಲಿ ತಲಾ 4, ದಾವಣಗೆರೆ, ಚಿಕ್ಕಮಗಳೂರಿನಲ್ಲಿ ತಲಾ 3, ವಿಜಯಪುರ, ಉತ್ತರ ಕನ್ನಡ , ಮೈಸೂರಿನಲ್ಲಿ ತಲಾ 2, ಬಾಗಲಕೋಟೆ, ಕೊಪ್ಪಳ, ಶಿವಮೊಗ್ಗದಲ್ಲಿ ತಲಾ 1 ಪ್ರಕರಣ ವರದಿಯಾಗಿವೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.
ಈ ನಡುವೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 114ಕ್ಕೇರಿಕೆಯಾಗಿದ್ದು, ಸೋಂಕಿತರ ಸಂಖ್ಯೆಯೂ 7944 ಕ್ಕೆ ಏರಿಕೆಯಾಗಿದೆ.
ಸಂಜೆಯ ಪತ್ರಿಕಾ ಪ್ರಕಟಣೆ 18/06/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.https://t.co/n0TB9Hrz78@BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/vdSb7TPv5x— K'taka Health Dept (@DHFWKA) June 18, 2020