ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡವೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.
ಗಾಂಧೀನಗರದಲ್ಲಿ ಬಹುಮಹಡಿ ಕಟ್ಟಡವೊಂದಕ್ಕೆ ತಳಪಾಯ ನಿರ್ಮಿಸಲು ನೆಲವನ್ನು ಅಗೆಯಲಾಗಿದೆ. ಅದರ ಪಕ್ಕದಲ್ಲೇ ಮತ್ತೊಂದು ಬೃಹತ್ ಕಟ್ಟಡ ನಿರ್ಮಾಣ ಹಂತದಲ್ಲಿತ್ತು. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಇನ್ನೇನು ಕೆಲ ಸಮಯದಲ್ಲೇ ಈ ಕಟ್ಟಡ ಸೇವೆಗೆ ಸಮರ್ಪಣೆಯಾಗಬೇಕಿತ್ತು. ಈ ಬೃಹತ್ ಕಟ್ಟಡ ಇದ್ದಕ್ಕಿದ್ದಂತೆ ನೆಲಕ್ಕುರುರುಳಿದೆ.
ಈ ಭಯಾನಕ ದೃಶ್ಯ ಮೊಬೈಲ್’ನಲ್ಲಿ ಸೆರೆಯಾಗಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.facebook.com/UdayaNewsUpdate/videos/3629394847090671/?eid=ARAvLTnKSQLviv6c3ALFwDgdSyuZPNur099JKvH3AMlqCEF8Op81-0pl_IZ4uo9laauQlNGKt-c-ZsDH