ಕಡಲ ತೀರದಲ್ಲಿ ಸುನಾಮಿ ರೀತಿ ಅಲೆ? ಪ್ರವಾಹದ ಸುಳಿಯಲ್ಲಿ ಸಿಲುಕಿದ ಜನ.. ಭಾಯಾನಕ ದೃಶ್ಯ

ಮಂಗಳೂರು: ಮಳೆಗಾಲ ಸಂದರ್ಭದಲ್ಲಿ  ಕಡಲು ಕೊರೆತದ ಘಟನೆಗಳು ಸಂಭವಿಸುತ್ತಿದೆ. ಸಮುದ್ರ ತೀರದ ಪ್ರದೇಶಗಳ ಜನರು ಆತಂಕದಲ್ಲಿ ದಿನಕಳೆಯುವಂತಾಗಿದೆ.

ಈ ನಡುವೆ ಕಡಲಿನ ಅಬ್ಬರ ಜೋರಾಗಿ ಸುನಾಮಿ ರೀತಿ ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು ಜನ ಭಯಭೀತರಾಗಿದ್ದಾರೆ.

ಈ ಮಧ್ಯೆ ಕಡಲ ತೀರದಲ್ಲಿ ಎದ್ದಿರುವ ಅಲೆಯೊಂದು ಸುನಾಮಿ ರೀತಿಯ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ದೃಶ್ಯ ಭಯಾನಕ ಎಂಬಂತಿದೆ.

ಸುನಾಮಿಯಂತೆ ದೈತ್ಯ ಅಲೆಗಳು ಅಪ್ಪಳಿಸಿದ್ದು ಪ್ರವಾಹ ರೀತಿಯಲ್ಲಿ ಸಮುದ್ರದ ನೀರು ತೀರದ ನಿವಾಸಿಗಳ ಮನೆಯಂಗಳಗಲ್ಲಿ ಹರಿದಿದೆ. ಹಲವಾರು ಈ ಪ್ರವಾಹದ ಸುಳಿಯಲ್ಲಿ ಸಿಲುಕಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಮಲಬಾರ್ ತೀರದಲ್ಲಿನ ದೃಶ್ಯ ಎನ್ನಲಾಗುತ್ತಿದೆ.

ಮಂಗಳೂರು ಹೊರವಲಯದ ಮುಲ್ಕಿ, ಹೆಜಮಾಡಿ, ಉಡುಪಿ ಜಿಲ್ಲೆಯ ಹಲವೆಡೆ ಅರಬೀ ಸಮುದ್ರದಲ್ಲಿ ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಈ ಸನ್ನಿವೇಶಗಳು ಆತಂಕ ಸೃಷ್ಟಿಸಿವೆ.

ಇದನ್ನೋ ಓದಿ.. ನಟಿ ಸುಧಾರಾಣಿಗೆ ವೈದ್ಯರ ರಗಳೆ; ಆಸ್ಪತ್ರಗೆ ಎಚ್ಚರಿಕೆ ನೀಡಿದ ಸರ್ಕಾರ 

 

Related posts